.
{ ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ಕೆಳಗೆ ಉತ್ತರವನ್ನ ಬಿಳಿ ಬಣ್ಣದಲ್ಲಿ ಬರೆಯಲಾಗಿದೆ. ಪರೀಕ್ಷಾರ್ಥಿ ತಾನು ಉತ್ತರವನ್ನ ಮೊದಲು ಊಹೆ ಮಾಡಿ ತದನಂತರ ಪ್ರತಿ ಪ್ರಶ್ನೆಯ ಕೆಳಗೆ ಕಾಣುವ ಉತ್ತರ ಅನ್ನೋ ಪದದ ಪ್ರಾರಂಭದಲ್ಲಿ Left Click Cursor ಅನ್ನ ಇಟ್ಟು ಅದೇ Left Click Buttonಅನ್ನ Press ಮಾಡಿ ಹಿಡಿದು ಆ ಇಡೀ ಸಾಲನ್ನ Select ಮಾಡಿದರೆ ಆಗ ಆ ಪ್ರಶ್ನೆಗೆ ಉತ್ತರ ಪರೀಕ್ಷಾರ್ಥಿಯ ಮುಂದೆ ಪ್ರತ್ಯಕ್ಷ !! }
KAS ಪೂರ್ವಭಾವಿ ಪರೀಕ್ಷೆ : 2008
ಸಾಮಾನ್ಯ ಅಧ್ಯಯನ
ಪರೀಕ್ಷೆ ನಡೆದ ದಿನಾಂಕ : ..................
ಪ್ರಶ್ನೆ ಪತ್ರಿಕೆ ಸರಣಿ : B
-----
ಬೆರಳಚ್ಚು ಸಹಕಾರ :ಪರಶುರಾಮ್ ಕೆ.
-----
01. ಇಸ್ರೋ ಪ್ರಸ್ತಾಪಿಸಿರುವ ಚಂದ್ರ ಪ್ರಯಾಣದ ಯೋಜನೆ ಚಂದ್ರಯಾನ-1 ಇದನ್ನು ಆರಂಭಿಸಲು ಅನುಸೂಚಿಸಲಾಗಿರುವ ವರ್ಷ
ಎ. 2008
ಬಿ. 2009
ಸಿ. 2010
ಡಿ. 2012
ಉತ್ತರ:
02. ಕರ್ನಾಟಕ ಸರ್ಕಾರವು ರಾಜ್ಯದಿಂದ ಹೊರಗೆ ಒಂದು ಉಷ್ಣವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಇತ್ತೀಚೆಗೆ ನಿರ್ಧರಿಸಿದೆ. ಹೀಗೆ ಉಷ್ಣವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಪ್ರಸ್ತಾವಿತವಾಗಿರುವ ರಾಜ್ಯ ಯಾವುವು ?
ಎ. ಜಾರ್ಖಂಡ್
ಬಿ. ಆಂದ್ರಪ್ರದೇಶ
ಸಿ. ಛತ್ತೀಸ್ ಘರ್
ಡಿ. ಗೋವಾ
ಉತ್ತರ:
03. ವೇದಸಾಹಿತ್ಯದ ನಾರಶಾಂಸಿಗಳು ಯಾವುದಕ್ಕೆ ಸಂಬಂಧಿಸಿವೆ ?
ಎ. ಭಾವಗೀತಾತ್ಮಕ ಪ್ರಣಯ ಪದ್ಯಗಳು
ಬಿ. ಚಾರಿತ್ರಿಕ ಪ್ರಜ್ಞೆಯ ಅಭಿವ್ಯಕ್ತಿಗಳು
ಸಿ. ಸಾಮವೇದದ ಸಂಗೀತಾತ್ಮಕ ರಚನೆಗಳು
ಡಿ. ಮೌಖಿಕ ಪರಂಪರೆಯಲ್ಲಿ ಸಾಗಿಬಂದ ಗಾದೆಗಳು
ಉತ್ತರ:
04. ನಿಶ್ಚಿತ ಹೇಳಿಕೆ 'A' ಯನ್ನು ಕಾರಣ 'R' ವಿವರಿಸಬೇಕಿದೆ. ಇವುಗಳ ಬಗ್ಗೆ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ತಿಳಿಸಿರಿ.
A. ಹರಪ್ಪಾ ಲಿಪಿಯನ್ನು ಇದುವರೆವಿಗೂ ಯಶಸ್ವಿಯಾಗಿ ಬಿಡಿಸಲಾಗಿಲ್ಲ.
R. ಅವರು ಬಲದಿಂದ ಎಡಕ್ಕೆ ಬರೆಯುತ್ತಿದ್ದರು.
ಎ. A ಮತ್ತು R ಎರಡೂ ಸರಿ. A ಗೆ R ಸರಿಯಾದ ಕಾರಣ
ಬಿ. A ಮತ್ತು R ಎರಡೂ ಸರಿ ಆದರೆ A ಗೆ R ಸರಿಯಾದ ಕಾರಣವಲ್ಲ
ಸಿ. A ಸರಿಇದೆ ಆದರೆ R ತಪ್ಪು
ಡಿ. A ಮತ್ತು R ಎರಡೂ ತಪ್ಪು
ಉತ್ತರ:
05. ನಿಶ್ಚಿತ ಹೇಳಿಕೆ 'A' ಯನ್ನು ಕಾರಣ 'R' ವಿವರಿಸಬೇಕಿದೆ. ಇವುಗಳ ಬಗ್ಗೆ ಕೆಳಗಿನ ಯಾವ ವಿವರಣೆಗಳು ಸರಿಯಾಗಿವೆ ತಿಳಿಸಿರಿ.
A. ವಿಜಯ ನಗರ ಎಂದರೆ ವಿಜಯದ ನಗರ ಎಂದು ಪದ ಅರ್ಥ
R. ಈ ಕಾಲವು ನಗರದ ಪುನರುಜ್ಜೀವನ ಮತ್ತು ಅಭಿವೃದ್ಧಿಯ ಕಾಲವಾಗಿತ್ತು
ಎ. A ಮತ್ತು R ಎರಡೂ ಸರಿ. A ಗೆ R ಸರಿಯಾದ ಕಾರಣ
ಬಿ. A ಮತ್ತು R ಎರಡೂ ಸರಿ ಆದರೆ A ಗೆ R ಸರಿಯಾದ ಕಾರಣವಲ್ಲ
ಸಿ. A ಸರಿಇದೆ ಆದರೆ R ತಪ್ಪು
ಡಿ. A ಮತ್ತು R ಎರಡೂ ತಪ್ಪು
06. ಮೊಘಲರ ಮನ್ ಸಬ್ದಾರಿ ವ್ಯವಸ್ಥೆಯು
ಎ. ನಾಗರೀಕ ಹಾಗೂ ಸೇವಾ ವ್ಯವಹಾರಗಳ ಶ್ರೇಣಿ ಪದ್ದತಿ
ಬಿ. ಭೂಮಿಯ ಕೊಡುಗೆ, ಇದರಿಂದಾಗಿ ಜಮೀನ್ದಾರಿ ವ್ಯವಸ್ಥೆಯ ನಿರ್ಮಾಣ
ಸಿ. ರಾಜ ಕುಟುಂಬದ ಸದಸ್ಯರು ಆಚರಿಸುತ್ತಿದ್ದ ಒಂದು ಉತ್ಸವ
ಡಿ. ಅಕ್ಬರನು ಧಾರ್ಮಿಕ ಕ್ಷೇತ್ರದಲ್ಲಿ ಜಾರಿಗೆ ತಂದ ಸುಧಾರಣೆಗಳು
ಉತ್ತರ:
07. ನಿಶ್ಚಿತ 'A' ಹೇಳಿಕೆಯನ್ನು ಕಾರಣ 'R' ವಿವರಿಸಬೇಕಿದೆ. ಇವುಗಳ ಬಗ್ಗೆ ಕೆಳಗಿನ ಯಾವ ವಿವರಣೆಗಳು ಸರಿಯಾಗಿವೆ ತಿಳಿಸಿರಿ.
A. ಅಶೋಕನು ತನ್ನನ್ನು ದೇವನಾಂಪ್ರಿಯ ಪ್ರಿಯದರ್ಶಿ ಎಂದು ಕರೆದುಕೊಂಡಿದ್ದ
R. ಈತನು ಶ್ರೀಲಂಕಾದ ದೇವನಾಂಪ್ರಿಯ ತಿಸ್ಸ ಎಂಬ ರಾಜನಿಂದ ಸ್ಪೂರ್ತಿ ಪಡೆದಿದ್ದ
ಎ. A ಮತ್ತು R ಎರಡೂ ಸರಿ. A ಗೆ R ಸರಿಯಾದ ಕಾರಣ
ಬಿ. A ಮತ್ತು R ಎರಡೂ ಸರಿ ಆದರೆ A ಗೆ R ಸರಿಯಾದ ಕಾರಣವಲ್ಲ
ಸಿ. A ಸರಿಇದೆ ಆದರೆ R ತಪ್ಪು
ಡಿ. A ಮತ್ತು R ಎರಡೂ ತಪ್ಪು
08. ಪ್ರಸಿದ್ದವಾದ ಅಲಹಾಬಾದ್ ಪ್ರಶಸ್ತಿಯನ್ನು ರಚಿಸಿದವರು ಯಾರು ?
ಎ. ರವಿಕೀರ್ತಿ
ಬಿ. ಸಮುದ್ರಗುಪ್ತ
ಸಿ. ಕೌಟಿಲ್ಯ
ಡಿ. ಹರಿಸೇನ
ಉತ್ತರ:
09. ಆರಂಭದ ತಮಿಳು ಸಾಹಿತ್ಯವನ್ನು ಸಂಗಂ ಸಾಹಿತ್ಯ ಎಂದೂ ಕರೆಯುತ್ತಾರೆ ಕಾರಣವೇನು ?
ಎ. ಇದನ್ನು ಬೌದ್ಧ ಸಂಘದ ಸದಸ್ಯರು ರಚಿಸಿದ್ದರು
ಬಿ. ಇದು ಸಂಗಮ ರಾಜವಂಶದ ಆಶ್ರಯದಲ್ಲಿ ರಚಿತವಾಗಿತ್ತು.
ಸಿ. ಇದು ಪಂಡಿತರ ಆಧ್ಯಾತ್ಮ ಪಂಥದೊಂದಿಗೆ ಸಂಬಂಧ ಪಡೆದಿರುವಂತದ್ದು
ಡಿ. ಇದನ್ನು ಆಧುನಿಕ ಯುಗದಲ್ಲಿ ಮಧುರೈನ ನಾಲ್ಕನೇ ತಮಿಳು ಚಂಕಂನಿಂದ ಕಂಡುಹಿಡಿಯಲಾಯಿತು.
ಉತ್ತರ:
10. "ದಕ್ಷಿಣದಲ್ಲಿ ಶಾತವಾಹನರು ನೇಗಿಲನ್ನು ಪರಿಚಯಿಸಿದರು ಎಂಬುದಕ್ಕಿಂತ ನೇಗಿಲಿನಿಂದ ದಕ್ಷಿಣಕ್ಕೆ ಶಾತವಾಹನರು ಪರಿಚಿತರಾದರು ಎಂಬುದು ಸೂಕ್ತ" ಎಂದು ಹೇಳಿದವರು.
ಎ. ಆರ್.ಜಿ.ಭಂಡಾರ್ಕರ್
ಬಿ. ಕೆ.ಎಂ.ಫಣಿಕ್ಕರ್
ಸಿ. ರೊಮಿಲಾ ಥಾಫರ್
ಡಿ. ಡಿ.ಡಿ.ಕೊಸಾಂಬಿ
ಉತ್ತರ:
11. ಹರ್ಷನ ಮೇಲೆ ಚಾಲುಕ್ಯರು ಸಾಧಿಸಿದ ವಿಜಯವನ್ನು ಎಲ್ಲಿ ಹೇಳಲಾಗಿದೆ.?
ಎ. ಹರ್ಷಚರಿತ
ಬಿ. ಅಲಹಾಬಾದ್ ಸ್ಥಂಭ ಶಾಸನದಲ್ಲಿ
ಸಿ. ಐಹೊಳೆ ಪ್ರಶಸ್ತಿಯಲ್ಲಿ
ಡಿ. ತಮಿಳು ಸಂಗಂ ಸಾಹಿತ್ಯದಲ್ಲಿ
ಉತ್ತರ:
12. ದಕ್ಷಿಣ ಭಾರತದೊಂದಿಗೆ ರೋಮನ್ನರು ವ್ಯಾಪಾರ ನಡೆಸಿದ್ದರು ಎಂಬುದಕ್ಕೆ ಸಾಕ್ಷ್ಯಾಧಾರಗಳು ಎಲ್ಲಿ ಸಿಗುತ್ತವೆ ?
1. ಗ್ರೀಕ್ ರೋಮನ್ "ಕ್ಲಾಸಿಕಲ್ ಅಕೌಂಟ್ಸ್"ನಲ್ಲಿ
2. ಅರಿಕಮೇಡು ಮತ್ತು ಅಂತದೇ ಸ್ಥಳಗಳ ಪುರಾತತ್ವ ಸಾಕ್ಷ್ಯಗಳಲ್ಲಿ
3. ತಮಿಳು ಸಂಗಂ ಪಠ್ಯಗಳಲ್ಲಿ
4. ದಕ್ಷಿಣ ಭಾರತದಲ್ಲಿ ದೊರೆತ ರೋಮನ್ ನಾಣ್ಯಗಳಲ್ಲಿ.
ಎ. 1 ಮತ್ತು 4
ಬಿ. 1, 2, ಮತ್ತು 4
ಸಿ. 2 ಮತ್ತು 4
ಡಿ. 1,2,3 ಮತ್ತು 4
ಉತ್ತರ:
13. ಸಂಸ್ಕೃತದಲ್ಲಿ ವೈದ್ಯ ಪದ್ಧತಿಯ ಬಗ್ಗೆ ಇರುವ 'ಅಷ್ಟಾಂಗ ಹೃದಯ' ಎಂಬ ಪ್ರಸಿದ್ಧ ಕೃತಿಯ ಹೆಸರು ಯಾವುದರಿಂದ ಬಂದಿದೆ ?
ಎ. ಬೌದ್ಧರ ಅಷ್ಟಾಂಗ ಮಾರ್ಗ ಪರಿಕಲ್ಪನೆಯಿಂದ
ಬಿ. ಹೃದಯ ಸಂಬಂಧಿ ಕಾಯಿಲೆಗಳೊಂದಿಗೆ ಇದು ವಿಶೇಷ ಪರಿಣತಿ ಹೊಂದಿರುವುದರಿಂದ
ಸಿ. ಇದು ಎಂಟು ವಿವಿಧ ರೀತಿಯ ಕಾಯಿಲೆಗಳಿಗೆ ಸಂಬಂಧಿಸಿರುವುದರಿಂದ
ಡಿ. ಇದು ಅಷ್ಟದಿಕ್ಪಾಲಕರಿಗೆ ಸಂಬಂಧಿಸಿರುವುದರಿಂದ
ಉತ್ತರ:
14. ಪೋರ್ಚ್ ಗೀಸರು ಯಾರಿಂದ ಗೋವಾ ಪಡೆದುಕೊಂಡರು ?
ಎ. ವಿಜಯನಗರದ ಅರಸರಿಂದ
ಬಿ. ಆದಿಲ್ ಶಾಹಿಗಳಿಂದ
ಸಿ. ಶಿಲಾಹಾರರಿಂದ
ಡಿ. ಮರಾಠರಿಂದ
ಉತ್ತರ:
15. ಆರ್ಯ ಜನಾಂಗ ಸಿದ್ಧಾಂತದ ಆರಂಭಗಳನ್ನು ಯಾರ ಕೃತಿಯಲ್ಲಿ ಕಾಣುತ್ತೇವೆ ?
ಎ. ವಿಲಿಯಂ ಜೋನ್ಸ್
ಬಿ. ಎಚ್.ಟಿ.ಕೋಲ್ ಬ್ರೂಕ್
ಸಿ. ಫ್ರೆಡರಿಕ್ ಮ್ಯಾಕ್ಸ್ ಮುಲ್ಲರ್
ಡಿ. ದಯಾನಂದ ಸರಸ್ವತಿ
ಉತ್ತರ:
16. ಶಹಜಾನನ ಕಾಲದ ಮುಘಲ್ ವಾಸ್ತುಶಿಲ್ಪಗಳಲ್ಲೆಲ್ಲ ಕಂಡು ಬರುವಂತಹ ವಿಶಿಷ್ಟ ಅಂಶ ಯಾವುದು ?
ಎ. ಆನೇಕ ಶೃಂಗಗಳ ಕಮಾನುಗಳು
ಬಿ. ಅರೆಗೊಳವಿಯಾಕಾರದ ಸ್ಥಂಭಗಳು
ಸಿ. ಮುಖಭಾಗದ ಚಾಚು ತೊಲೆ ತೂಗು ರಚನೆಗಳು
ಡಿ. ದೀರ್ಘ ವೃತ್ತಾಕಾರದ ವೇದಿಕೆಗಳು
ಉತ್ತರ:
17. ಬಾಲಗಂಗಾಧರ ತಿಲಕರು ಸಂಪಾದಕರಾಗಿದ್ದ ವೃತ್ತ ಪತ್ರಿಕೆಗಳು ಯಾವುವು ?
1. ಕೇಸರಿ 2. ಹಿತವಾದ
3. ಮರಾಠ 4. ವಾಯ್ಸ್ ಆಫ್ ಇಂಡಿಯಾ
ಎ. 1 ಮತ್ತು 2
ಬಿ. 1, 2 ಮತ್ತು 3
ಸಿ. 1 ಮತ್ತು 4
ಡಿ. 1 ಮತ್ತು 3
ಉತ್ತರ:
18. ಮಹಾತ್ಮಾಗಾಂಧೀಜಿಯವರು ಎಷ್ಟು ಸಲ ಭಾರತದ ರಾಷ್ಟ್ರೀಯ ಕಾಂಗ್ರೇಸ್ ನ ಅಧ್ಯಕ್ಷತೆ ವಹಿಸಿದ್ದರು ?
ಎ. ಮೂರು
ಬಿ. ಎರಡು
ಸಿ. ಒಂದು
ಡಿ. ಯಾವಾಗಲೂ ಇಲ್ಲ
ಉತ್ತರ:
19. Poverty and Un-British Rule in India ಕೃತಿಯ ಕತೃ
ಎ. ಮಹಾದೇವ ಗೋವಿಂದ ರಾನಡೆ
ಬಿ. ಜಿ.ವಿ.ಜೋಷಿ
ಸಿ. ಬಾಲಗಂಗಾಧರ ತಿಲಕ್
ಡಿ. ದಾದಾಬಾಯಿ ನವರೋಜಿ
ಉತ್ತರ:
20. ಅಶೋಕನು ವರ್ಜಿಸಿದ 13ನೇ ಬೃಹತ್ ಶಿಲಾಶಾಸನ ಎಲ್ಲಿದೆ ?
ಎ. ಧೌಲಿ
ಬಿ. ಜಾಗಡ್
ಸಿ. ಗಿರ್ನಾರ್
ಡಿ. ಸನ್ನತಿ
ಉತ್ತರ:
21. Hindu Polity ಎಂಬ ಪ್ರಭಾವಶಾಲಿಯಾದ ಕೃತಿಯನ್ನು ರಚಿಸಿದವರು
ಎ. ವಿನ್ಸೆಂಟ್ ಸ್ಮಿತ್
ಬಿ. ಕೆ.ಪಿ.ಜಯಸ್ವಾಲ್
ಸಿ. ಆರ್.ಕೆ.ಮುಖರ್ಜಿ
ಡಿ. ಬಿ.ಎ.ಸಾಲೆತೋರ್
ಉತ್ತರ:
22. ಜಗತ್ತಿನ ಇತಿಹಾಸದಲ್ಲಿ 'ವಾಸ್ಕೋಡಗಾಮ ಯುಗ' ಎಂಬ ಪರಿಕಲ್ಪನೆಯನ್ನು ನೀಡಿದವರು
ಎ. ಅರ್ನಾಲ್ಡ್ ಟಾಯ್ನಬಿ
ಬಿ. ಕೆ.ಎಂ.ಫಣಿಕ್ಕರ್
ಸಿ. ಅಸ್ವಾಲ್ಡ್ ಸ್ಟೆಂಗ್ಲರ್
ಡಿ. ರಿಚರ್ಡ್ ಹಾಫ್ ಸ್ಟಾಡ್ಟರ್
ಉತ್ತರ:
23. Subaltern Studies ನ ಆರಂಭದ ಸಂಪುಟಗಳನ್ನು ಸಂಪಾದಿಸಿಕೊಟ್ಟ ಚರಿತ್ರಾಕಾರರು ಯಾರು ?
ಎ. ಆರ್.ಸಿ.ಮಜುಂದಾರ್
ಬಿ. ಬಿಪಿನ್ ಚಂದ್ರ
ಸಿ. ರಣಜಿತ್ ಗುಹ
ಡಿ. ಸುಮಿತ್ ಸರ್ಕಾರ್
ಉತ್ತರ:
24. 1857ರ ದಂಗೆಯು 'ಮೊದಲ ಸ್ವಾತಂತ್ರ್ಯ ಯುದ್ದ' ಎಂಬ ಪರಿಕಲ್ಪನೆಯನ್ನು ತಿರಸ್ಕರಿಸಿದವರು ಯಾರು ?
ಎ. ಕೆ.ಎಂ.ಫಣಿಕ್ಕರ್
ಬಿ. ಪೆರ್ಸಿವಲ್ ಸ್ಟಿಯರ್
ಸಿ. ಪಿ.ಇ.ಎಂ.ರಾಬರ್ಟ್ಸ್
ಡಿ. ಆರ್.ಸಿ.ಮಜುಂದಾರ್
ಉತ್ತರ:
25. 'Safely value' ಸಿದ್ದಾಂತವು ಯಾವುದಕ್ಕೆ ಸಂಬಂಧಿಸಿದೆ ?
ಎ. 1857ರ ದಂಗೆ
ಬಿ. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಸ್ಥಾಪನೆ
ಸಿ. 1907ರಲ್ಲಿ ಕಾಂಗ್ರೇಸ್ ನಲ್ಲಿ ಆದ ಒಡಕು
ಡಿ. ಭಾರತದ ವಿಭಜನೆ
ಉತ್ತರ:
26. 'Gandhi and Anarchy' ಎಂಬ ಕೃತಿಯನ್ನು ರಚಿಸಿದವರು
ಎ. ಸರ್. ಸಿ. ಶಂಕರನ್ ನಾಯರ್
ಬಿ. ಮೊಹಮದ್ ಆಲಿ ಜಿನ್ನಾ
ಸಿ. ಸುಭಾಷ್ ಚಂದ್ರ ಭೋಸ್
ಡಿ. ಇ.ಎಂ.ಎಸ್.ನಂಬೂದರಿ ಪಾದ್
ಉತ್ತರ:
27. ಈ ಕೆಳಗಿನವರಲ್ಲಿ ಯಾರನ್ನು 'The Grand old man of India' ಎಂದು ಕರೆಯುತ್ತಾರೆ ?
ಎ. ಖಾನ್ ಅಬ್ದುಲ್ ಗಫರ್ ಖಾನ್
ಬಿ. ಮಹತ್ಮಾ ಗಾಂಧಿ
ಸಿ. ದಾದಬಾಯಿ ನವರೋಜಿ
ಡಿ. ಗೋಪಾಲಕೃಷ್ಣ ಗೋಖಲೆ
ಉತ್ತರ:
28. "ಸೈಮನ್ ಆಯೋಗವನ್ನು" ಏಕೆ ವಿರೋಧಿಸಲಾಯಿತು ?
ಎ. ಇದರಲ್ಲಿ ಇದ್ದವರೆಲ್ಲರೂ ಬಿಳಿಯರು
ಬಿ. ಜಲಿಯಾನ್ ವಾಲಾಬಾಗ್ ನಲ್ಲಿ ಬ್ರಿಟೀಷರು ತಳೆದ ನೀತಿಯ ಬಗ್ಗೆ ಜನರು ವ್ಯಗ್ರರಾಗಿದ್ದರು
ಸಿ. ಮಿಂಟೋ ಮಾರ್ಲೆ ಸುಧಾರಣೆಗಳು ಕಾರ್ಯಸಾಧುವಾಗಿರಲಿಲ್ಲ
ಡಿ. ಮಾಂಟೆಂಗೋ ಮತ್ತು ಚೆಲ್ಮ್ಸ್ ಫರ್ಡ್ ಅವರು ನಿರೀಕ್ಷೆಯ ಪ್ರಕಾರ ಕೆಲಸ ಮಾಡಲಿಲ್ಲ
ಉತ್ತರ:
29. ಗಾಂಧಿ-ಇರ್ವಿನ್ ಒಪ್ಪಂದದ ಬಗ್ಗೆ ಜವಹರಲಾಲ್ ನೆಹರೂರವರ ಪ್ರತಿಕ್ರಿಯೆ ಹೇಗಿತ್ತು ?
ಎ. ಅವರು ಅದನ್ನು ತುಂಬು ಮನಸ್ಸಿನಿಂದ ಸ್ವಾಗತಿಸಿದರು
ಬಿ. ಇದು ಒಂದು ವಿಶ್ವಾಸಘಾತಕ ಒಪ್ಪಂದ ಎಂದು ಅವರು ಭಾವಿಸಿದರು
ಸಿ. ಇದರ ಬಗ್ಗೆ ಲಕ್ಷ್ಯ ಕೊಡಲಿಲ್ಲ
ಡಿ. ಲಾರ್ಡ್ ಇರ್ವಿನ್ ಮತ್ತು ಮಹಾತ್ಮಾಗಾಂಧಿಯವರನ್ನು ಅವರು ಅಭಿನಂದಿಸಿದರು
ಉತ್ತರ:
30. 1939ರಲ್ಲಿ ಕಾಂಗ್ರೇಸ್ ಸಚಿವರು ರಾಜೀನಾಮೆ ನೀಡಲು ಕಾರಣ
ಎ. ಭಾರತವನ್ನು ದ್ವಿತೀಯ ಮಹಾಯುದ್ದಕ್ಕೆ ಸೆಳೆದಿದ್ದರ ಬಗ್ಗೆ ವಿರೋಧವನ್ನು ಸೂಚಿಸಲು
ಬಿ. ಕಾಂಗ್ರೇಸ್ ಸಮಾಜವಾದಿ ಪಕ್ಷದ ಒತ್ತಡದಿಂದ
ಸಿ. ಮುಸ್ಲೀಂ ಲೀಗ್ ತನ್ನ ಬೆಂಬಲವನ್ನು ಹಿಂತೆಗೆದುಕೊಳ್ಳುವುದಾಗಿ ಬೆದರಿಸಿದ್ದರಿಂದ
ಡಿ. ಗಾಂಧೀಜಿ ಮತ್ತು ಸುಭಾಷ್ ಚಂದ್ರ ಭೊಸ್ ರವರ ಅಭಿಪ್ರಾಯ ಭೇದದಿಂದ
ಉತ್ತರ:
31. "ಭಾರತವನ್ನು ಅರಾಜಕತೆಗೆ ಹಾಗೂ ದೇವರಿಗೆ ಬಿಟ್ಟುಬಿಡಿ" ಎಂದು ಹೇಳಿದವರು
ಎ. ಮಹಾತ್ಮಾ ಗಾಂಧಿ
ಬಿ. ಜಯಪ್ರಕಾಶ್ ನಾರಾಯಣ್
ಸಿ. ಸುಭಾಷ್ ಚಂದ್ರ ಭೋಸ್
ಡಿ. ಸುಬ್ರಹ್ಮಣ್ಯ ಭಾರತಿ
ಉತ್ತರ:
32. ಸ್ವತಂತ್ರ ಭಾರತದ ಪ್ರಥಮ ಗೌವರ್ನರ್ ಜನರಲ್ ಯಾರು ?
ಎ. ಸಿ. ರಾಜಾಗೋಪಾಲಾಚಾರಿ
ಬಿ. ಲಾರ್ಡ್ ಮೌಂಟ್ ಬ್ಯಾಟನ್
ಸಿ. ಬಾಬು ರಾಜೇಂದ್ರ ಪ್ರಸಾದ್
ಡಿ. ಪಂಡಿತ್ ಜವಹರಲಾಲ್ ನೆಹರು
ಉತ್ತರ:
33. ಸಾಗರದ ಬಹು ಆಳವಾದ ಭಾಗ ಎಂದು ಗುರುತಿಸಲಾದ "ಮರಿಯಾನಾ ಟ್ರೆಂಚ್" ಯಾವ ಸಾಗರದಲ್ಲಿದೆ ?
ಎ. ಹಿಂದೂ ಮಹಾಸಾಗರ
ಬಿ. ಅಟ್ಲಾಂಟಿಕ್ ಸಾಗರ
ಸಿ. ಫೆಸಿಪಿಕ್ ಸಾಗರ
ಡಿ. ಆರ್ಕ್ ಟಿಕ್ ಸಾಗರ
ಉತ್ತರ:
34. ರಾಜಸ್ಥಾನ್ ಕಾಲುವೆಯು ಯಾವ ಯಾವ ರಾಜ್ಯಗಳಿಗೆ ನಿರಾವರಿ ಮಾಡುತ್ತದೆ ?
ಎ. ರಾಜಸ್ಥಾನ್, ಪಂಜಾಬ್ ಮತ್ತು ಹರಿಯಾಣ
ಬಿ. ರಾಜಸ್ತಾನ್, ಪಂಜಾಬ್ ಮತ್ತು ಗುಜರಾತ್
ಸಿ. ರಾಜಸ್ತಾನ್, ಪಂಜಾಬ್ ಮತ್ತು ಮಧ್ಯಪ್ರದೇಶ
ಡಿ. ರಾಜಸ್ತಾನ್, ಪಂಜಾಬ್ ಮತ್ತು ಕಾಶ್ಮೀರ
ಉತ್ತರ:
35. ಓಝೋನ್ ಪದರವು ಯಾವ ಪದರದಲ್ಲಿದೆ ?
ಎ. ಟ್ರೊಪೋಸ್ಪಿಯರ್
ಬಿ. ಸ್ಟ್ರಾಟೋಸ್ಪಿಯರ್
ಸಿ. ಮಿಸೋಸ್ಫಿಯರ್
ಡಿ. ಥರ್ಮೋಸ್ಫಿಯರ್
ಉತ್ತರ:
36. ಸೂರ್ಯನ ಮೂರನೇ ಗ್ರಹ ಯಾವುದು ?
ಎ. ಅಂಗಾರಕ
ಬಿ. ಪ್ಲೂಟೋ
ಸಿ. ಶುಕ್ರ
ಡಿ. ಭೂಮಿ
ಉತ್ತರ:
37. ಕಾಫಿ ವ್ಯವಸಾಯ ಮುಖ್ಯವಾಗಿ ಕಂಡುಬರುವ ರಾಜ್ಯಗಳು ಯಾವುವು ?
ಎ. ಪಶ್ಚಿಮ ಬಂಗಾಳ, ಒರಿಸ್ಸಾ ಮತ್ತು ಮೇಘಾಲಯ
ಬಿ. ಕರ್ನಾಟಕ, ಕೇರಳ ಮತ್ತು ತಮಿಳುನಾಡು
ಸಿ. ಮಹಾರಾಷ್ಟ್ರ, ಛತ್ತೀಸ್ ಘಡ್ ಮತ್ತು ಜಾರ್ಖಂಡ್
ಡಿ. ಕಾಶ್ಮೀರ, ಹರಿಯಾಣ ಮತ್ತು ಜಮ್ಮು
ಉತ್ತರ:
38. ಭಾರತದಲ್ಲಿ ಯಾವ ರಾಜ್ಯವು ಅತಿ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲನ್ನು ಉತ್ಪಾದಿಸುತ್ತದೆ ?
ಎ. ಒರಿಸ್ಸಾ
ಬಿ. ಆಂಧ್ರಪ್ರದೇಶ
ಸಿ. ಜಾರ್ಖಂಡ್
ಡಿ. ಛತ್ತೀಸ್ ಘಡ್
ಉತ್ತರ:
39. ತುಂಗಭದ್ರಾ ಮತ್ತು ಭೀಮಾ ನದಿಗಳು ಯಾವ ನದಿಯ ಉಪನದಿಗಳಾಗಿವೆ ?
ಎ. ಕಾವೇರಿ
ಬಿ. ಮಹಾನದಿ
ಸಿ. ನರ್ಮದಾ
ಡಿ. ಕೃಷ್ಣಾ
ಉತ್ತರ:
40. ಜಗತ್ತಿನಲ್ಲಿ ಪರಮಾಣು ಶಕ್ತಿಯಿಂದ ವಿದ್ಯುತ್ತನ್ನು ಉತ್ಪಾದಿಸುವಲ್ಲಿ ಅಗ್ರಗಣ್ಯವೆನಿಸಿಕೊಂಡ ದೇಶ ಯಾವುದು ?
ಎ. ಜಪಾನ್
ಬಿ. ಫ್ರಾನ್ಸ್
ಸಿ. ಚೀನಾ
ಡಿ. ಯು.ಎಸ್.ಎ
ಉತ್ತರ:
41. ಭಾರವು ಸುಮಾರು
ಎ. 6100 ಕಿ.ಮೀ ಉದ್ದದ ಕರಾವಳಿ ರೇಖೆ ಹೊಂದಿದೆ
ಬಿ. 6500 ಕಿ.ಮೀ ಉದ್ದದ ಕರಾವಳಿ ರೇಖೆ ಹೊಂದಿದೆ
ಸಿ. 7000 ಕಿ.ಮೀ ಉದ್ದದ ಕರಾವಳಿ ರೇಖೆ ಹೊಂದಿದೆ
ಡಿ. 7100 ಕಿ.ಮೀ ಉದ್ದದ ಕರಾವಳಿ ರೇಖೆ ಹೊಂದಿದೆ
ಉತ್ತರ:
42. ಇವುಗಳಲ್ಲಿ ಯಾವುದು ಎಳೆಯ ಭೂಸ್ತರ ಮಡಿಕೆ ಪರ್ವತಗಳನ್ನು ಹೊಂದಿದೆ ?
ಎ. ವಿಂಧ್ಯಾ ಪರ್ವತ ಶ್ರೇಣಿ
ಬಿ. ಪಶ್ಚಿಮ ಘಟ್ಟಗಳು
ಸಿ. ಹಿಮಾಲಯ ಶ್ರೇಣಿ
ಡಿ. ಅರಾವಳಿ ಶ್ರೇಣಿ
ಉತ್ತರ:
43. 'ಗ್ರೇಟ್ ಬ್ಯಾರಿಯರ್ ರೀಫ್' ಎಲ್ಲಿದೆ ?
ಎ. ಬ್ರೆಜಿಲಿಯನ್ ಕರಾವಳಿಯಲ್ಲಿ
ಬಿ. ಭಾರತದ ಕರಾವಳಿಯಲ್ಲಿ
ಸಿ. ಆಸ್ಟ್ರೇಲಿಯಾದ ಕರಾವಳಿಯಲ್ಲಿ
ಡಿ. ಮೃತ ಸಮುದ್ರದಲ್ಲಿ
ಉತ್ತರ:
44. ಸಾಗರಗಳಿಗೆ ಉಪ್ಪು ಮುಖ್ಯವಾಗಿ ಕೆಳಕಂಡ ಮೂಲಗಳಿಂದ ಬರುತ್ತದೆ
ಎ. ಹಿಮನದಿಗಳಿಂದ
ಬಿ. ಸಾಗರ ಪ್ರವಾಹಗಳಿಂದ
ಸಿ. ಸೂರ್ಯನ ಬೆಳಕಿನಿಂದ
ಡಿ. ನದಿಗಳಿಂದ
ಉತ್ತರ:
45. ಬಾಗ್ದಾದ್ ನರರ ಯಾವ ದೇಶದಲ್ಲಿದೆ ?
ಎ. ಇರಾಕ್ ದೇಶ
ಬಿ. ಆಫ್ಘಾನಿಸ್ತಾನ್
ಸಿ. ಪಾಕಿಸ್ತಾನ್
ಡಿ. ಟರ್ಕಿ
ಉತ್ತರ:
46. ಭಾರತವು ಬಹುತೇಕವಾಗಿ ಅನುಸರಿಸುವ ಕೃಷಿ ಪದ್ಧತಿ
ಎ. ಮಿಶ್ರಬೆಳೆ ವ್ಯವಸಾಯ
ಬಿ. ನೆಡು ತೋಪು ವ್ಯವಸಾಯ
ಸಿ. ಸಬ್ಸಿಸ್ಟೆನ್ಸ್ ವ್ಯವಸಾಯ
ಡಿ. ಕದಲು ಬೇಸಾಯ
ಉತ್ತರ:
47. ಕರ್ನಾಟಕದ ಹೊಸಪೇಟೆ-ಸಂಡೂರು ಭೂಪ್ರದೇಶವು ಯಾವ ನಿಕ್ಷೇಪವನ್ನಿ ಹೊಂದಿದೆ ?
ಎ. ಚಿನ್ನ
ಬಿ. ಬಾಕ್ಸೈಟ್
ಸಿ. ಆಭ್ರಕ
ಡಿ. ಕಬ್ಬಿಣದ ಅದಿರು
ಉತ್ತರ:
48. ಅತ್ಯಧಿಕ ಶೀತದ ಮೊಡಗಳ ಹಿಮದ ಹರಳುಗಳಲ್ಲಿ ಕೃತಕ ಬೀಜ ಬಿತ್ತನೆ ಮಾಡುವ ಮೂಲಕ ಪಡೆಯಲಾಗುವ ದ್ರವೀಭವನ ಅವಪಾತವನ್ನು ಹೀಗೆನ್ನುತ್ತಾರೆ ?
ಎ. ನಿಸರ್ಗ ಪ್ರೇರಿತ ಅವಪಾತ ದ್ರವ
ಬಿ. ವಾಯು ಪ್ರೇರಿತ ಅವಪಾತ ದ್ರವ
ಸಿ. ಮನುಷ್ಯ ಪ್ರೇರಿತ ಅವಪಾತ ದ್ರವ
ಡಿ. ನಿಸರ್ಗ ಪ್ರೇರಿತ ಅವಪಾತ ದ್ರವ
ಉತ್ತರ:
49. ಇರಾವತಿಯು ಯಾವ ದೇಶದ ಏಕೈಕ ಬಹು ದೊಡ್ಡ ನದಿಯಾಗಿದೆ ?
ಎ. ಭಾರತ
ಬಿ. ಕೋರಿಯ
ಸಿ. ಚೀನಾ
ಡಿ. ಮಯನ್ಮಾರ್
ಉತ್ತರ:
50. ಪಾಕ್ ಜಲಸಂಧಿಯು ಈ ಕೆಳಕಂಡ ದೇಶಗಳ ನಡುವೆ ಇದೆ.
ಎ. ಭಾರತ ಮತ್ತು ಮಯನ್ಮಾರ್
ಬಿ. ಭಾರತ ಮತ್ತು ಶ್ರೀಲಂಕ
ಸಿ. ಭಾರತ ಮತ್ತು ಪಾಕಿಸ್ತಾನ
ಡಿ. ಭಾರತ ಮತ್ತು ಬಾಂಗ್ಲದೇಶ
ಉತ್ತರ:
51. ಬೀಜಿಂಗ್ ಯಾವ ದೇಶದ ರಾಜಧಾನಿ ?
ಎ. ಕೋರಿಯಾ
ಬಿ. ಜಪಾನ್
ಸಿ. ಚೀನಾ
ಡಿ. ಮಂಗೋಲಿಯಾ
ಉತ್ತರ:
52. Wild ass (ಕಾಡುಕತ್ತೆ) ಪ್ರಾಣಿಧಾಮವು ಈ ಕೆಳಕಂಡ ಪ್ರದೇಶ ಹಾಗೂ ಅದರ ಸುತ್ತಮುತ್ತ ಇದೆ.
ಎ. ಕಚ್ ನ ಹರಿವು ಪ್ರದೇಶ
ಬಿ. ಪಶ್ಚಿಮ ಘಟ್ಟಗಳು
ಸಿ. ಪೂರ್ವ ಘಟ್ಟಗಳು
ಡಿ. ಹಿಮಾಲಯದ ತಪ್ಪಲು
ಉತ್ತರ:
53.PESA ಕಾಯಿದೆಯಲ್ಲಿ ಎಷ್ಟು ರಾಜ್ಯಗಳನ್ನು ಒಳಪಡಿಸಲಾಗಿದೆ ?
ಎ. ಆರು
ಬಿ. ಎಂಟು
ಸಿ. ಏಳು
ಡಿ. ಒಂಬತ್ತು
ಉತ್ತರ:
54. ಕೆಳಕಂಡ ಯಾವ ವರ್ಷದಲ್ಲಿ ಸ್ರೀಯರನ್ನು ಅಸಭ್ಯವಾಗಿ ತೋರಿಸುವುದನ್ನು ನಿಷೇಧಿಸುವ ಕಾಯಿದೆ ಜಾರಿಯಾಯಿತು ?
ಎ. 1986
ಬಿ. 1987
ಸಿ. 1992
ಡಿ. 1998
ಉತ್ತರ:
55. ಇವುಗಳಲ್ಲಿ ಯಾವುದು ಸಿಐಟಿಯುಗೆ ಸಂಯೋಜಿತವಾಗದ ಸಂಘಟನೆ ?
ಎ. ಬೆಂಗಾಲ್ ಚತ್ನಾಲ್ ಮಜ್ದೂರ್ ಸಂಘ
ಬಿ. ಆಂಧ್ರಪ್ರದೇಶ ಆಟೋ ಮತ್ತು ಟ್ರಾಲಿ ಚಾಲಕರ ಸಂಘ
ಸಿ. NLC ಕಾರ್ಮಿಕರ ಪ್ರಗತಿಪರ ಸಂಘ
ಡಿ. ಉಕ್ಕು ಸ್ಥಾವರ ಉದ್ಯೋಗಿಗಳ ಸಂಘ
ಉತ್ತರ:
56. ಭಾರತೀಯ ಸಂವಿಧಾನದ 86ನೇ ತಿದ್ದುಪಡಿಯು ಯಾವುದಕ್ಕೆ ಸಂಬಂಧಿಸಿದೆ ?
ಎ. ಪೀಸಾ ಕಾಯಿದೆ
ಬಿ. ಪ್ರಾಥಮಿಕ ಶಿಕ್ಷಣ
ಸಿ. ಆಸ್ತಿ
ಡಿ. ಪಂಚಾಯತ್ ರಾಜ್
ಉತ್ತರ:
57. ಲೋಕ ಸಭೆಯ ಕೆಳಕಂಡ ಯಾವ ಸಭಾಪತಿಯನ್ನು ಅವರು ಅಧಿಕಾರದಲ್ಲಿರುವಾಗಲೇ ಪಕ್ಷದಿಂದ ವಜಾ ಮಾಡಲಾಯಿತು ?
ಎ. ಬಲರಾಮ್ ಭಗತ್
ಬಿ. ಸಂಜೀವರೆಡ್ಡಿ
ಸಿ. ಸೋಮನಾಥ ಚಟರ್ಜಿ
ಡಿ. ಮಾವಲಂಕರ್
ಉತ್ತರ:
58. ಮೈಸೂರಿನ ಕೆಳಕಂಡ ಯಾವ ರಾಜ್ಯಪಾಲರು ಅನಂತರದಲ್ಲಿ ಭಾರತದ ರಾಷ್ಟ್ರಪತಿಗಳಾದರು ?
ಎ. ಫಕ್ರುದ್ಧೀನ್ ಅಹಮದ್
ಬಿ. ವಿ.ವಿ. ಗಿರಿ
ಸಿ. ಸಂಜೀವರೆಡ್ಡಿ
ಡಿ. ಡಾ.ರಾಧಾಕೃಷ್ಣನ್
ಉತ್ತರ:
59. ಹೈಡ್ ಕಾಯಿದೆಯು ಕೆಳಕಂಡ ಗುರಿಯನ್ನು ಹೊಂದಿದೆ
A. ಸಮೂಹ ನಾಶದ ಶಸ್ತ್ರಾಸ್ತ್ರಗಳನ್ನು ಕೈಗೊಳ್ಳಲು ಇರಾನ್ ದೇಶದ ಮನವೊಲಿಸಲು ಭಾರತದ ಸಹಕಾರವನ್ನು ಪಡೆದುಕೊಳ್ಳುವುದು.
B. ಯು.ಎಸ್.ಎ.ಗೆ ಹೊಂದಿಕೆಯಾಗುವಂತಹ ಒಪ್ಪಿಗೆಯಲ್ಲಿ ಭಾಗಿಯಾಗುವಂತೆ ಮಾಡುವುದು
C. ಸಮತಾವಾದ ಹಾಗೂ ಸರ್ವಾಧಿಕಾರವು ವ್ಯಾಪಿಸದಂತೆ ತಡೆಯುವುದು.
D. ಅಣ್ವಸ್ತ್ರ ಪ್ರಸರಣ ನಿಷೇಧವನ್ನು ಕುರಿತ ಕಾಳಜಿ
ಎ. A, B, D ಗಳು ಸರಿಯಾಗಿವೆ
ಬಿ. A, C, D ಗಳು ಸರಿಯಾಗಿವೆ
ಸಿ. C, D, B ಗಳು ಸರಿಯಾಗಿವೆ
ಡಿ. A, B, C ಗಳು ಸರಿಯಾಗಿವೆ
ಉತ್ತರ:
60. 'India versus Bharat' ಎಂಬ ಪದವನ್ನು ಟಂಕಿಸಿದವರು ಯಾರು ?
ಎ. ಚರಣ್ ಸಿಂಗ್
ಬಿ. ಲಾಲ್ ಬಹದ್ದೂರ್ ಶಾಸ್ತ್ರಿ
ಸಿ. ಮಹಾತ್ಮಗಾಂಧಿ
ಡಿ. ಶರದ್ ಜೋಷಿ
ಉತ್ತರ:
61. ಇವರಲ್ಲಿ ಭಾರತದ ಪ್ರಥಮ ಕಮ್ಯುನಿಷ್ಟ್ ಮುಖ್ಯಮಂತ್ರಿ ಯಾರು ?
ಎ. ಜ್ಯೋತಿ ಬಸು
ಬಿ. ಬುದ್ದದೇವ ಭಟ್ಟಾಚಾರ್ಯ
ಸಿ. ಇ.ಎಂ.ಎಸ್.ನಂಬೂದರಿ ಪಾಡ್
ಡಿ. ಅಚ್ಯುತ ಮೆನನ್
ಉತ್ತರ:
62. ಇವರಲ್ಲಿ ಯಾರು ಸಂವಿಧಾನ ರಚನಾ ಸಭೆಯ ಮೂಲಭೂತ ಹಕ್ಕುಗಳ ಉಪಸಮಿತಿಯ ಅಧ್ಯಕ್ಷರಾಗಿದ್ದರು ?
ಎ. ನೆಹರೂ
ಬಿ. ಜೆ.ಬಿ.ಕೃಪಾಲನಿ
ಸಿ. ಬಿ.ಆರ್.ಅಂಬೇಡ್ಕರ್
ಡಿ. ಎ.ವಿ.ಥಾಕ್ಕರ್
ಉತ್ತರ:
63. ಇವರಲ್ಲಿ ಯಾರು ಸಂವಿಧಾನ ರಚನಾ ಸಭೆಯಲ್ಲಿ ಕಮ್ಯುನಿಷ್ಟ್ ರನ್ನು ಪ್ರತಿನಿಧಿಸಿದ್ದರು ?
ಎ. ಸೋಮನಾಥ ಲಾಹಿರಿ
ಬಿ. ಸೋಮನಾಥ ಚಟರ್ಜಿ
ಸಿ. ಮುಜಾಫರ್ ಅಹ್ಮದ್
ಡಿ. ಎಸ್.ಎ.ಡಾಂಗೆ
ಉತ್ತರ:
64. ಸಂವಿಧಾನ ರಚನಾ ಸಭೆಯನ್ನು ಸ್ಥಾಪಿಸಲು ಈ ಕೆಳಕಂಡವುಗಳಲ್ಲಿ ಯಾವುದು ಕಾರಣವಾಗಿತ್ತು ?
ಎ. ಇದು ಭಾರತದ ರಾಷ್ಟ್ರೀಯ ಕಾಂಗ್ರೇಸ್ ಮತ್ತು ಮುಸ್ಲೀಂ ಲೀಗ್ ನಡುವಿನ ಮಾತುಕತೆಗಳ ಫಲವಾಗಿತ್ತು
ಬಿ. ಇದು ರಾಜಸಂಸ್ಥಾನಗಳನ್ನು ಮತ್ತು ಬ್ರಿಟಿಷ್ ಸಾಮ್ರಾಜ್ಯದ ಫಲವಾಗಿತ್ತು
ಸಿ. ಇದು ಭಾರತೀಯ ನಾಯಕರು ಹಾಗೂ ಬ್ರಿಟೀಷ್ ಕ್ಯಾಬಿನೆಟ್ ಆಯೋಗದ ಸದಸ್ಯರ ನಡುವಿನ ಮಾತುಕತೆಗಳ ಫಲವಾಗಿತ್ತು
ಡಿ. ಇದು ಪಾಕಿಸ್ತಾನಿ ನಾಯಕರು ಹಾಗೂ ಭಾರತೀಯ ನಾಯಕರ ಫಲವಾಗಿತ್ತು
ಉತ್ತರ:
65. ಇವುಗಳಲ್ಲಿ ಯಾವ ದಿನಾಂಕದಂದು ಭಾರತದ ಸಂವಿಧಾನಕ್ಕೆ ಮೊದಲ ತಿದ್ದುಪಡಿಯನ್ನು ಮಾಡಲಾಯಿತು ?
ಎ. 16ನೇ ಜೂನ್ 1950
ಬಿ. 18ನೇ ಜೂನ್ 1951
ಸಿ. 17ನೇ ಜೂನ್ 1951
ಡಿ. 18ನೇ ಜುಲೈ 1958
ಉತ್ತರ:
66. ಇವುಗಳಲ್ಲಿ ಯಾವುದು ಭಾರತದ ರಾಜಕೀಯ ಹಕ್ಕುಗಳ ಒಂದು ಭಾಗವಾಗಿಲ್ಲ ?
ಎ. ಮತ ಚಲಾಯಿಸದಿರುವ ಹಕ್ಕು
ಬಿ. ಮತ ಚಲಾಯಿಸುವ ಹಕ್ಕು
ಸಿ. ವಾಪಸು ಕರೆಸಿಕೊಳ್ಳುವ ಹಕ್ಕು
ಡಿ. ಮಾತನಾಡುವ ಹಕ್ಕು
ಉತ್ತರ:
67. ಭಾರತೀಯ ಪ್ರಭುತ್ವವನ್ನು ಮಾರ್ಕ್ಸಿಸ್ಟರು ಆಗಾಗ್ಗೆ ಹೀಗೂ ಕರೆಯುತ್ತಾರೆ
ಎ. ಮೃದು ಪ್ರಭುತ್ವ
ಬಿ. ಸ್ವಾಯತ್ತ
ಸಿ. ಸಾಪೇಕ್ಷ ಸ್ವಾಯತ್ವ
ಡಿ. ಮೇಲಿನ ಎಲ್ಲವೂ
ಉತ್ತರ:
68. ಇವುಗಳಲ್ಲಿ ಯಾವ ರಾಜ್ಯವು ಅತ್ಯಧಿಕ ಸಂಖ್ಯೆಯ ಪಂಚಾಯಿತಿಗಳನ್ನು ಹೊಂದಿದೆ ?
ಎ. ಆಂಧ್ರಪ್ರದೇಶ
ಬಿ. ಉತ್ತರ ಪ್ರದೇಶ
ಸಿ. ಮಧ್ಯಪ್ರದೇಶ
ಡಿ. ಮಹಾರಾಷ್ಟ್ರ
ಉತ್ತರ:
69. ಇವುಗಳಲ್ಲಿ ಯಾವುದು ಬಲವಂತರಾವ್ ಸಮಿತಿಯ ಪ್ರಮುಖ ಕಾಳಜಿಯಾಗಿತ್ತು ?
ಎ. ಸಮುದಾಯ ಕೆಲಸಗಳಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ
ಬಿ. ಸಮುದಾಯ ಕೆಲಸಗಳಲ್ಲಿ ಖಾಸಗೀಯವರ ಭಾಗವಹಿಸುವಿಕೆ
ಸಿ. ಸಮುದಾಯ ಕೆಲಸಗಳಲ್ಲಿ ಸರ್ಕಾರವು ತೊಡಗಿಕೊಳ್ಳುವುದು
ಡಿ. ಮೇಲಿನ ಯಾವುದೂ ಅಲ್ಲ
ಉತ್ತರ:
70. ಕೆಳಗಿನವುಗಳನ್ನು ಸರಿ ಹೊಂದಿಸಿ
1. ಲೋಹಿಯಾ a. ಪ್ರಾಚೀನ ಸಮಾಜವಾದ
2. ಭಗವಾನ್ ದಾಸ್ b. ವಿಕೇಂದ್ರಿಕೃತ ಸಮಾಜವಾದ
3. ಜಯಪ್ರಕಾಶ್ ನಾರಾಯಣ್ c. ನೈತಿಕ ಸಮಾಜವಾದ
4. ನರೇಂದ್ರ ದೇವ d. ಗಾಂಧಿ ನೀತಿಯ ಸಮಾಜವಾದ
ಎ. 1-a, 2-c, 3-d, 4-b
ಬಿ. 1-b, 2-c, 3-d, 4-c
ಸಿ. 1-d, 2-c, 3-b, 4-a
ಡಿ. 1-c, 2-b, 3-d, 4-a
ಉತ್ತರ:
71. ಭಾರತದ ಅರ್ಥವ್ಯವಸ್ಥೆಯನ್ನು ಬಹಳ ಸೂಕ್ತವಾಗಿ ಹೀಗೆ ವಿವರಿಸಲಾಗಿದೆ.
ಎ. ಬಂಡವಾಳಶಾಹಿ ಅರ್ಥವ್ಯವಸ್ಥೆ
ಬಿ. ಸಮಾಜವಾದಿ ಅರ್ಥವ್ಯವಸ್ಥೆ
ಸಿ. ಮಿಶ್ರ ಅರ್ಥವ್ಯವಸ್ಥೆ
ಡಿ. ಮುಕ್ತ ಉದ್ಯಮ ಅರ್ಥವ್ಯವಸ್ಥೆ
ಉತ್ತರ:
72. ಹನ್ನೊಂದನೇ ಪಂಚವಾರ್ಷಿಕ ಯೋಜನೆಯ ಅವಧಿ
ಎ. 2004-2009
ಬಿ. 2005-2010
ಸಿ. 2006-2011
ಡಿ. 2007-2012
ಉತ್ತರ:
73. 2001ನೇ ಜನಗಣತಿಯ ಪ್ರಕಾರ ಭಾರತದ ಸಾಕ್ಷರತಾ ಪ್ರಮಾಣವು
ಎ. 65%
ಬಿ. 60%
ಸಿ. 55%
ಡಿ. 50%
ಉತ್ತರ:
74. ಭಾರತೀಯ ರಿಜರ್ವ್ ಬ್ಯಾಂಕಿನ ಗೌವರ್ನರ್ ಯಾರು ?
ಎ. ಡಾ. ಮನಮೋಹನ್ ಸಿಂಗ್
ಬಿ. ಡಾ.ವೈ.ಗೋಪಾಲರೆಡ್ಡಿ
ಸಿ. ಡಾ.ಸಿ.ರಂಗರಾಜನ್
ಡಿ. ಡಾ.ಪಿ. ಚಿದಂಬರಂ
ಉತ್ತರ:
75. ಭಾರತದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಈ ಕೆಳಕಂಡುದರ ಅನ್ವಯ ಸ್ಥಾಪಿಸಲಾಗಿದೆ.
ಎ. ಮೂಲಭೂತ ಹಕ್ಕುಗಳು
ಬಿ. ಮೂಲಭೂತ ಕರ್ತವ್ಯಗಳು
ಸಿ. ಚುನಾವಣಾ ಆಯೋಗದ ಕಾಯಿದೆ
ಡಿ. ರಾಜ್ಯ ನೀತಿಯ ನಿರ್ದೇಶಕ ತತ್ವಗಳು
ಉತ್ತರ:
76. ಭಾರತದಲ್ಲಿ ರಾಷ್ಟ್ರೀಯ ವರಮಾನದ ಅಂದಾಜುಗಳನ್ನು ಕ್ರೋಢೀಕರಿಸುವವರು ಯಾರು ?
ಎ. ರಾಷ್ಟ್ರೀಯ ಅಭಿವೃದ್ಧಿ ಮಂಡಳಿ
ಬಿ. ಯೋಜನಾ ಆಯೋಗ
ಸಿ. ಕೇಂದ್ರೀಯ ಸಾಂಖ್ಯಿಕ ಸಂಸ್ಥೆ
ಡಿ. ರಾಷ್ಟ್ರೀಯ ಮಾದರಿ ಸರ್ವೇಕ್ಷಣೆ
ಉತ್ತರ:
77. ಅಬಕಾರಿ ಸುಂಕ ಎಂದರೆ ಕೆಳಕಂಡುದರ ಮೇಲೆ ವಿಧಿಸುವ ತೆರಿಗೆ
ಎ. ವಸ್ತುವಿನ ಖರೀದಿ
ಬಿ. ವಸ್ತುವಿನ ಉತ್ಪಾದನೆ
ಸಿ. ವಸ್ತುವಿನ ಮಾರಾಟ
ಡಿ. ವಸ್ತುವಿನ ಉಪಯೋಗ
ಉತ್ತರ:
78. ಮಧ್ಯಾಂತರ ಬಜೆಟ್ ಅನ್ನು ಹೀಗೂ ಕರೆಯುತ್ತಾರೆ ?
ಎ. voat on account ಬಜೆಟ್
ಬಿ. ಅಡ್ ಹಾಕ್ ಬಜೆಟ್
ಸಿ. ಪೂರಕ ಬಜೆಟ್
ಡಿ. ಅಲ್ಪಾವಧಿ ಬಜೆಟ್
ಉತ್ತರ:
79. ಸಂವೇದನಾ ಸೂಚ್ಯಂಕವು ಈ ಕೆಳಕಂಡ ವ್ಯವಹಾರಗಳ ಏರಿಳಿತಗಳನ್ನು ಅಳೆಯುತ್ತದೆ.
ಎ. ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ವಿದೇಶಿ ವಿನಿಮಯ ಮಾರುಕಟ್ಟೆ
ಬಿ. ಹಣದ ಮಾರುಕಟ್ಟೆ ಮತ್ತು ಬಂಡವಾಳದ ಮಾರುಕಟ್ಟೆ
ಸಿ. ವಿದೇಶಿ ವಿನಿಮಯ ಮಾರುಕಟ್ಟೆ ಮತ್ತು ಟ್ರೆಶರಿ ಬಿಲ್ಲ್ ಗಳು
ಡಿ. ಉತ್ಪನ್ನ ಮಾರುಕಟ್ಟೆ ಮತ್ತು ಗುಣಕ ಮಾರುಕಟ್ಟೆ
ಉತ್ತರ:
80. ಭಾರತದಲ್ಲಿ ಆರ್ಥಿಕ ನೀತಿಯನ್ನು ಯಾವಾಗಿನಿಂದ ಜಾರಿಗೆ ತರಲಾಯಿತು ?
ಎ. ಜನವರಿ 1997
ಬಿ. ಮಾರ್ಚ್ 1995
ಸಿ. ಮೇ 1993
ಡಿ. ಜುಲೈ 1991
ಉತ್ತರ:
81. ಭಾರತದಲ್ಲಿ ಹಣಕಾಸು ನೀತಿಯನ್ನು ಅನುಷ್ಠಾನಗೊಳಿಸುವವರು ಯಾರು ?
ಎ. ಕೇಂದ್ರ ಸರ್ಕಾರ
ಬಿ. ಭಾರತೀಯ ರಿಜರ್ವ್ ಬ್ಯಾಂಕ್
ಸಿ. ಯೋಜನಾ ಆಯೋಗ
ಡಿ. ಹಣಕಾಸು ಆಯೋಗ
ಉತ್ತರ:
82. ಆರ್ಥಿಕ ಅಭಿವೃದ್ಧಿಯೊಂದಿಗೆ ಸ್ಥೂಲದೇಶೀಯ ಉತ್ಪನ್ನದಲ್ಲಿನ ಸೇವಾಕ್ಷೇತ್ರದ ಪಾಲು
ಎ. ಹೆಚ್ಚಾಗುತ್ತದೆ
ಬಿ. ಕಡಿಮೆಯಾಗುತ್ತದೆ
ಸಿ. ಏರಿಳಿತವಾಗುತ್ತದೆ
ಡಿ. ಸ್ಥಿರವಾಗಿರುತ್ತದೆ
ಉತ್ತರ:
83. ಸಾರ್ವಜನಿಕ ಸಾಲ ಎಂದರೆ
ಎ. ಸಾರ್ವಜನಿಕರು ಎತ್ತುವ ಸಾಲ
ಬಿ. ಭಾರತೀಯ ರಿಜರ್ವ್ ಬ್ಯಾಂಕ್ ಎತ್ತುವ ಸಾಲ
ಸಿ. ರಾಷ್ಟ್ರೀಕೃತ ಬ್ಯಾಂಕ್ ಗಳು ಎತ್ತುವ ಸಾಲ
ಡಿ. ಸರ್ಕಾರ ಎತ್ತುವ ಸಾಲ
ಉತ್ತರ:
84. ರಾಷ್ಟ್ರೀಯ ಯೋಜನಾ ಆಯೋಗವು
ಎ. ಒಂದು ಶಾಸನ ಬದ್ದ ಸಂಸ್ಥೆ
ಬಿ. ಒಂದು ತಾತ್ಕಾಲಿಕ ಸಂಸ್ಥೆ
ಸಿ. ಒಂದು ಕಾರ್ಯನಿರ್ವಾಹಕ ಸಂಸ್ಥೆ
ಡಿ. ಒಂದು ಸಲಹಾ ಸಂಸ್ಥೆ
ಉತ್ತರ:
85. ಕರ್ನಾಟಕದಲ್ಲಿ ಮಾನವ ಅಭಿವೃದ್ಧಿಯ ಮೊದಲ ವರದಿಯನ್ನು ಸಿದ್ಧಪಡಿಸಿದ ವರ್ಷ
ಎ. 1995
ಬಿ. 1999
ಸಿ. 2003
ಡಿ. 2007
ಉತ್ತರ:
86. 2001ನೇ ಜನಗಣತಿಯ ಪ್ರಕಾರ ಕರ್ನಾಟಕದ ಸಾಕ್ಷರತಾ ಪ್ರಮಾಣ ಎಷ್ಟು ?
ಎ. 55%
ಬಿ. 57%
ಸಿ. 65%
ಡಿ. 67%
ಉತ್ತರ:
87. ಕರ್ನಾಟಕದಲ್ಲಿ 'ವಿಶ್ವ' ಎನ್ನುವುದು ಒಂದು ಗ್ರಾಮೀಣ
ಎ. ಕೈಗಾರಿಕಾ ಅಭಿವೃದ್ಧಿ ಕಾರ್ಯಕ್ರಮ
ಬಿ. ವ್ಯವಸಾಯ ಅಭಿವೃದ್ಧಿ ಕಾರ್ಯಕ್ರಮ
ಸಿ. ಮೂಲ ಸೌಕರ್ಯ ರಚನಾ ಅಭಿವೃದ್ಧಿ ಕಾರ್ಯಕ್ರಮ
ಡಿ. ಉತ್ಪಾದಕತಾ ಉದ್ಯೋಗ ಕಾರ್ಯಕ್ರಮ
ಉತ್ತರ:
88. ಕಾವೇರಿ ನೀರಿನ ಹಂಚಿಕೆಯಲ್ಲಿ ಭಾಗಿಯಾಗಿರುವ ನದೀತೀರದ ಮಾಲೀಕತ್ವದ ರಾಜ್ಯಗಳು ಯಾವುವು ?
ಎ. ಕರ್ನಾಟಕ, ಕೇರಳ, ಪಾಂಡಿಚೇರಿ ಮತ್ತು ಗೋವಾ
ಬಿ. ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪಾಂಡಿಚೇರಿ
ಸಿ. ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಗೋವಾ
ಡಿ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ
ಉತ್ತರ:
89. ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆಯ ಪ್ರಮುಖ ಮೂಲ ಯಾವುದು ?
ಎ. ನೀರು
ಬಿ. ಕಲ್ಲಿದ್ದಲು
ಸಿ. ಥೋರಿಯಂ
ಡಿ. ಯುರೇನಿಯಂ
ಉತ್ತರ:
90. ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನಗಳನ್ನು ಸರಿಪಡಿಸುವುದಕ್ಕಾಗಿ ರಚಿತವಾದ ಉನ್ನತ ಅಧಿಕಾರ ಸಮಿತಿಯ ಅಧ್ಯಕ್ಷರಾಗಿದ್ದವರು ಯಾರು ?
ಎ. ಡಾ. ವಿ.ಕೆ.ಗೋಕಾಕ್
ಬಿ. ಡಾ. ಹಾವನೂರ್
ಸಿ. ಡಾ. ಡಿ.ಎಂ.ನಂಜುಡಪ್ಪ
ಡಿ. ಡಾ. ವೆಂಕಟಗಿರಿಗೌಡ
ಉತ್ತರ:
91. ಈ ಕೆಳಕಂಡ ವಿದ್ಯಮಾನದಿಂದಾಗಿ ಮರುಭೂಮಿಯಲ್ಲಿ ಮರೀಚಿಕೆಗಳು ಕಾಣಿಸಿಕೊಳ್ಳುತ್ತವೆ.
ಎ. ಬೆಳಕಿನ ವ್ಯತಿಕರಣ
ಬಿ. ಬೆಳಕಿನ ಚದುರುವಿಕೆ
ಸಿ. ಬೆಳಕಿನ ದುಪ್ಪಟ್ಟು ವಕ್ರೀಭವನ
ಡಿ. ಬೆಳಕಿನ ಸಂಪೂರ್ಣ ಆಂತರಿಕ ಪ್ರತಿಫಲನ
ಉತ್ತರ:
92. ಒಂದು ಅತಿವಾಹಕದ ವಾಹಕತ್ವವು
ಎ. ಅತ್ಯಧಿಕ
ಬಿ. ಅಪರಿಮಿತ
ಸಿ. ಕಡಿಮೆ
ಡಿ. ಸೊನ್ನೆ
ಉತ್ತರ:
93. ಮಂಜಿನ ಮೂಲಕ ಏನೂ ಕಾಣಿಸುವುದಿಲ್ಲ ಏಕೆಂದರೆ,
ಎ. ಮಂಜಿನಲ್ಲಿರುವ ಹನಿ ಬಿಂದುಗಳು ಬೆಳಕನ್ನು ಚದುರಿಸುತ್ತವೆ
ಬಿ. ಮಂಜಿನ ವಕ್ರೀಭವನ ಸೂಚಿಯು ಅಪರಿಮಿತ
ಸಿ. ಮಂಜಿನಲ್ಲಿರುವ ಹನಿ ಬಿಂದುಗಳಲ್ಲಿ ಬೆಳಕು ಸಂಪೂರ್ಣ ಪ್ರತಿಫಲನಕ್ಕೆ ಗುರಿಯಾಗುತ್ತದೆ
ಡಿ. ಮಂಜು ಬೆಳಕನ್ನು ಹೀರಿಕೊಳ್ಳುತ್ತದೆ.
ಉತ್ತರ:
94. 'ಬೆಳಕಿನ ವರ್ಷ' ಎನ್ನುವುದು
ಎ. ಕಾಲದ ಏಕಮಾನ
ಬಿ. ದೂರದ ಏಕಮಾನ
ಸಿ. ಬೆಳಕಿನ ಏಕಮಾನ
ಡಿ. ಬೆಳಕಿನ ತೀವ್ರತೆಯ ಏಕಮಾನ
ಉತ್ತರ:
95. ಸೌರವ್ಯೂಹದಲ್ಲಿ ಅತ್ಯಂತ ಸಾಂದ್ರವಾದ ಗ್ರಹ ಯಾವುದು ?
ಎ. ಸೂರ್ಯ
ಬಿ. ಬುಧ
ಸಿ. ಶನಿ
ಡಿ. ಭೂಮಿ
ಉತ್ತರ:
96. ಸಮಾನಾಂತರವಾದ ಎರಡು ಕನ್ನಡಿಗಳ ನಡುವೆ ಒಂದು ವಸ್ತುವನ್ನು ಇರಿಸಿದಾಗ ಉಂಟಾಗುವ ಪ್ರತಿಬಿಂಬಗಳ ಸಂಖ್ಯೆ ಎಷ್ಟು ?
ಎ. ಎಂಟು
ಬಿ. ಎರಡು
ಸಿ. ಅಪರಿಮಿತ
ಡಿ. ಮೂವತ್ತೆರಡು
ಉತ್ತರ:
97. ಜಡ ಅನಿಲಗಳು
ಎ. ನೀರಿನಲ್ಲಿ ಬೆರೆಯುತ್ತವೆ
ಬಿ. ಸ್ಥಿರವಲ್ಲ
ಸಿ. ರಾಸಾಯನಿಕವಾಗಿ ತುಂಬಾ ನಿಷ್ಕ್ರಿಯ
ಡಿ. ರಾಸಾಯನಿಕವಾಗಿ ತುಂಬಾ ಸಕ್ರಿಯ
ಉತ್ತರ:
98. ಪರಮಾಣು ಸಂಖ್ಯೆ 7 ಇರುವ ಒಂದು ಪರಮಾಣುವಿನಲ್ಲಿ
ಎ. 7 ನ್ಯೂಟ್ರಾನ್ ಗಳು ಇರುತ್ತವೆ.
ಬಿ. 7 ಪ್ರೋಟಾನ್ ಗಳು ಇರುತ್ತವೆ.
ಸಿ. 5 ಪ್ರೋಟಾನ್ ಮತ್ತು 2 ನ್ಯೂಟ್ರಾನ್ ಇರುತ್ತವೆ.
ಡಿ. 7 ಎಲೆಕ್ಟ್ರಾನ್ ಮತ್ತು 7 ಪ್ರೋಟಾನ್ ಇರುತ್ತವೆ.
ಉತ್ತರ:
99. ಇದರಲ್ಲಿ ಯಾವುದು ರಾಸಾಯನಿಕ ಗೊಬ್ಬರ
ಎ. ಸೋಡಿಯಂ ನೈಟ್ರೈಟ್
ಬಿ. ಸೋಡಿಯಂ ಕಾರ್ಬೋನೇಟ್
ಸಿ. ಸೋಡಿಯಂ ಪರಾಕ್ಸೈಡ್
ಡಿ. ಸೋಡಿಯಂ ಥಯೋ ಸಲ್ಫೈಟ್
ಉತ್ತರ:
100. ವಜ್ರದ ನಂತರ ಕಠಿಣವಾದುದೆಂದು ನಮಗೆ ಗೊತ್ತಿರುವ ಪದಾರ್ಥ
ಎ. ಗ್ರಾಫೈಟ್
ಬಿ. ಕಾರ್ಬೋರಂಡಮ್
ಸಿ. ಕ್ಯಾಲ್ಸಿಯಂ ಕಾರ್ಬೈಡ್
ಡಿ. ಇದಾವುದೂ ಅಲ್ಲ
ಉತ್ತರ:
101. ನೀರಿನ ತಾತ್ಕಾಲಿಕ ಕಠಿಣತೆಗೆ ಈ ಕೆಳಕಂಡ ಅಂಶ ಕಾರಣ
ಎ. ಮೆಗ್ನೀಸಿಯಂ ಸಲ್ಫೈಟ್
ಬಿ. ಕ್ಯಾಲ್ಸಿಯಂ ಕ್ಲೋರೈಡ್
ಸಿ. ಸೋಡಿಯಂ ಬೈ ಕಾರ್ಬೋನೇಟ್
ಡಿ. ಕ್ಯಾಲ್ಸಿಯಂ ಬೈ ಕಾರ್ಬೋನೇಟ್
ಉತ್ತರ:
102. ಭೂಮಿಯಿಂದ ನೋಡುತ್ತಿರುವ ವ್ಯಕ್ತಿಗೆ ನಕ್ಷತ್ರಗಳು ಮಿನುಗುತ್ತಿರುವಂತೆ ಕಾಣಿಸುತ್ತವೆ. ಇದಕ್ಕೆ ಕಾರಣ
ಎ. ಭೂಮಿಯ ವಾತಾವರಣದಲ್ಲಿ ಆಗುವಂತಹ ವಕ್ರೀಭವನದ ಏರಿಳಿತಗಳು
ಬಿ. ನಕ್ಷತ್ರಗಳ ಸ್ವಂತ ವಾತಾವರಣದಲ್ಲಿ ನಕ್ಷತ್ರದ ಬೆಳಕಿನ ಆವರ್ತಾಂಕ ಹೀರಿಕೆ
ಸಿ. ಭೂಮಿಯ ವಾತಾವರಣದಿಂದ ನಕ್ಷತ್ರದ ಬೆಳಕಿನ ಆವರ್ತಾಂಕ ಹೀರಿಕೆ
ಡಿ. ನಕ್ಷತ್ರಗಳು ನಿರಂತರವಾಗಿ ಬೆಳಕನ್ನು ಹೊರಸೂಸುವುದಿಲ್ಲ ಎಂಬ ಕಾರಣದಿಂದ
ಉತ್ತರ:
103. 10 ಪುರುಷರು ಮತ್ತು 18 ಹುಡುಗರು ಒಂದು ಕೆಲಸವನ್ನು 15 ದಿನಗಳಲ್ಲಿ ಮಾಡಿದರೆ 25 ಪುರುಷರು ಮತ್ತು 15 ಹುಡುಗರು ಒಟ್ಟಾಗಿ ಇದರ ಎರಡರಷ್ಟು ಕೆಲಸವನ್ನು ಎಷ್ಟು ದಿನದಲ್ಲಿ ಮಾಡುತ್ತಾರೆ ?
ಎ. ನಾಲ್ಕೂವರೆ ದಿನಗಳು
ಬಿ. 9 ದಿನಗಳು
ಸಿ. 8 ದಿನಗಳು
ಡಿ. 36 ದಿನಗಳು
ಉತ್ತರ:
104. ಕೆಳಕಂಡ ಸರಣಿಯಲ್ಲಿ ತಪ್ಪು ಸಂಖ್ಯೆ ಯಾವುದು ?
22, 33, 66, 99, 121, 279, 594
ಎ. 33
ಬಿ. 121
ಸಿ. 279
ಡಿ. 594
ಉತ್ತರ:
105. ಐದು ಬಾಳೆಹಣ್ಣು ಮತ್ತು ನಾಲ್ಕು ಸೇಬು ಹಣ್ಣುಗಳ ಬೆಲೆಯು ಮೂರು ಬಾಳೆಹಣ್ಣು ಮತ್ತು ಏಳು ಸೇಬುಹಣ್ಣುಗಳಷ್ಟು ಆಗುತ್ತದೆ. ಒಂದು ಬಾಳೆಹಣ್ಣಿನ ವ್ಯಚ್ಚಕ್ಕೂ ಮತ್ತು ಒಂದು ಸೇಬುಹಣ್ಣಿನ ವ್ಯಚ್ಚಕ್ಕೂ ಇರುವ ಅನುಪಾತ ?
ಎ. 3:2
ಬಿ. 4:3
ಸಿ. 3:4
ಡಿ. 1:3
ಉತ್ತರ:
106. ಬಟ್ಟೆ ವ್ಯಾಪಾರಿಯೊಬ್ಬ ಬೆಲೆಗಳಲ್ಲಿ 25% ರಿಯಾಯಿತಿ ಘೋಷಿಸುತ್ತಾನೆ. ವ್ಯಕ್ತಿಯೊಬ್ಬನು ಇದರಲ್ಲಿ 40 ರೂ. ಗಳ ರಿಯಾಯಿತಿ ಪಡೆಯಬೇಕಾದರೆ ಪ್ರತಿಯೊಂದು32 ರೂ. ಬೆಲೆಯ ಶರ್ಟ್ ಗಳಲ್ಲಿ ಎಷ್ಟು ಶರ್ಟ್ ಗಳನ್ನು ಆತ ಖರೀದಿಸಬೇಕು ?
ಎ. 5
ಬಿ. 6
ಸಿ. 7
ಡಿ. 10
ಉತ್ತರ:
107. ಮೂರು ವರ್ಷಗಳ ಹಿಂದೆ A ಮತ್ತು B ಗಳ ಸರಾಸರಿ ಆಯಸ್ಸು 18 ವರ್ಷ ಆಗಿತ್ತು. ಈಗ ಇವರೊಂದಿಗೆ C ಸೇರಿಕೊಂಡು ಸರಾಸರಿ ವಯಸ್ಸು 22 ವರ್ಷ ಆಗಿದೆ. ಹಾಗಿದ್ದರೆ ಈಗ C ಯ ವಯಸ್ಸೆಷ್ಟು ?
ಎ. 24 ವರ್ಷ
ಬಿ. 27 ವರ್ಷ
ಸಿ. 28 ವರ್ಷ
ಡಿ. 30 ವರ್ಷ
ಉತ್ತರ:
108. Energy Platation ಎಂಬುದು ಯಾವುದರ ಕೃಷಿಗೆ ಸಂಬಂಧಿಸಿದೆ ?
ಎ. ಗೋಧಿ
ಬಿ. ಕಾಫಿ
ಸಿ. ಮೆಕ್ಕೆಜೋಳ
ಡಿ. ಜಟ್ರೋಪಾ
ಉತ್ತರ:
109. ಮೆಕ್ಕೆಜೋಳದಲ್ಲಿ ಟ್ರಾನ್ಸ್ ಪೋಸಾನ್ಸ್ (ನೆಗೆಯುವ ವಂಶವಾಹಿಗಳು) ಕಂಡು ಹಿಡಿದವರು ಯಾರು ?
ಎ. ಹ್ಯೂಗೋ ಡಿ ವ್ರೈಸ್
ಬಿ. ಬಾರ್ಬರಾ ಮ್ಯಾಕ್ಲಿಂಟಾಕ್
ಸಿ. ವ್ಯಾಟ್ಸನ್ ಮತ್ತು ಕ್ರಿಕ್
ಡಿ. ಜಾನ್ ಗ್ರೇಗರ್ ಮೆಂಡಲ್
ಉತ್ತರ:
110. ಇವುಗಳಲ್ಲಿ ಮೊಟ್ಟೆ ಇಡುವ ಸಸ್ತನಿ ಯಾವುದು ?
ಎ. ಶ್ರೂ
ಬಿ. ಬಾವಲಿ
ಸಿ. ಎಕಿಡ್ನಾ
ಡಿ. ತಿಮಿಂಗಿಲ
ಉತ್ತರ:
111. ಇವುಗಳಲ್ಲಿ ಯಾವುದು DNAಗಳಲ್ಲಿನ ಸರಿಯಾದ ಪೂರಕ ಮೂಲ ಜೋಡಿಯಾಗುವಿಕೆಯಾಗಿದೆ ?
ಎ. A=T G=C
ಬಿ. A=G C=T
ಸಿ. A=T C=G
ಡಿ. A=G C=T
ಉತ್ತರ:
112. ಆರ್ಕಿಯಾಪ್ಟೆರಿಕ್ಸ್ ಈ ಕೆಳಕಂಡವುಗಳ ನಡುವಿನ ಸಂಪರ್ಕ ಕೊಂಡಿಗೆ ಆಧಾರವಾಗಿದೆ
ಎ. ಉಭಯ ಪಾದಿಗಳು ಮತ್ತು ಉರಗಗಳು
ಬಿ. ಉರಗಗಳು ಮತ್ತು ಸಸ್ತನಿಗಳು
ಸಿ. ಪಕ್ಷಿಗಳು ಮತ್ತು ಸಸ್ತನಿಗಳು
ಡಿ. ಉರಗಗಳು ಮತ್ತು ಪಕ್ಷಿಗಳು
ಉತ್ತರ:
113. ಪರಿಸರವನ್ನು ಕುರಿತ ಮೊದಲ ವಿಶ್ವಸಂಸ್ಥೆಯ ಸಮಾವೇಶವು ಜೂನ್ 1972ರಲ್ಲಿ ಎಲ್ಲಿ ನಡೆಯಿತು ?
ಎ. ರಿಯೊಡಿ ಜೆನೈರೋ
ಬಿ. ಜೋಹಾನ್ಸ್ ಬರ್ಗ್
ಸಿ. ಸ್ಟಾಕ್ ಹೋಂ
ಡಿ. ಕೆನಡಾ
ಉತ್ತರ:
114. ಭಾರತದಲ್ಲಿ ಪ್ರಾಜೆಕ್ಟ್ ಎಲಿಫೆಂಟ್ ಆರಂಭವಾದ ವರ್ಷ
ಎ. 1965
ಬಿ. 1980
ಸಿ. 1992
ಡಿ. 1995
ಉತ್ತರ:
115. ಜಾಗತೀಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಅಧ್ಯಯನದಲ್ಲಿ ಈ ಕೆಳಕಂಡವುಗಳಲ್ಲಿ ಯಾವುದು ನೈಸರ್ಗಿಕವಾದ "Carbon Sink" ಅಲ್ಲ
ಎ. ಮಣ್ಣುಗಳು
ಬಿ. ಸಾಗರಗಳು
ಸಿ. ಅರಣ್ಯಗಳು
ಡಿ. ಕಟ್ಟಡಗಳು
ಉತ್ತರ:
116. 2006-07ರಲ್ಲಿ 'ಬಸವ ಪ್ರಶಸ್ತಿ'ಯನ್ನು ಯಾರಿಗೆ ನೀಡಲಾಯಿತು ?
ಎ. ಡಾ. ಎ.ಪಿ.ಜೆ.ಅಬ್ದುಲ್ ಕಲಾಮ್
ಬಿ. ಡಾ. ಕೆ. ಕಸ್ತೂರಿ ರಂಗನ್
ಸಿ. ಡಾ. ಸಿ.ಎನ್.ಆರ್. ರಾವ್
ಡಿ. ಡಾ. ಯು.ಆರ್.ರಾವ್
ಉತ್ತರ:
117. ಬೆಂಗಳೂರು-ಮಂಗಳೂರು ರೈಲು ಸೇವೆಯು ಪ್ರಯಾಣಿಕರಿಗಾಗಿ ಯಾವ ವರ್ಷದಿಂದ ಕಾರ್ಯಾಚರಣೆ ಆರಂಭಿಸಿತು ?
ಎ. 2008
ಬಿ. 2007
ಸಿ. 2006
ಡಿ. 2005
ಉತ್ತರ:
118. ನ್ಯಾನೋ ವಿಜ್ಞಾನದಲ್ಲಿ ಎಂಟಿಕ್ ಆರಂಭಿಸಿದ ಕರ್ನಾಟಕದ ಮೊದಲ ವಿಶ್ವವಿದ್ಯಾಲಯ ಯಾವುದು ?
ಎ. ಬೆಂಗಳೂರು ವಿಶ್ವವಿದ್ಯಾಲಯ
ಬಿ. ಕುವೆಂಪು ವಿಶ್ವವಿದ್ಯಾಲಯ
ಸಿ. ಮೈಸೂರು ವಿಶ್ವವಿದ್ಯಾಲಯ
ಡಿ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ
ಉತ್ತರ:
119. ಶರಾವತಿ ನದಿಗೆ ಅಡ್ಡವಾಗಿ 1964ರಲ್ಲಿ ಲಿಂಗನಮಕ್ಕಿ ಅಣೆಕಟ್ಟನ್ನು ನಿರ್ಮಿಸಲಾಯಿತು. 2007ರ ಕೊನೆಯವರೆಗೂ ಇದು ಎಷ್ಟು ಸಲ ಗರಿಷ್ಠ ನೀರಿನ ಮಟ್ಟದವರೆಗೆ ಭರ್ತಿಯಾಗಿದೆ ?
ಎ. 10 ಸಲ
ಬಿ. 12 ಸಲ
ಸಿ. 16 ಸಲ
ಡಿ. 22 ಸಲ
ಉತ್ತರ:
120. ಈಗಿನ ಕಾಮನ್ ವೆಲ್ತ್ ಪ್ರಧಾನ ಕಾರ್ಯದರ್ಶಿಯಾರು ?
ಎ. ಶ್ರೀ ಕಮಲೇಶ್ ಶರ್ಮಾ
ಬಿ. ಶ್ರೀ ಡಾನ್ ಮೆಕೆನಾನ್
ಸಿ. ಶ್ರೀ ಬಾನ್ ಕಿಮೂನ್
ಡಿ. ಶ್ರೀ ನವಲ್ ಕಿಶೋರ್ ಶರ್ಮ
ಉತ್ತರ:
121. 1000 MW ಗಳ ಎರಡು ನ್ಯೂಕ್ಇಯರ್ ರಿಯಾಕ್ಟರ್ ಗಳನ್ನು ತಮಿಳುನಾಡಿನ ಕೂಡನ್ ಕುಳಂ ಎಂಬಲ್ಲಿ ನಿರ್ಮಿಸಲಾಗಿದೆ. ಇದರ ಜೀವಮಾನದ ವರೆಗೆ ಇಂಧನವನ್ನು ಒದಗಿಸುವ ದೇಶ ಯಾವುದು ?
ಎ. ಆಸ್ಟ್ರೇಲಿಯಾ
ಬಿ. ಫ್ರಾನ್ಸ್
ಸಿ. ರಷ್ಯಾ
ಡಿ. ಅಮೇರಿಕಾ ಸಂಯುಕ್ತ ಸಂಸ್ಥಾನ
ಉತ್ತರ:
122. ಅಂತರಾಷ್ಟ್ರೀಯ ಡೇಟ್ ಲೈನ್ ಯಾವ ಸ್ಥಳದಲ್ಲಿದೆ ?
ಎ. ಅರ್ಕಾಟಿಕ್ ಸಾಗರ
ಬಿ. ಅಟ್ಲಾಂಟಿಕ್ ಸಾಗರ
ಸಿ. ಹಿಂದೂ ಮಹಾಸಾಗರ
ಡಿ. ಪೆಸಿಫಿಕ್ ಸಾಗರ
ಉತ್ತರ:
123. ರಾಷ್ಟ್ರೀಯ ಮ್ಯಾರಿಟೈಮ್ ಡೇ (ಸಾಗರ ದಿನವೆಂದು) ಪ್ರತಿ ವರ್ಷ ಯಾವ ದಿನದಂದು ಆಚರಿಸಲಾಗುತ್ತದೆ ?
ಎ. ಡಿಸೆಂಬರ್ 5ನೇ ದಿನ
ಬಿ. ಸೆಪ್ಟೆಂಬರ್ 5ನೇ ದಿನ
ಸಿ. ಜುಲೈ 5ನೇ ದಿನ
ಡಿ. ಏಪ್ರಿಲ್ 5ನೇ ದಿನ
ಉತ್ತರ:
124. ನಮ್ಮ ದೇಶದ ಪ್ರಥಮ ಸಾಮಾನ್ಯ ನ್ಯಾಯ ತಿರ್ಮಾನ ಸಂಚಾರಿ ನ್ಯಾಯಾಲಯವನ್ನು ಪುನ್ಬಾನಾ ಗ್ರಾಮದಲ್ಲಿ ಉದ್ಘಾಟಿಸಲಾಯಿತು. ಇದು ಯಾವ ರಾಜ್ಯದಲ್ಲಿದೆ ?
ಎ. ಆಂಧ್ರಪ್ರದೇಶ
ಬಿ. ಬಿಹಾರ್
ಸಿ. ಹರಿಯಾಣ
ಡಿ. ಪಂಜಾಬ್
ಉತ್ತರ:
125. ಭಾರತದ ಈಗಿನ ಉಪರಾಷ್ಟ್ರಪತಿ ಯಾರು ?
ಎ. ಶ್ರೀ ಮೊಹಮ್ಮದ್ ಹಮೀದ್ ಅನ್ಸಾರಿ
ಬಿ. ಶ್ರೀ ಮೊಹಮ್ಮದ್ ಇಕ್ಬಾಲ್
ಸಿ. ಶ್ರೀಮತಿ ನಜ್ಮಾ ಹೆಪ್ತುಲ್ಲಾ
ಡಿ. ಶ್ರೀ ರಶೀದ್ ಮಸೂರ್
ಉತ್ತರ:
126. ಇತ್ತೀಚೆಗೆ ಒಂದು ದೇಶದ ಆಳುವ ನಾಯಕನನ್ನು ಬಹುಗುರುತರವಾದ ಅಪರಾಧಕ್ಕಾಗಿ ಅಂತರಾಷ್ಟ್ರೀಯ ಅಪರಾಧ ನ್ಯಾಯಾಲಯವು ಆರೋಪಿ ಎಂದು ಕರೆಯಿತು. ಈ ನಾಯಕ ಯಾರು ?
ಎ. ಇಸ್ರೇಲಿನ ಯಹೂದ್ ಉಲ್ಮರ್ಟ್
ಬಿ. ಬೋಸ್ನಿಯಾ-ಹರ್ಸೆಗೋವಿನಾದ ರಾಡೋವನ್ ಕರಾಡ್ಜಿಕ್
ಸಿ. ಜಿಂಬಾಂಬ್ವೆಯ ರಾಬರ್ಟ್ ಮುಗಾಬೆ
ಡಿ. ಸುಡಾನಿನ ಉಮರ್ ಅಲ್ ಬಷೀರ್
ಉತ್ತರ:
127. ಒಲಂಪಿಕ್ ಜ್ಯೋತಿಯಿಂದ ಒಲಂಪಿಕ್ ಕುಂಡವನ್ನು ಹೊತ್ತಿಸುವ ಮೂಲಕ ಬೀಜಿಂಗ್ ಒಲಂಪಿಕ್ ಆರಂಭವಾಯಿತು. ಈ ಜ್ಯೋತಿಯನ್ನು ದೀರ್ಘ ರೀಲೆಯ ನಂತರ ಬೀಜಿಂಗಿಗೆ ತರಲಾಗಿತ್ತು. ಈ ರಿಲೇ ವಾಸ್ತವವಾಗಿ ಆರಂಭವಾಗುವ ಮೊದಲು ಈ ಜ್ಯೋತಿಯನ್ನು ಪ್ರಥಮವಾಗಿ ಹೊತ್ತಿಸಿದ ಸ್ಥಳ ಯಾವುದು ?
ಎ. ಗ್ರೀಸ್ ನಲ್ಲಿರುವ ಅಥೆನ್ಸ್
ಬಿ. ಗ್ರೀಸ್ ನಲ್ಲಿರುವ ಒಲಂಪಿಯಾ
ಸಿ. ಚೀನಾದ ಬೀಜಿಂಗ್
ಡಿ. ಆಸ್ಟ್ರೇಲಿಯಾದ ಸಿಡ್ನಿ
ಉತ್ತರ:
128. ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಸಾರ್ಕ್ ಶೃಂಗ ಸಭೆಯಲ್ಲಿ ಯಾವ ದೇಶಗಳ ಗುಂಪಿನವರು ವೀಕ್ಷಕರಾಗಿ ಭಾಗವಹಿಸಿದ್ದರು ?
ಎ. ಚೀನಾ, ಭೂತಾನ್ ಮತ್ತು ಸಂಯುಕ್ತ ಸಂಸ್ಥಾನ
ಬಿ. ಜಪಾನ್, ಬರ್ಮಾ ಮತ್ತು ಅಘ್ಫಾನಿಸ್ಥಾನ
ಸಿ. ಇರಾನ್, ಚೀನಾ ಮತ್ತು ಅಘ್ಫಾನಿಸ್ತಾನ
ಡಿ. ಜಪಾನ್, ಚೀನಾ ಮತ್ತು ಸಂಯುಕ್ತ ಸಂಸ್ಥಾನ
ಉತ್ತರ:
129. ಭಾರತ-ಅಮೇರಿಕಾ ನ್ಯೂಕ್ಲಿಯರ್ ಒಪ್ಪಂದ ಕುರಿತಂತೆ ಭಾರತದ ಕರಡು ಪ್ರಸ್ತಾವಗಳನ್ನು ಪರಿಶೀಲಿಸಲು ಮತ್ತು ಅಂಗೀಕರಿಸಲು ಇತ್ತೀಚೆಗೆ ಯಾವ ಸ್ಥಳದಲ್ಲಿ ಅಂತರಾಷ್ಟ್ರೀಯ ಅಣುಶಕ್ತಿ ಏಜೆನ್ಸಿಯು ಸಭೆ ಸೇರಿತ್ತು ?
ಎ. ವಿಯೆನ್ನಾ
ಬಿ. ಜೂರಿಟ್
ಸಿ. ಬರ್ಲಿನ್
ಡಿ. ಪ್ಯಾರಿಸ್
ಉತ್ತರ:
130. ಇತ್ತೀಚೆಗೆ ಸಂಸತ್ತನ್ನು ಕಂಪಿಸುವಂತೆ ಮಾಡಿದ 'ಮತಕ್ಕಾಗಿ ಹಣ ನೀಡಿಕೆ ಹಗರಣ'ಕ್ಕೆ ಸಂಬಂಧಿಸಿದಂತೆ ಸಂಸದರಿಗೆ ಹಣದ ಆಮಿಷ ನೀಡುವ ಈ ಪ್ರಕ್ರಿಯೆಯನ್ನು ತಾನು ರಹಸ್ಯವಾಗಿ ವಿಡಿಯೋದಲ್ಲಿ ದಾಖಲು ಮಾಡಿದ್ದೇನೆ ಎಂದು ಬಹಿರಂಗ ಪಡಿಸಿದ ವಾರ್ತಾವಾಹಿನಿ ಯಾವುದು ?
ಎ. ಸಿ.ಎನ್.ಎನ್- ಐ.ಬಿ.ಎನ್
ಬಿ. ಹೆಡ್ ಲೈನ್ಸ್ ಟು ಡೇ
ಸಿ. ಎನ್.ಡಿ.ಟಿವಿ
ಡಿ. ಆಜ್ ತಕ್
ಉತ್ತರ:
131. ಭಾರತದ ಕೇಂದ್ರೀಯ ತನಿಖಾ ಕಾರ್ಯಾಲಯದ ಇತ್ತೀಚಿನ ನಿರ್ದೇಶಕರಾಗಿ ನೇಮಕಗೊಳ್ಳುವ ಮೊದಲು ಶ್ರೀ ಅಶ್ವಿನಿ ಕುಮಾರ್ ಅವರು ಯಾವ ಹುದ್ದೆಯಲ್ಲಿದ್ದರು ?
ಎ. ಜಂಟಿ ನಿರ್ದೇಶಕರು ಸಿಬಿಐ
ಬಿ. ಪೋಲಿಸ್ ಮಹಾ ನಿರ್ದೇಶಕರು ಹಿಮಾಚಲ ಪ್ರದೇಶ
ಸಿ. ಹೆಚ್ಚುವರಿ ನಿರ್ದೇಶಕರು ಸಿಬಿಐ
ಡಿ. ಒರಿಸ್ಸಾದ ಐಪಿಎಸ್ ಅಧಿಕಾರಿ
ಉತ್ತರ:
132. ಉತ್ತರ ಭಾರತದಲ್ಲಿ ಸಂಬಂಧಿಸಿದ ಭೂ ಕುಸಿತದಲ್ಲಿ ನೂರಕ್ಕೂ ಹೆಚ್ಚು ಯಾತ್ರಾರ್ಥಿಗಳು ಮೃತಪಟ್ಟ ಇತ್ತೀಚಿನ ದುರದೃಷ್ಟಕರ ಘಟನೆಯಲ್ಲಿ ಈ ಯಾತ್ರಾರ್ಥಿಗಳು ತೆರಳುತ್ತಿದ್ದ ದೇವಾಲಯದ ಹೆಸರೇನು ?
ಎ. ಮನಸಾದೇವಿ ದೇವಾಲಯ
ಬಿ. ವೈಷ್ಣೋದೇವಿ ದೇವಾಲಯ
ಸಿ. ನೈನಾ ದೇವಿ ದೇವಾಲಯ
ಡಿ. ವಿಶ್ವನಾಥ ದೇವಾಲಯ
ಉತ್ತರ:
133. ವಿಶ್ವನಾಥನ್ ಆನಂದ್ ಅವರು ಇತ್ತೀಚೆಗೆ 13ನೇ ಗ್ರೀನ್ ಕೇಲಿಸಿಂಗ್ ರ್ಯಾಪಿಡ್ ವಿಶ್ವ ಚೆಸ್ ಚಾಂಪಿಯನ್ ಶಿಪ್ ಗೆದ್ದುಕೊಂಡರು. ಇದುವರೆಗೆ ಅವರು ಎಷ್ಟು ಬಾರಿ ಈ ಬಹುಮಾನವನ್ನು ಗೆದ್ದುಕೊಂಡಿದ್ದಾರೆ ?
ಎ. ಐದು
ಬಿ. ಏಳು
ಸಿ. ಒಂಬತ್ತು
ಡಿ. ಹನ್ನೊಂದು
ಉತ್ತರ:
134. ಬೆಂಗಳೂರಿನಲ್ಲಿ ಇತ್ತೀಚೆಗೆ ಆರಂಭಗೊಂಡ ನೂತನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾರಣವಾದ ಖಾಸಗೀ ಕಂಪೆನಿಗಳ ಒಕ್ಕೂಟ ಯಾವುದು ?
ಎ. GVK Group- Bidvest- Airports South Africa Consortium
ಬಿ. Siemens-Zurich Airport-Larsen and Toubro Consortium
ಸಿ. GMR Group- Malaysia Airports Holding Consortium
ಡಿ. ADP (France)- Abu Dhabi Investments-Joannou and Paraskevaies Overseas
ಉತ್ತರ:
135. ಭಾರತದಲ್ಲಿ ಒಂದು ವಿಮಾನ ನಿಲ್ದಾಣವನ್ನು ಯಾವಾಗ ಅತಿ ಸೂಕ್ಷ್ಮ ಎಂದು ಗುರುತಿಸಲಾಗುವುದೆಂದರೆ, ಅದು ಈ ಕೆಳಗಿನ ಸಾಗಾಣಿಕೆಯ ಸ್ಥಳವಾದಾಗ
ಎ. ಮಾದಕ ವಸ್ತು ತಂಡಗಳಿಗೆ
ಬಿ. ಸರಕ ಸಾಗಾಟಕ್ಕೆ
ಸಿ. ಪುಷ್ಪಗಳ ರಫ್ತಿಗೆ
ಡಿ. ಅತಿಗಣ್ಯ ಪ್ರವಾಸಿಗರಿಗೆ
ಉತ್ತರ:
136. ಅಮೇರಿಕಾ ಸಂಯುಕ್ತ ಸಂಸ್ಥಾನವು ಇರಾನ್ ನೊಂದಿಗೆ ತನ್ನ ರಾಜತಾಂತ್ರಿಕ ಸಂಬಂಧವನ್ನು ಕಡಿದು ಕೊಂಡ ವರ್ಷ
ಎ. 1980
ಬಿ. 1981
ಸಿ. 1982
ಡಿ. 1983
ಉತ್ತರ:
137. ಮಧ್ಯಪ್ರಾಚ್ಯದ ಆಲ್ ಮನಾರ್ ಒಂದು
ಎ. ರಾಜಕೀಯ ಪಕ್ಷ
ಬಿ. ದೂರದರ್ಶನ ಕೇಂದ್ರ
ಸಿ. ಬಂಡುಕೋರರ ತಂಡ
ಡಿ. ಯುದ್ಧ ಸ್ಮಾರಕ
ಉತ್ತರ:
138. ಭಾರತೀಯ ಸೇನೆಯು 'ಆಪರೇಷನ್ ಆಲ್ ಕ್ಲಿಯರ್' ನಡೆಸಿದ್ದು ಎಲ್ಲಿ ?
ಎ. ಜಮ್ಮು ಮತ್ತು ಕಾಶ್ಮೀರ
ಬಿ. ಶ್ರೀಲಂಕಾ
ಸಿ. ಪಂಜಾಬ್
ಡಿ. ಅಸ್ಸಾಂ
ಉತ್ತರ:
139. ಭಾರತವು ಇನ್ನೂ ಸಹಿ ಹಾಕಿಲ್ಲದ ಅಂತರಾಷ್ಟ್ರೀಯ ಒಪ್ಪಂದ ಕ್ಷೇತ್ರ ಯಾವುದು ?
ಎ. ಹವಾಮಾನ ಬದಲಾವಣೆ
ಬಿ. ಯುದ್ಧ ಖೈದಿಗಳು
ಸಿ. ಮಾದಕ ವಸ್ತು ಸಾಗಣೆ
ಡಿ. ಅಂತರ್ಜಾಲ ಕೃತಿಸ್ವಾಮ್ಯ
ಉತ್ತರ:
140. ಜಪಾನಿನ ಹೊಕೈಡೋನಲ್ಲಿ ನಡೆದ ಜಿ-8 ರಾಷ್ಟ್ರಗಳ ಶೃಂಗಸಭೆಯ ಮುಖ್ಯ ದಾಖಲೆ ವಿಷಯ
ಎ. ಜಾಗತಿಕ ವಾಣಿಜ್ಯ
ಬಿ. ಬೌದ್ಧಿಕ ಆಸ್ತಿ
ಸಿ. ಶಕ್ತಿ ಭದ್ರತೆ ಮತ್ತು ಹವಾಮಾನ ಬದಲಾವಣೆ
ಡಿ. ಸಾಮಾಜಿಕ ಅರಣ್ಯಗಾರಿಕೆ
ಉತ್ತರ:
141. ಸರ್ಕಾರಿ ಮಾಲೀಕತ್ವದ ಕೇಬಲ್ ಟೆಲಿವಿಷನ್ ಜಾಲವನ್ನು ಹೊಂದಿರುವ ಭಾರತದ ಪ್ರಥಮ ರಾಜ್ಯ
ಎ. ಕೇರಳ
ಬಿ. ಪಶ್ಚಿಮ ಬಂಗಾಳ
ಸಿ. ತಮಿಳುನಾಡು
ಡಿ. ಗುಜರಾತ್
ಉತ್ತರ:
142. ಭಾರತದಲ್ಲಿ ಕೇಂದ್ರ ಸರ್ಕಾರದ ಯಾವ ಇಲಾಖೆಯು ಕೌಶಲ್ಯ ಅಭಿವೃದ್ಧಿಯ ರಾಷ್ಟ್ರೀಯ ಮಂಡಳಿಯನ್ನು ಸ್ಥಾಪಿಸುತ್ತದೆ ?
ಎ. ಉದ್ಯೋಗ ಇಲಾಖೆ
ಬಿ. ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ
ಸಿ. ಸಮಾಜ ಕಲ್ಯಾಣ ಇಲಾಖೆ
ಡಿ. ಹಣಕಾಸು ಇಲಾಕೆ
ಉತ್ತರ:
143. ಭಾರತದ ಹಲವಾರು ರಾಜಕೀಯ ಪಕ್ಷಗಳು 123 ಒಪ್ಪಂದವನ್ನು ವಿರೋಧಿಸುತ್ತಿರುವುದಕ್ಕೆ ಕಾರಣವೇನೆಂದರೆ
a. ಅಮೇರಿಕಾ ಸಂಯುಕ್ತ ಸಂಸ್ಥಾನದ ಹೈಡ್ ಶಾಸನ
b. ಅದು ಭಾರತದ ಸಾರ್ವಭೌಮತೆಗೆ ಧಕ್ಕೆ ತರುತ್ತದೆ
c. ಅದು ಸಂಯುಕ್ತ ಸಂಸ್ಥಾನವನ್ನು ಪ್ರಬಲ ಪಾಲುದಾರನನ್ನಾಗಿ ನಾಡುತ್ತದೆ
d. ಎನ್.ಎಸ್.ಜಿ ಯಾವುದೇ ಬದ್ಧತೆಗೆ ಒಳಪಟ್ಟಿಲ್ಲ
ಎ. a, c ಮತ್ತು d
ಬಿ. a ಮತ್ತು d
ಸಿ. a,b ಮತ್ತು c
ಡಿ. a,b,c ಮತ್ತು d
ಉತ್ತರ:
144. ಭಾರತ ಸರ್ಕಾರದ ಅತ್ಯುಚ್ಚ ಕಾನೂನು ಅಧಿಕಾರಿ ಯಾರು ?
ಎ. ಭಾರತ ಸರ್ಕಾರದ ಕಾನೂನು ಸಚಿವರು
ಬಿ. ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯ ಮೂರ್ತಿಗಳು
ಸಿ. ಭಾರತದ ಸಾಲಿಸಿಟರ್ ಜನರಲ್ ಅವರು
ಡಿ. ಭಾರತದ ಅಟಾರ್ನಿ ಜನರಲ್ ರವರು
ಉತ್ತರ:
145. ಇತ್ತೀಚಿನ ಆಗುಹೋಗುಗಳು/ಘಟನೆಗಳು ಮತ್ತು ಅದು ನಡೆದ ನಗರ/ದೇಶವನ್ನು ಹೊಂದಿಸಿರಿ.
ಪಟ್ಟಿ1 ಪಟ್ಟಿ2
(ಘಟನೆಗಳು/ಆಗುಹೋಗುಗಳು) ( ನಗರ/ದೇಶ)
A. ಜುಲೈ 2008 WTO ಮಾತುಕತೆಗಳು 1. ಆಸ್ಟ್ರೀಯಾ
B. ಕಲ್ಲಿದ್ದಲ ಗಣಿಗಳಲ್ಲಿ ಉಕ್ಕಿದ ನೀರು 2. ವಿಯೆಟ್ನಾಂ
C. ಯೂರೋಕಪ್ ಫುಟ್ ಬಾಲ್ ಚಾಂಪಿಯನ್ ಶಿಪ್ 2008 3. ಚೀನಾ
D. ವಿಶ್ವಸುಂದರಿ ಸೌಂದರ್ಯ ಸ್ಪರ್ಧೆ ಜುಲೈ 2008 4. ಜಿನಿವಾ
ಎ. A-4, B-2, C-1, D-3
ಬಿ. A-2, B-3, C-4, D-1
ಸಿ. A-3, B-2, C-1, D-2
ಡಿ. A-3, B-2, C-4, D-1
ಉತ್ತರ:
146. 2008ರ ಮೇ ತಿಂಗಳ ಮೊದಲ ವಾರದಲ್ಲಿ ವಿನಾಶಕಾರಿ ಚಂಡಮಾರುತದ ಹಾವಳಿಗೆ ತುತ್ತಾದ ಏಷಿಯಾದ ದೇಶ ಯಾವುದು ?
ಎ. ಬಾಂಗ್ಲಾದೇಶ
ಬಿ. ವಿಯೆಟ್ನಾಂ
ಸಿ. ಥಾಯ್ ಲ್ಯಾಂಡ್
ಡಿ. ಮಯನ್ಮಾರ್
ಉತ್ತರ:
147. ಮೈಕ್ರೋಸಾಫ್ಟ್ ಸಂಸ್ಥೆಯು ಇತ್ತೀಚೆಗೆ ಈ ಕೆಳಕಂಡ ಕಂಪೆನಿಯ ಸ್ವಾಧೀನತಾ ಪ್ರಸ್ತಾಪವನ್ನು ಹಿಂತೆಗೆದುಕೊಂಡಿದ್ದರಿಂದ ಆ ಕಂಪೆನಿಯ ಶೇರು ಮೌಲ್ಯದಲ್ಲಿ ಗಣನೀಯ ಕುಸಿತ ಉಂಟಾಯಿತು. ಆ ಕಂಪೆನಿಯ ಹೆಸರೇನು ?
ಎ. ಯಾಹೂ!
ಬಿ. ಗೂಗಲ್
ಸಿ. ಮೈಸ್ಪೇಸ್
ಡಿ. ಯುಟ್ಯೂಬ್
ಉತ್ತರ:
148. 2007ರಲ್ಲಿ ಸ್ವಲ್ಪ ಕಾಲದವರೆಗೆ ಜಗತ್ತಿನ ಅತಿ ಸಿರಿವಂತ ವ್ಯಕ್ತಿ ಎನಿಸಿಕೊಂಡಿದ್ದ ಭಾರತೀಯ
ಎ. ಅಜೀಂ ಪ್ರೇಂ ಜಿ
ಬಿ. ಮುಕೇಶ್ ಅಂಬಾನಿ
ಸಿ. ಅನಿಲ್ ಅಂಬಾನಿ
ಡಿ. ರತನ್ ಟಾಟಾ
ಉತ್ತರ:
149. ಆಹಾರ ವಸ್ತುಗಳ ಅಧಿಕ ಬೆಲೆಯ ಕಾರಣದಿಂದಾಗಿ 2008ರ ಮೇ ತಿಂಗಳಿನಲ್ಲಿ ಬಹುದೊಡ್ಡ ದಂಗೆಗಳು ನಡೆದಂತಹ ಆಫ್ರಿಕಾದ ದೇಶ ಯಾವುದು ?
ಎ. ಸೋಮಾಲಿಯಾ
ಬಿ. ನೈಜೀರಿಯಾ
ಸಿ. ಇಥಿಯೋಪಿಯಾ
ಡಿ. ಸೂಡಾನ್
ಉತ್ತರ:
150. ಈಗ ಜಾರಿಯಲ್ಲಿರುವ ಅಂತರಾಷ್ಟ್ರೀಯ ಅಣು ಒಪ್ಪಂದಗಳ ಅನ್ವಯ
ಎ. ಭಾರತವು ಯಾವುದೇ ದೇಶದೊಂದಿಗೆ ನಾಗರಿಕ ಪರಮಾಣು ಸಹಯೋಗಗಳಿಗಾಗಿ ಮಾತ್ರ ದ್ವಿಪಕ್ಷೀಯ ಒಪ್ಪಂದವನ್ನು ಮಾಡಿಕೊಳ್ಳಬಹುದು ಮತ್ತು ಆ ಒಪ್ಪಂದವನ್ನು ಕಾರ್ಯರೂಪಕ್ಕೆ ತರಬಹದುದು.
ಬಿ. ಭಾರತವು ಯಾವುದೇ ದೇಶದೊಂದಿಗೆ ನಾಗರಿಕ ಹಾಗೂ ಮಿಲಿಟರಿ ಪರಮಾಣು ಸಹಯೋಗಕ್ಕಾಗಿ ಮಾತ್ರ ದ್ವಿಪಕ್ಷೀಯ ಒಪ್ಪಂದವನ್ನು ಮಾಡಿಕೊಳ್ಳಬಹುದು ಮತ್ತು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಏಜೆನ್ಸಿಯಿಂದ (IAEA) ಅನುಮತಿ ದೊರಕಿದ ನಂತರ ಮಾತ್ರವೇ ಆ ಒಪ್ಪಂದವನ್ನು ಕಾರ್ಯರೂಪಕ್ಕೆ ತರಬಹುದು.
ಸಿ. ಭಾರತವು ಯಾವುದೇ ದೇಶದೊಂದಿಗೆ ನಾಗರಿಕ ಹಾಗೂ ಮಿಲಿಟರಿ ಪರಮಾಣು ಸಹಯೋಗಕ್ಕಾಗಿ ದ್ವಿಪಕ್ಷೀಯ ಒಪ್ಪಂದವನ್ನು ಮಾಡಿಕೊಳ್ಳಬಹುದು ಮತ್ತು ಪರಮಾಣು ಸರಬರಾಜುದಾರರ ಸಮೂಹದಿಂದ (NSG) ಅನುಮತಿ ದೊರಕಿದ ನಂತರ ಮಾತ್ರವೇ ಆ ಒಪ್ಪಂದವನ್ನು ಕಾರ್ಯರೂಪಕ್ಕೆ ತರಬಹುದು.
ಡಿ. ಭಾರತವು ಯಾವುದೇ ದೇಶದೊಂದಿಗೆ ನಾಗರಿಕ ಪರಮಾಣು ಸಹಯೋಗಕ್ಕಾಗಿ ಮಾತ್ರ ದ್ವಿಪಕ್ಷೀಯ ಒಪ್ಪಂದವನ್ನು ಮಾಡಿಕೊಳ್ಳಬಹುದು ಮತ್ತು IAEA ಹಾಗೂ NSG ಗಳೆರಡರಿಂದಲೂ ಅನುಮತಿ ದೊರಕಿದ ನಂತರ ಮಾತ್ರವೇ ಆ ಒಪ್ಪಂದವನ್ನು ಕಾರ್ಯರೂಪಕ್ಕೆ ತರಬಹುದು.
ಉತ್ತರ:
########################
0 comments:
Post a Comment