e-ತಾಣದಲ್ಲಿ ಪ್ರಕಟವಾಗುವ ಹೊಸ ಪ್ರಶ್ನೋತ್ತರ ಮಾಲೆಯನ್ನ ನಿಮ್ಮ mailಮನೆ ಬಾಗಿಲಿಗೆ ತಲುಪಿಸಬೇಕೆ?

ನಿಮ್ಮ email addressನ ಇಲ್ಲಿ ನೀಡಿ:

.

ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

SDA Exam : 2008



{ ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ಕೆಳಗೆ ಉತ್ತರವನ್ನ ಬಿಳಿ ಬಣ್ಣದಲ್ಲಿ ಬರೆಯಲಾಗಿದೆ. ಪರೀಕ್ಷಾರ್ಥಿ ತಾನು ಉತ್ತರವನ್ನ ಮೊದಲು ಊಹೆ ಮಾಡಿ ತದನಂತರ ಪ್ರತಿ ಪ್ರಶ್ನೆಯ ಕೆಳಗೆ ಕಾಣುವ ಉತ್ತರ ಅನ್ನೋ ಪದದ ಪ್ರಾರಂಭದಲ್ಲಿ Left Click Cursor ಅನ್ನ ಇಟ್ಟು ಅದೇ Left Click Buttonಅನ್ನ Press ಮಾಡಿ ಹಿಡಿದು ಆ ಇಡೀ ಸಾಲನ್ನ Select ಮಾಡಿದರೆ ಆಗ ಆ ಪ್ರಶ್ನೆಗೆ ಉತ್ತರ ಪರೀಕ್ಷಾರ್ಥಿಯ ಮುಂದೆ ಪ್ರತ್ಯಕ್ಷ !! }




SDA ಪರೀಕ್ಷೆ : 2008

ಪರೀಕ್ಷೆ ನಡೆದ ದಿನಾಂಕ : ..................

ಪ್ರಶ್ನೆ ಪತ್ರಿಕೆ ಸರಣಿ : ...


-----

ಬೆರಳಚ್ಚು ಸಹಕಾರ :ಪರಶುರಾಮ್ ಕೆ.

-----








01. ಭಾರತದಲ್ಲಿನ ಅತ್ಯಂತ ಆಳದ ಗಣಿ ಹೆಸರಿಸು
A. ಕೋಲಾರ
B. ರಾಣಿಗಂಜ್
C. ಖೇತ್ರಿ
D. ಜರಿಯ
ಉತ್ತರ:

02 ಸಿಂಗ್ ಭೂಮ್ ಮತ್ತು ಕಿಯೊಂಜಾರ್ ಗಳು ಇದರ ಪ್ರಮುಖ ಉತ್ಪಾದನಾ ಕೇಂದ್ರಗಳು
A. ಮೈಕಾ
B. ಕಲ್ಲಿದ್ದಲು
C. ಮೇಂಗನೀಸ್
D. ಕಬ್ಬಿಣದ ಅದಿರು
ಉತ್ತರ:

03. ಈ ಮುಂದಿನ ಯಾರು ಯುನೆಸ್ಕೋ (UNESCO)ದ ಡೈರೆಕ್ಟರ್ ಜನರಲ್ ಆಗಿದ್ದಾರೆ?
A. ಜುವಾನ್ ಸೋಮಾವಿಯ
B. ಕೋಯ್ ಶಿರೋ ಮತ್ಸುರ
C. ಅಂಟೋನಿಯೊ ಗಟ್ರೆಸ್
D. ಡೊನಾಲ್ಡ್ ಕಬೆರುಕ
ಉತ್ತರ:

04. ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸೃಜನಾತ್ಮಕ ಸಂವಹನ ಕಲೆ - ಈ ರಂಗದಲ್ಲಿ "ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ 2007" ನ್ನು ಈ ಮುಂದಿನ ಯಾರು ಗೆದ್ದಿರುವರು ?
A. ಚುಂಗ್ ಟೂ
B. ಮಹಾಬೀರ್ ಪನ್
C. ಪಿ. ಸಾಯಿನಾಥ್
D. ಚೆನ್ ಗುವಾಂಗ್ ಚೆನ್ಗೆ
ಉತ್ತರ:

05. 2006ರ ಔಟ್ ಸ್ಟಾಂಡಿಂಗ್ ಪಾರ್ಲಿಮೆಂಟೇರಿಯನ್ ಪ್ರಶಸ್ತಿಯನ್ನು ಈ ಮುಂದಿನ ಯಾರಿಗೆ ನೀಡಲಾಯಿತು ?
A. ಶರದ್ ಪವಾರ್
B. ಸುಷ್ಮಾ ಸ್ವರಾಜ್
C. ಪಿ.ಚಿದಂಬರಂ
D. ಮಣಿ ಶಂಕರ್ ಅಯ್ಯರ್
ಉತ್ತರ:

06. ಭಾರತದಲ್ಲಿ ಮೊತ್ತಮೊದಲ ಸಂಚಾರಿ ನ್ಯಾಯಾಲಯ ಉದ್ಘಾಟನೆಗೊಂಡಿದ್ದು
A. ಮಹಾರಾಷ್ಟ್ರದಲ್ಲಿ
B. ಹರ್ಯಾಣದಲ್ಲಿ
C. ಉತ್ತರಪ್ರದೇಶದಲ್ಲಿ
D. ರಾಜಸ್ಥಾನದಲ್ಲಿ
ಉತ್ತರ:

07. ಏಷಿಯಾದಲ್ಲಿ 2007ನೇ ವರ್ಷದ ಎಫ್.ಡಿ.ಐ. ಪರ್ಸನಾಲಿಟಿಯಾಗಿ ಈ ಮುಂದಿನ ಯಾರನ್ನು ಆಯ್ಕೆಮಾಡಲಾಯಿತು ?
A. ಪಿ. ಚಿದಂಬರಂ
B. ಕಮಲನಾಥ್
C. ರತಿಶ್ ನಯರ್
D. ಕೌಶಿಕ್ ರೈ
ಉತ್ತರ:

08. ಗಾಜಿನ ತಯಾರಿಕೆಯಲ್ಲಿ ಈ ಮುಂದಿನ ಯಾವುದನ್ನು ಉಪಯೋಗಿಸುತ್ತಾರೆ ?
A. ಮರ
B. ಹೊಯ್ಗೆ
C. ಅಮೃತಶಿಲೆ
D. ಸ್ಲೇಟ್ ಕಲ್ಲು
ಉತ್ತರ:

09. ಸೋಡಾ ನೀರಿನಲ್ಲಿ ಈ ಮುಂದಿನ ಯಾವುದು ಇದೆ ?
A. ಸಿಟ್ರಿಕ್ ಆಮ್ಲ
B. ಸಲ್ಫ್ಯೂರಿಕ್ ಆಮ್ಲ
C. ಎಸಿಟಿಕ್ ಆಮ್ಲ
D. ಕಾರ್ಬೋನಿಕ್ ಆಮ್ಲ
ಉತ್ತರ:

10. ಬೆಳ್ಳುಳ್ಳಿಯ ವಾಸನೆಗೆ ಈ ಮುಂದಿನ ಯಾವುದರ ಇರುವಿಕೆ ಕಾರಣ ?
A. ನೈಟ್ರೋಜನ್
B. ಆಮ್ಲಜನಕ
C. ಗಂಧಕ
D. ಜಲಜನಕ
ಉತ್ತರ:

11. ಮನುಷ್ಯ ದೇಹದಲ್ಲಿರುವ ಅತ್ಯಂತ ಗಟ್ಟಿವಸ್ತುವನ್ನು ಈ ಮುಂದಿನವುಗಳಲ್ಲಿ ಗುರುತಿಸಿ.
A. ಹಲ್ಲು
B. ಹಲ್ಲಿನ ಮೇಲಿನ ಗುಡಸಾದ ಪದರ
C. ಬೆರಳ ಉಗುರು
D. ತಲೆ ಬುರುಡೆಯ ಎಲುಬುಗಳು
ಉತ್ತರ:

12. ರಕ್ತದ ಹೆಪ್ಪುಗಟ್ಟುವಿಕೆಯಲ್ಲಿ ರಕ್ತದಲ್ಲಿರುವ ಈ ಮುಂದಿನ ಯಾವ ಅಂಶ ಪ್ರಮುಖ ಪಾತ್ರವಹಿಸುತ್ತದೆ ?
A. ಪ್ಲೇಟ್ ಲೆಟ್ ಗಳು ಮತ್ತು ಬಿಳಿ ರಕ್ತಕಣಗಳು
B. ಬ್ಲಡ್ ಪ್ಲಾಸ್ಮಾ ಮತ್ತು ಕೆಂಪು ರಕ್ತಕಣಗಳು
C. ಬ್ಲಡ್ ಪ್ಲಾಸ್ಮಾ ಮತ್ತು ಬಿಳಿ ರಕ್ತಕಣಗಳು
D. ಬ್ಲಡ್ ಪ್ಲಾಸ್ಮಾ ಮತ್ತು ಪ್ಲೇಟ್ ಲೆಟ್ ಗಳು
ಉತ್ತರ:

13. ಹೋಮಿಯೋಪತಿ ಎಂಬ ವೈದ್ಯ ವೃತ್ತಿ ಈ ಮುಂದಿನ ಯಾವ ದೇಶದಲ್ಲಿ ಪ್ರಾರಂಭಗೊಂಡಿತು ?
A. ಭಾರತ
B. ಜರ್ಮನಿ
C. ಇಂಗ್ಲೇಂಡ್
D. ಚೀನಾ
ಉತ್ತರ:

14. ವೈದ್ಯಕೀಯ ಉಪಯೋಗಕ್ಕಾಗಿ ಪ್ರಕೃತ ಸ್ಟೆಮ್ ಸೆಲ್ಸ್ ಅಥವಾ ಕಾಂಡಕೋಶಗಳ ಬಗ್ಗೆ ವ್ಯಾಪಕವಾಗಿ ಅಧ್ಯಯನ ಮಾಡಲಾಗುತ್ತಿದೆ. ಈ ಕಾಂಡಕೋಶಗಳನ್ನು ಈ ಮುಂದಿನ ಯಾವುದರಿಂದ ಪಡೆಯಲಾಗುತ್ತದೆ ?
A. ಗಿಡಗಳ ಕಾಂಡಕೋಶಗಳು
B. ಪ್ರಾಣಿ ಕೋಶಗಳು
C. ಮಾನವ ಭ್ರೂಣ
D. ಕೃತಕವಾಗಿ ತಯಾರಿಸಿದ ಕೋಶಗಳು
ಉತ್ತರ:

15. ಭೂಮಿಯಿಂದ ಒಂದು ಕ್ಷಿಪಣಿಯನ್ನು ಹಾರಿಸಲಾಗಿದೆ. ಭೂಮಿಗೆ ಅತಿ ಹತ್ತಿರವಿರುವ ವಲಯದಿಂದ ಪ್ರಾರಂಭಿಸಿ, ಈ ಮುಂದಿನ ಯಾವ ನಿಜವಾದ ಕ್ರಮದಲ್ಲಿ ಆ ಕ್ಷಿಪಣಿ ವಿವಿಧ ವಲಯಗಳ ಮೂಲಕ ಹಾದು ಹೋಗುತ್ತದೆ. ?
A. ಹವಾಗೋಲ, ವಾಯುಮಂಡಲ, ಮಧ್ಯಗೋಲ
B. ವಾಯುಮಂಡಲ, ಮಧ್ಯಗೋಲ, ಹವಾಗೋಲ
C. ಮಧ್ಯಗೋಲ, ಹವಾಗೋಲ, ವಾಯುಮಂಡಲ
D. ವಾಯುಮಂಡಲ, ಹವಾಗೋಲ, ಮಧ್ಯಗೋಲ
ಉತ್ತರ:

16. ಈ ಮುಂದಿನವುಗಳಲ್ಲಿ ಗ್ಯಾಲಾಕ್ಸಿಯನ್ನು ಗುರುತಿಸಿ
A. ಒರಿಯನ್
B. ಸಿರಿಯಸ್
C. ಟೈಟಾನ್
D. ಆಂಡ್ರೋಮಿಡ
ಉತ್ತರ:

17. ಈ ಮುಂದಿನ ಯಾವ ಚಲನೆ ಅಥವಾ ಸಂದರ್ಭ ಸಾಧ್ಯವಿಲ್ಲ.
A. ಒಬ್ಬ ವ್ಯಕ್ರಿ ಉತ್ತರಾಭಿಮುಖ ವೇಗದಿಂದ ಮತ್ತು ಉತ್ತರಾಭಿಮುಖ ವೇಗೋತ್ಕರ್ಷದಿಂದ ಚಲಿಸುತ್ತಾನೆ.
B. ಒಬ್ಬ ವ್ಯಕ್ರಿ ಉತ್ತರಾಭಿಮುಖ ವೇಗದಿಂದ ಮತ್ತು ದಕ್ಷಿಣಾಭಿಮುಖ ವೇಗೋತ್ಕರ್ಷದಿಂದ ಚಲಿಸುತ್ತಾನೆ.
C. ಒಬ್ಬ ವ್ಯಕ್ತಿ ಸ್ಥಿರ ವೇಗದಿಂದ ಮತ್ತು ಕಾಲ ಬದಲಾಗುವ ವೇಗೋತ್ಕರ್ಷದಿಂದ ಚಲಿಸುತ್ತಾನೆ.
D. ಒಬ್ಬ ವ್ಯಕ್ತಿ ಸ್ಥಿರ ವೇಗೋತ್ಕರ್ಷದಿಂದ ಮತ್ತು ಕಾಲ ಬದಲಾಗುವ ವೇಗದಿಂದ ಚಲಿಸುತ್ತಾನೆ.
ಉತ್ತರ:

18. ಒಂದು ಸಣ್ಣ ಜಲಪಾತವಿರುವ ನದಿಯಲ್ಲಿ ಒಂದು ದೋಣಿಯು ಹುಟ್ಟು, ಹಾಯಿ ಮತ್ತು ಉಗಿಯಂತ್ರ ಸಹಿತ ಕೆಳಗಿಳಿಯುತ್ತದೆ. ಈ ಮುಂದಿನ ಯಾವ ಸಂಯೋಜನೆಯು ಅದರ ಚಲನೆಗೆ ಲಭ್ಯವಾಗದ ಶಕ್ತಿಯನ್ನೊಳಗೊಂಡಿರುತ್ತದೆ.
A. ಪ್ರಚ್ಛನ್ನ, ಗಾಳಿ ಮತ್ತು ಉಗಿ ಶಕ್ತಿಗಳು
B. ಪ್ರಚ್ಛನ್ನ, ಗಾಳಿ ಮತ್ತು ಸ್ನಾಯು ಬಲದ ಶಕ್ತಿಗಳು
C. ಉಗಿ, ಗಾಳಿ ಮತ್ತು ವಿದ್ಯುತ್ ಶಕ್ತಿಗಳು
D. ಗಾಳಿ, ಸ್ನಾಯು ಬಲದ ಮತ್ತು ಉಗಿ ಶಕ್ತಿಗಳು
ಉತ್ತರ:

19. ನೀರು, ಗಾಜು ಮತ್ತು ವಜ್ರದೊಳಗಿನಿಂದ ಸುತ್ತಲಿನ ಗಾಳಿಗೆ ಒಂದೇ ತರಂಗದೂರವಿರುವ R1, R2, R3 ಬೆಳಕಿನ ಕಿರಣಗಳು ಹಾದು ಬರುತ್ತವೆ. ನೀರು ಗಾಳಿ ಮತ್ತು ವಜ್ರಗಳ ವಕ್ರೀಭವನ ಸೂಚ್ಯಂಕ ಕ್ರಮವಾಗಿ 1.33, 1.52 ಮತ್ತು 2.42 ಆಗ ಒಂದೇ ಆಪಾತ ಕೋನಕ್ಕೆ
A. ತನ್ನ ಮೂಲ ಪಥದಿಂದ R1 ಕಿರಣ ಅತಿ ಹೆಚ್ಚು ಮತ್ತು R2 ಕಿರಣ ಅತಿ ಕಡಿಮೆ ಬಾಗುತ್ತದೆ
B. ತನ್ನ ಮೂಲ ಪಥದಿಂದ R2 ಕಿರಣ ಅತಿ ಹೆಚ್ಚು ಮತ್ತು R1 ಕಿರಣ ಅತಿ ಕಡಿಮೆ ಬಾಗುತ್ತದೆ
C. ತನ್ನ ಮೂಲ ಪಥದಿಂದ R2 ಕಿರಣ ಅತಿ ಹೆಚ್ಚು ಮತ್ತು R3 ಕಿರಣ ಅತಿ ಕಡಿಮೆ ಬಾಗುತ್ತದೆ
D. ತನ್ನ ಮೂಲ ಪಥದಿಂದ R3 ಕಿರಣ ಅತಿ ಹೆಚ್ಚು ಮತ್ತು R1 ಕಿರಣ ಅತಿ ಕಡಿಮೆ ಬಾಗುತ್ತದೆ
ಉತ್ತರ:

20. ದ್ರವ್ಯ ರಾಶಿ M ಇರುವ ವಸ್ತುವೊಂದರ ಚಂದ್ರನ ಮೇಲಿರುವಾಗಿನ ತೂಕ, ಭೂಮಿಯ ಮೇಲಿರುವಾಗಿನ ತೂಕಕ್ಕಿಂತ ಬೇರೆಯಾಗಿರುತ್ತದೆ. ಇದಕ್ಕೆ ಈ ಮುಂದಿನ ಯಾವುದು ಸೂಕ್ತ ವಿವರಣೆ ನೀಡುತ್ತದೆ.
A. ಚಂದ್ರನ ದ್ರವ್ಯರಾಶಿಯು ಭೂಮಿಯ ದ್ರವ್ಯರಾಶಿಗಿಂತ ಬೇರೆಯಾಗಿದೆ.
B. ಚಂದ್ರ ಮತ್ತು ಭೂಮಿ ಒಂದೇ ದ್ರವ್ಯರಾಶಿ ಮತ್ತು ತ್ರಿಜ್ಯಗಳನ್ನು ಹೊಂದಿಲ್ಲ
C. ಚಂದ್ರ ಭೂಮಿಯ ಸುತ್ತ ಸುತ್ತುತ್ತದೆ
D. ದ್ರವ್ಯರಾಶಿ M, ಚಂದ್ರನ ಮೇಲೆ ಮತ್ತು ಭೂಮಿಯ ಮೇಲೆ ಬೇರೆಬೇರೆಯಾಗಿರುತ್ತದೆ.
ಉತ್ತರ:

21. ಒಂದು ಸಂಖ್ಯೆಯ ಅಂಶಕ್ಕೆ 2 ರಿಂದ ಗುಣಿಸಿದಾಗ ಮತ್ತು ಛೇದವನ್ನು 2 ರಿಂದ ಹೆಚ್ಚಿಸಿದಾಗ ಅದು 6/7 ಆಗುತ್ತದೆ. ಅದಕ್ಕೆ ಬದಲಾಗಿ ಆ ಸಂಖ್ಯೆಯ ಛೇದಕ್ಕೆ 2 ರಿಂದ ಗುಣಿಸಿ, ಅಂಶವನ್ನು 2 ರಿಂದ ಹೆಚ್ಚಿಸಿದಾಗ ಅದು 1/2 ಆಗುತ್ತದೆ. ಆ ಸಂಖ್ಯೆ ಯಾವುದು ?
A. 6/12
B. 9/19
C. 1/3
D. 3/5
ಉತ್ತರ:


22. ತ್ರಿಕೋನ ABC ಯಲ್ಲಿ ಕೋನ C=3B ಮತ್ತು ಕೋನ C=2(A+B) ಮತ್ತು ಕೋನ A, B, ಮತ್ತು C ಗಳನ್ನು ಕಂಡುಹಿಡಿಯಿರಿ.
A. A=20*, B=40*, C=120*
B. A=40*, B=35*, C=105*
C. A=10*, B=20*, C=60*
D. A=15*, B=30*, C=90*

ಉತ್ತರ:

23. ಒಂದು ಸ್ತಂಭ, ಶಂಕು ಮತ್ತು ಗೋಲಗಳ ತ್ರಿಜ್ಯಗಳು ಸಮಾನವಾಗಿದ್ದು ಶಂಕು ಮತ್ತು ಸ್ತಂಭದ ಎತ್ತರಗಳು ತ್ರಿಜ್ಯಕ್ಕೆ ಸಮನಾಗಿವೆ. ಘನ ವಸ್ತುಗಳಾಗಿರುವ ಈ ಸ್ತಂಭ, ಶಂಕು ಮತ್ತು ಗೋಲಗಳ ಘನಫಲಗಳ ಅನುಪಾತವು
A. 1:3:4
B. 3:1:4
C. 4:1:3
D. 1:2:3
ಉತ್ತರ:

24. ಒಂದು ಕಂಪ್ಯೂಟರ್ ನ ಕಾರ್ಯನಿರ್ವಹಣೆಗೆ ಈ ಮುಂದಿನ ಯಾವುದರ ಅವಶ್ಯಕತೆ ಕನಿಷ್ಠವಾಗಿದೆ ?
A. ಮಾನಿಟರ್
B. ಕೀ ಬೋರ್ಡ್
C. ಸೆಂಟ್ರಲ್ ಪ್ರೋಸೆಸ್ಸರ್ ಯುನಿಟ್
D. ಸಿಡಿ ಡ್ರೈವ್
ಉತ್ತರ:

25. ಈ ಮುಂದಿನ ಯಾವುದನ್ನು ಪ್ರೋಗ್ರಾಮಿಂಗ್ ಲಾಂಗ್ವೇಜ್ ಎಂದು ಪರಿಗಣಿಸಲಾಗುವುದಿಲ್ಲ ?
A. ಫೋರ್ಟ್ರಾನ್
B. ಜಾವಾ
C. ಯುನಿಕ್ಸ್
D. ಲಿಸ್ಪ್
ಉತ್ತರ:

26. ನ್ಯಾನೋ ಸಯನ್ಸ್ ಮತ್ತು ನ್ಯಾನೋ ಟೆಕ್ನೋಲಜಿಗಳು ಹೆಚ್ಚು ಉಪಯೋಗಕ್ಕೆ ಬರುತ್ತಿರುವ ವಿಷಯಗಳು ನ್ಯಾನೋ (nano) ಎಂದರೆ...
A. ಒಂದು ಕಿಲೋ ಮೀಟರ್ ನ ಮಿಲಿಯನ್ನಿನ ಒಂದು ಭಾಗ
B. ಒಂದು ಮೀಟರ್ ನ ಮಿಲಿಯನ್ನಿನ ಒಂದು ಭಾಗ
C. ಒಂದು ಸೆಂಟಿ ಮೀಟರ್ ನ ಮಿಲಿಯನ್ನಿನ ಒಂದು ಭಾಗ
D. ಒಂದು ಮಿಲಿ ಮೀಟರ್ ನ ಮಿಲಿಯನ್ನಿನ ಒಂದು ಭಾಗ
ಉತ್ತರ:

27. ಮೊಬೈಲ್ ಫೋನನ್ನು ಹೆಚ್ಚಾಗಿ ಸೆಲ್ ಫೋನ್ ಅಥವಾ ಸೆಲ್ಯುಲರ್ ಫೋನ್ ಅಂತ ಕೂಡಾ ಏಕೆ ಕರೆಯುತ್ತಾರೆ ?
A. ಅದು ಗಾತ್ರದಲ್ಲಿ ಎಷ್ಟು ಸಣ್ಣದಿದೆ ಎಂದರೆ ಒಂದು ಸೆಲ್ಲನ್ನು ಹೋಲುತ್ತದೆ
B. ಅದರ ಆಂತರಿಕ ರಚನೆ ಸಸ್ಯ/ಪ್ರಾಣಿ ಕೋಶವನ್ನು ಹೋಲುತ್ತದೆ
C. ಇದನ್ನು ಅಭಿವೃದ್ಧಿ ಪಡಿಸಿದವರ ಗುಂಪನ್ನು ಸೆಲ್ ಎಂದು ಕರೆಯುತ್ತಾರೆ.
D. ಇದರ ಕಾರ್ಯನಿರ್ವಹಣೆಗೆ ಅವಶ್ಯಕವಾದ ಮೂಲ ನೆಲೆಗಳ ಜಾಲವನ್ನು ಸೆಲ್ ಸೈಟ್ಸ್ ಎಂದು ಕರೆಯುತ್ತಾರೆ.
ಉತ್ತರ:

28. ಇತ್ತೀಚೆಗೆ ನಡೆದ 19 ರೊಳಗಿನವರ ಕ್ರಿಕೆಟ್ ವಿಶ್ವಕಪ್ ಪಂದ್ಯಾಟವನ್ನು ಗೆಲ್ಲಲು ಭಾರತ ಫೈನಲ್ ನಲ್ಲಿ ಮತ್ತು ಸೆಮಿ ಫೈನಲ್ ನಲ್ಲಿ ಸೋಲಿಸಿದ ತಂಡಗಳು ಯಾವುವು ?
A. ದಕ್ಷಿಣ ಆಫ್ರಿಕ ಮತ್ತು ಪಾಕಿಸ್ತಾನ
B. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕ
C. ದಕ್ಷಿಣ ಆಫ್ರಿಕ ಮತ್ತು ನ್ಯೂಜಿಲೇಂಡ್
D. ಆಸ್ಟ್ರೇಲಿಯ ಮತ್ತು ಶ್ರೀಲಂಕ
ಉತ್ತರ:

29. ಇತ್ತೀಚಿನ ವಾರ್ತೆಗಳಲ್ಲಿನ ಯಾವುದೋ ಒಂದು ವಿಷಯಕ್ಕೆ ಸಂಬಂಧಪಟ್ಟ "1-2-3" ಒಪ್ಪಂದ ಯಾವುದು ?
A. ಪ್ರತಿಷ್ಠೆಯ ಇಂಡೋ ಅಮೇರಿಕನ್ ವ್ಯಾಪಾರ ಒಪ್ಪಂದ
B. ಭಾರತ ಮತ್ತು ಅಮೇರಿಕ ನಡುವಿನ ನಾಗರಿಕ ಅಣು (ಬೈಜಿಕ) ಸಹಕಾರದ ಮೇಲಿನ ಒಪ್ಪಂದ
C. ಭಾರತ ಮತ್ತು ರಷ್ಯದ ನಡುವಿನ ನಾಗರಿಕ ಅಣು (ಬೈಜಿಕ) ಸಹಕಾರದ ಮೇಲಿನ ಒಪ್ಪಂದ
D. ಭಾರತ ಫ್ರೆಂಚ್ ನಡುವಿನ ಸೇನಾ ಸಹಕಾರ ಒಪ್ಪಂದ
ಉತ್ತರ:

30. "ಚಂದ್ರಯಾನ್" ಎಂಬ ಅಂತರಿಕ್ಷ ನಿಯೋಗವನ್ನು ಭಾರತವು ಸದ್ಯದಲ್ಲೆ ಹಾರಿಸಲು ಯೋಜನೆ ಹಾಕಿಕೊಂಡಿದೆ. ಇದು ಒಂದು
A. ಚಾಂದ್ರ ಧ್ರುವೀಯ ಕಕ್ಷೆಯಲ್ಲಿರಿಸಲಿಕ್ಕಿರುವ ಮಾನವ ರಹಿತ ನಿಯೋಗ
B. ಚಾಂದ್ರ ಕಕ್ಷೆಯಲ್ಲಿರಿಸಲ್ಪಡುವ ಮಾನವ ಸಹಿತ ನಿಯೋಗ
C. ಭೂಸ್ಥಾಯಿ ಕಕ್ಷೆಯಲ್ಲಿರಿಸಲ್ಪಡುವ ಮಾನವ ರಹಿತ ನಿಯೋಗ
D. ಧ್ರುವೀಯ ಕಕ್ಷೆಯಲ್ಲಿ ಇರಿಸಲ್ಪಡುವ ಮಾನವ ಸಹಿತ ನಿಯೋಗ
ಉತ್ತರ:

31. "ಕಾಶ್ಮೀರ್ ಸಿಂಗ್" ಎಂಬ ಹೆಸರು ಯಾರಿಗೆ ಅನ್ವಯಿಸುತ್ತದೆ ?
A. ಅಮೇರಿಕಾದಲ್ಲಿ ನೆಲೆಸಿರುವ ಒಬ್ಬ ಪ್ರಶಸ್ತಿ ವಿಜೇತ ಭಾರತೀಯ ವಿಜ್ಞಾನಿ
B. ಭಯೋತ್ಪಾದಕರಿಂದ ಅಪಹರಿಸಲ್ಪಟ್ಟ ಒಬ್ಬ ಪ್ರಖ್ಯಾತ ಕಾಶ್ಮೀರಿ ರಾಜಕಾರಣಿ
C. ಬಹಳ ವರ್ಷಗಳ ಬಳಿಕ ಪಾಕಿಸ್ತಾನದ ಸೆರೆಮನೆಯಿಂದ ಬಿಡುಗಡೆ ಹೊಂದಿದ ಒಬ್ಬ ವ್ಯಕ್ತಿ
D. ಇತ್ತೀಚಿನ ಅಂತರಾಷ್ಟ್ರೀಯ ಪಂಧ್ಯವೊಂದರಲ್ಲಿ ಸ್ವರ್ಣಪದಕ ಗೆದ್ದ ಭಾರತೀಯ ಕುಸ್ತಿ ಪಟು
ಉತ್ತರ:

32. ಫೋರ್ಬ್ಸ್ ನಿಯತಕಾಲಿಕವು ಪ್ರಕಟಿಸಿರುವ ಅಗ್ರಸ್ಥಾನದಲ್ಲಿನ 10 ಮಿಲಿಯಾಧಿಪತಿಗಳ ಪಟ್ಟಿಯಲ್ಲಿ ನಾಲ್ಕು ಭಾರತೀಯರಿದ್ದಾರೆ. ಅವರು ಯಾರು ?
A. ಎಲ್.ಎನ್.ಮಿತ್ತಲ್, ಮುಖೇಶ್ ಅಂಬಾನಿ, ಅನಿಲ್ ಅಂಬಾನಿ, ಕೆ.ಪಿ.ಸಿಂಗ್
B. ಎಲ್.ಎನ್.ಮಿತ್ತಲ್, ಎನ್.ಆರ್.ನಾರಾಯಣ ಮೂರ್ತಿ, ಮುಖೇಶ್ ಅಂಬಾನಿ, ಅಜೀಂ ಪ್ರೇಂಜಿ
C. ಎಲ್.ಎನ್.ಮಿತ್ತಲ್, ಮುಖೇಶ್ ಅಂಬಾನಿ, ವಿಜಯ ಮಲ್ಯ, ಅಜೀಂ ಪ್ರೇಂ ಜಿ
D. ಮುಖೇಶ್ ಅಂಬಾನಿ, ಅಜೀಂ ಪ್ರೇಂ ಜಿ, ಕೆ.ಬಿ.ಬಿರ್ಲಾ, ಕೆ.ಪಿ.ಸಿಂಗ್
ಉತ್ತರ:

33.ಈ ಕೆಳಗಿನವುಗಳಲ್ಲಿ ಯಾವ ಒಂದು ಕಾರ್ಯವನ್ನು ಭಾರತದ ಸಂಸತ್ತು ನಿರ್ವಹಿಸುವುದಿಲ್ಲ.?
A. ಅದು ಕಾನೂನುಗಳನ್ನು ಮಾಡುತ್ತದೆ
B. ಅದು ಮಂತ್ರಿಗಳ ಮೇಲೆ ಹಿಡಿತ ಸಾಧಿಸುತ್ತದೆ.
C. ಅದು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರನ್ನು ನೇಮಕ ಮಾಡುತ್ತದೆ.
D. ರಾಷ್ಟ್ರಪತಿಯವರ ಚುನಾವಣೆಯಲ್ಲಿ ಭಾಗವಹಿಸುತ್ತದೆ.
ಉತ್ತರ:

34. ಸಂವಿಧಾನದ ತಿದ್ದುಪಡಿಗೆ ಸಂಬಂಧಪಟ್ಟ ಭಾರತದ ಸಂವಿಧಾನದ ಅನುಚ್ಛೇದ ಈ ಮುಂದಿನವುಗಳಲ್ಲಿ ಯಾವುದು ?
A. ಅನುಚ್ಛೇದ 12
B. ಅನುಚ್ಛೇದ 226
C. ಅನುಚ್ಛೇದ 19
D. ಅನುಚ್ಛೇದ 368
ಉತ್ತರ:

35. ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ಭಾರತವನ್ನು ಏನನ್ನಾಗಿ ಮಾಡುವ ದೃಢ ಸಂಕಲ್ಪ ಮಾಡಲಾಗಿದೆ ?
A. ಸಾರ್ವಭೌಮ ಗಣರಾಜ್ಯ
B. ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣರಾಜ್ಯ
C. ಪ್ರಜಾಸತ್ತಾತ್ಮಕ ಗಣರಾಜ್ಯ
D. ಅಧ್ಯಕ್ಷೀಯ ಗಣರಾಜ್ಯ
ಉತ್ತರ:


36. ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನು ಯಾರು ನೇಮಕ ಮಾಡುತ್ತಾರೆ ?
A. ಕೇಂದ್ರ ಲೋಕಸೇವಾ ಆಯೋಗ
B. ಪ್ರಧಾನ ಮಂತ್ರಿ
C. ರಾಷ್ಟ್ರಪತಿ
D. ಭಾರತದ ಮುಖ್ಯ ನ್ಯಾಯಾಧೀಶರು
ಉತ್ತರ:

37. ಸಂವಿಧಾನದ ಮೂಲ ಸ್ವರೂಪವನ್ನು ಭಾರತದ ಸರ್ವೋಚ್ಚ ನ್ಯಾಯಾಲಯವು ಘೋಷಿಸಿದ್ದು...
A. ಕೇಶವಾನಂದ ಭಾರತಿ V/s ಕೇರಳ ರಾಜ್ಯ ಪ್ರಕರಣದಲ್ಲಿ
B. ಸಜ್ಜನ್ ಸಿಂಗ್ ಪ್ರಕರಣದಲ್ಲಿ
C. ಮಿನರ್ವ ಮಿಲ್ ಪ್ರಕರಣದಲ್ಲಿ
D. ಶಂಕರಿ ಪ್ರಸಾದ್ V/s ಭಾರತದ ಒಕ್ಕೂಟ ಪ್ರಕರಣದಲ್ಲಿ
ಉತ್ತರ:

38. ಭಾರತದ ಪೌರರ ಮೂಲಭೂತ ಹಕ್ಕುಗಳನ್ನೊಳಗೊಂಡಿರುವುದು...
A. ಸಂವಿಧಾನದ ಭಾಗ-I
B. ಸಂವಿಧಾನದ ಭಾಗ-III
C. ಸಂವಿಧಾನದ ಭಾಗ-IV
D. ಸಂವಿಧಾನದ ಭಾಗ-V
ಉತ್ತರ:

39. ಸಂವಿಧಾನದಲ್ಲಿ ನೀಡಲಾದ ಮೂಲಭೂತ ಹಕ್ಕುಗಳು....
A. ತರ್ಕಬದ್ಧ ನಿರ್ಬಂಧಗಳಿಗೆ ಒಳಪಟ್ಟಿವೆ
B. ಪರಿಪೂರ್ಣವಾಗಿವೆ
C. ಯಾವುದೇ ಸಂದರ್ಭದಲ್ಲೂ ಪರಾಭಾರೆ ಮಾಡಲಾಗದವು
D. ಪ್ರಶ್ನಾತೀತವಾದವು
ಉತ್ತರ:

40. ಭಾರತದ ರಾಷ್ಟ್ರಪತಿಯು...
A. ನಾಮ ಮಾತ್ರದ ಮುಖ್ಯಸ್ಥ
B. ರಾಜ್ಯಸಭೆಯ ಮುಖ್ಯಸ್ಥ
C. ಕೇಂದ್ರ ಶಾಸಕಾಂಗದ ಒಂದು ಭಾಗ
D. ಮುಖ್ಯ ಕಾರ್ಯನಿರ್ವಾಹಕ
ಉತ್ತರ:

41. ಭಾರತೀಯ ಪೌರರ ಆರು ಸ್ವಾತಂತ್ಯಗಳನ್ನು ಮುಂದಿನ ಯಾವುದರಲ್ಲಿ ಪ್ರತಿಷ್ಠಾಪಿಸಲಾಗಿದೆ ?
A. ಅನುಚ್ಛೇದ 14 ರಿಂದ 18
B. ಅನುಚ್ಛೇದ 14 ರಿಂದ 35
C. ಅನುಚ್ಛೇದ 19
D. ಅನುಚ್ಛೇದ 19 ರಿಂದ 26
ಉತ್ತರ:

42. ಭಾರತದ ರಾಷ್ಟ್ರಪತಿಯವರು ಇವರಿಂದ ಚುನಾಯಿಸಲ್ಪಡುತ್ತಾರೆ....
A. ಲೋಕಸಭೆಯ ಚುನಾಯಿತ ಸದಸ್ಯರು
B. ರಾಜ್ಯ ಸಭೆಯ ಚುನಾಯಿತ ಸದಸ್ಯರು
C. ರಾಜ್ಯ ವಿಧಾನ ಸಭೆಗಳಲ್ಲಿನ ಚುನಾಯಿತ ಸದಸ್ಯರು
D. ಸಂಸತ್ತಿನ ಎರಡೂ ಸದನಗಳ ಚುನಾಯಿತ ಸದಸ್ಯರು ಮತ್ತು ರಾಜ್ಯ ವಿಧಾನ ಸಭೆಗಳ ಚುನಾಯಿತ ಸದಸ್ಯರು
ಉತ್ತರ:

43. ಸಂವಿಧಾನದ ಪ್ರಕಾರ ಲೋಕಸಭೆ ಸಮಾವೇಶಗೊಳ್ಳಲೇ ಬೇಕಾಗಿರುವುದು ಕನಿಷ್ಠ.....
A. ಪ್ರತಿ ವರ್ಷಕ್ಕೆ ಮೂರು ಬಾರಿ - ಅಧಿವೇಶನಗಳ ನಡುವೆ ಎರಡು ತಿಂಗಳಿಗಿಂತ ಹೆಚ್ಚು ಅಂತರವಿರುವಂತೆ
B. ಪ್ರತಿ ವರ್ಷಕ್ಕೆ ಎರಡು ಬಾರಿ - ಅಧಿವೇಶನಗಳ ನಡುವೆ ಮೂರು ತಿಂಗಳಿಗಿಂತ ಹೆಚ್ಚು ಅಂತರವಿಲ್ಲದಂತೆ
C. ಪ್ರತಿ ವರ್ಷಕ್ಕೆ ಎರಡು ಬಾರಿ - ಅಧಿವೇಶನಗಳ ನಡುವೆ ನಾಲ್ಕು ತಿಂಳಿಗಿಂದ ಹೆಚ್ಚು ಅಂತರವಿಲ್ಲದಂತೆ
D. ಪ್ರತಿ ವರ್ಷಕ್ಕೆ ಎರಡು ಬಾರಿ - ಅಧಿವೇಶನಗಳ ನಡುವೆ ಆರು ತಿಂಗಳಿಗಿಂತ ಹೆಚ್ಚು ಅಂತರವಿಲ್ಲದಂತೆ
ಉತ್ತರ:

44. ಭಾರತದ ಕೇಂದ್ರ ಶಾಸಕಾಂಗವನ್ನು ಹೀಗೆ ಕರೆಯುತ್ತಾರೆ
A. ಕಾಂಗ್ರೇಸ್
B. ಪಾರ್ಲಿಮೆಂಟ್
C. ಫೆಡರಲ್ ಅಸೆಂಬ್ಲಿ
D. ಡಯಟ್
ಉತ್ತರ:

45. ಭಾರತದ ಸಂವಿಧಾನದ ಪ್ರಕಾರ, ಭಾರತದ ರಾಷ್ಟ್ರಪತಿ ಚುನಾಯಿಸಲ್ಪಡುವುದು
A. ನಾಲ್ಕು ವರ್ಷದ ಅವಧಿಗೆ
B. ಆರು ವರ್ಷದ ಅವಧಿಗೆ
C. ಎಂಟು ವರ್ಷದ ಅವಧಿಗೆ
D. ಐದು ವರ್ಷದ ಅವಧಿಗೆ
ಉತ್ತರ:

46. ಭಾರತದ ಆರ್ಥಿಕ ಭದ್ರತೆಗೆ ಗಂಡಾಂತರ ಒದಗಿದಾಗ ರಾಷ್ಟ್ರಪತಿಯವರು ಈ ಅನುಚ್ಛೇದದನ್ವಯ ತುರ್ತು ಪರಿಸ್ಥಿತಿ ಘೋಷಿಸಬಹುದು.
A. ಅನುಚ್ಛೇದ 352
B. ಅನುಚ್ಛೇದ 353
C. ಅನುಚ್ಛೇದ 354
D. ಅನುಚ್ಛೇದ 360
ಉತ್ತರ:

47. ಪ್ರಧಾನ ಮಂತ್ರಿ ಎಷ್ಟರವರೆಗೆ ಹುದ್ದೆಯಲ್ಲಿರಬಹುದು..?
A. ಪ್ರಧಾನ ಮಂತ್ರಿ ಎಷ್ಟರವರೆಗೆ ಹುದ್ದೆಯಲ್ಲಿರಬಹುದೆಂದು ರಾಷ್ಟ್ರಪತಿ ಇಚ್ಚಿಸುತ್ತಾರೋ ಅಷ್ಟರವರೆಗೆ
B. ಬಹುಮತವಿರುವ ಪಕ್ಷದ ವಿಶ್ವಾಸ ಎಷ್ಟರವರೆಗೆ ಗಳಿಸಿರುತ್ತಾರೋ ಅಷ್ಟರವರೆಗೆ
C. ಲೋಕಸಭೆಯ ಸದಸ್ಯನಾಗಿ ಮತ್ತು ಲೋಕಸಭೆಯಲ್ಲಿ ಬಹುಮತವಿರುವವರ ಮುಖಂಡನಾಗಿರವ ತನಕ
D. ತಾನು ಎಷ್ಟರವರೆಗೆ ಇರಬೇಕೆಂದು ಇಚ್ಚಿಸುತ್ತಾರೋ ಅಷ್ಟರವರೆಗೆ
ಉತ್ತರ:

48. ರಾಷ್ಟ್ರಪತಿ ಹುದ್ದೆ ಖಾಲಿ ಇದ್ದಾಗ ಉಪರಾಷ್ಟ್ರಪತಿ ಎಷ್ಟು ಸಮಯ ರಾಷ್ಟ್ರಪತಿಯಾಗಿ ಕಾರ್ಯ
A. 5 ವರ್ಷ
B. 6 ತಿಂಗಳು
C. ಉಳಿದ ಅವಧಿ ಪೂರಾ
D. ಎರಡು ವರ್ಷ
ಉತ್ತರ:

49. ಕ್ಯಾಬಿನೆಟ್ ಅಥವಾ ಸಚಿವ ಸಂಪುಟ ಎಂಬುದು
A. ಮಂತ್ರಿ ಮಂಡಲಕ್ಕಿಂತ ಸಣ್ಣದಾದ ಕೂಟ
B. ಮಂತ್ರಿ ಮಂಡಲಕ್ಕಿಂತ ದೊಡ್ಡದಾದ ಕೂಟ
C. ಮಂತ್ರಿ ಮಂಡಲ
D. ಸಚಿವ ಸಂಪುಟ ಮತ್ತು ಲೋಕಸಭೆಯ ಪ್ರಧಾನ ಕಾರ್ಯದರ್ಶಿಯನ್ನೊಳಗೊಂಡಿದೆ
ಉತ್ತರ:

50. ಸಂವಿಧಾನದ ಪ್ರಕಾರ ರಾಜ್ಯಪಾಲರು ತನ್ನ ನಡುವಳಿಕೆಗೆ ಮುಂದೆ ಕಾಣಿಸಿದ ಒಬ್ಬರಿಗೆ ಜವಾಬ್ದಾರರಾಗಿರುತ್ತಾರೆ
A. ಪ್ರಧಾನ ಮಂತ್ರಿ
B. ರಾಷ್ಟ್ರಪತಿ
C. ರಾಜ್ಯದ ಮುಖ್ಯ ಮಂತ್ರಿ
D. ಉಪ ರಾಷ್ಟ್ರಪತಿ
ಉತ್ತರ:

51. ರಾಷ್ಟ್ರಪತಿಯವರಿಗೆ ಯಾರು ಪ್ರಮಾಣವಚನವನ್ನು ವಿಧಿವತ್ತಾಗಿ ಭೋಧಿಸುತ್ತಾರೆ.?
A. ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು
B. ಉಪರಾಷ್ಟ್ರಪತಿ
C. ಪ್ರಾಧಾನ ಮಂತ್ರಿ
D. ಪ್ರಾಯದಲ್ಲಿ ಅತಿ ಹೆಚ್ಚು ಹಿರಿಯರಾದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು
ಉತ್ತರ:
52. ಕ್ಷಮಾದಾನ ನೀಡುವ ರಾಷ್ಟ್ರಪತಿಯ ಅಧಿಕಾರವನ್ನು ಸಂವಿಧಾನದ ಈ ಮುಂದಿನ ಯಾವ ಅನುಚ್ಛೇದ ಒಳಗೊಂಡಿದೆ ?
A. ಅನುಚ್ಛೇದ 73
B. ಅನುಚ್ಛೇದ 72
C. ಅನುಚ್ಛೇದ 75
D. ಅನುಚ್ಛೇದ 78
ಉತ್ತರ:

53. ಟಾಟಾರವರು ಹೊಸದಾಗಿ ಚಾಲ್ತಿಗೆ ತಂದು ಪರಿಚಯಿಸಿದ ಕಾರಿನ ಹೆಸರು.......
A. ಫಿಯಟ್
B. ಮಾರುತಿ
C. ನ್ಯಾನೋ
D. ಬಿ.ಎಂ.ಡಬ್ಲ್ಯು
ಉತ್ತರ:

54. ಈ ಮುಂದಿನ ಯಾರು ಡೆಮಾಕ್ರಟಿಕ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸುತ್ತಿದ್ಧಾರೆ ?
A. ಬಿಲ್ ಕ್ಲಿಂಟನ್
B. ಲಾರಾ ಬುಷ್
C. ಹೇನ್ರಿ ಕೀಸಿಂಜರ್
D. ಹಿಲರಿ ಕ್ಲಿಂಟನ್
ಉತ್ತರ:

55. ಇತ್ತೀಚಿನ ಭಾರತ ಆಸ್ಟ್ರೇಲಿಯಾ ಕ್ರಿಕೇಟ್ ಸರಣಿಯಲ್ಲಿ ಬದಲಾಯಿಸಲ್ಪಟ್ಟ ಅಂಪೈರ್ ನ ಹೆಸರು....
A. ಬಿಲ್ಲಿ ಬೌಡನ್
B. ವೆಂಕಟ್ ರಾಘವನ್
C. ಡೇವಿಡ್ ಶಫರ್ಡ್
D. ಸ್ಟೀವ್ ಬಕ್ನರ್
ಉತ್ತರ:

56. ಈ ಮುಂದಿನ ಯಾರು ಸಿಟಿ ಗ್ರೂಪ್ ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆಗಿದ್ದಾರೆ ?
A. ವಿಕ್ರಂ ಪಂಡಿತ್
B. ಶಶಿ ತರೂರ್
C. ರಂಗರಾಜನ್
D. ಬಿಮಲ್ ಜೈನ್
ಉತ್ತರ:

57. ಈ ಮುಂದಿನ ಯಾರು ವಿಶ್ವ ಬ್ಯಾಂಕಿನ ಪ್ರಸಕ್ತ ಅಧ್ಯಕ್ಷರಾಗಿದ್ದಾರೆ ?
A. ರೋಬರ್ಟ್ ಝಾಲ್ಲಿಕ್
B. ಮೂನ್ ಕಿ ಬಾನ್
C. ಮೈಕೆಲ್ ಪೋರ್ಟರ್
D. ಬಿಲ್ ಗೇಟ್ಸ್
ಉತ್ತರ:

58. ಮೌರ್ಯರ ಮತ್ತು ಗುಪ್ತರ ರಾಜಧಾನಿಯಾಗಿದ್ದ ಪಾಟಲೀ ಪುತ್ರವನ್ನು ಈಗ ಹೀಗೆ ಕರೆಯುತ್ತಾರೆ ?
A. ಪಾಟ್ನ
B. ಅಲ್ಲಹಾಬಾದ್
C. ಪುರಿ
D. ದೆಹಲಿ
ಉತ್ತರ:


59. ಮೊದಲನೇ ಚಂದ್ರಗುಪ್ತ ಯಾವ ರಾಜವಂಶದ ಪ್ರಮುಖ ರಾಜನಾಗಿದ್ದ..?
A. ಗುಪ್ತ
B. ಮೌರ್ಯರು
C. ಶಕರು
D. ಶಾತವಾಹನರು
ಉತ್ತರ:

60. ರಾಷ್ಟ್ರಕೂಟರ ರಾಜಧಾನಿಯಾಗಿದ್ದುದು....
A. ಹಂಪಿ
B. ಬಾದಾಮಿ
C. ಮಲ್ ಖೇಡ್
D. ಕಲ್ಯಾಣಿ
ಉತ್ತರ:

61. ಸಿಖ್ ಧರ್ಮದ ಸ್ಥಾಪಕ...
A. ಗುರು ಗೋವಿಂದ ಸಿಂಗ್
B. ಗುರು ತೇಜ್ ಬಹದ್ದೂರ್
C. ಗುರು ನಾನಕ್ ದೇವ್
D. ಗುರು ಅರ್ಜುನ್ ದೇವ್
ಉತ್ತರ:

62. ಮೂರನೆಯ ಪಾಣಿಪತ್ ಯುದ್ಧ ನಡೆದದ್ದು,
A. 1526 ರಲ್ಲಿ
B. 1857 ರಲ್ಲಿ
C. 1757 ರಲ್ಲಿ
D. 1761 ರಲ್ಲಿ
ಉತ್ತರ:

63. ತಾಳಿಕೋಟೆ ಕದನ ನಡೆದದ್ದು ಇವರ ನಡುವೆ
A. ಮೊಗಲರು ಮತ್ತು ಆಫ್ಘಾನರು
B. ಚೋಳರು ಮತ್ತು ರಾಷ್ಟ್ರಕೂಟರು
C. ಬಹಮನಿ ಸುಲ್ತಾನರು ಮತ್ತು ವಿಜಯನಗರದ ಸಾಮ್ರಾಜ್ಯದವರು
D. ಚಾಲುಕ್ಯರು ಮತ್ತು ಪಲ್ಲವರು
ಉತ್ತರ:

64. ಬ್ರಹ್ಮ ಸಮಾಜದ ಸ್ಥಾಪಕ...
A. ಕೇಶವ ಚಂದ್ರ ಸೇನ್
B. ಎಮ್.ಎನ್.ರಾಯ್
C. ದೇವೇಂದ್ರ ನಾಥ ಠಾಕೂರ್
D. ರಾಜಾ ರಾಮ್ ಮೋಹನ ರಾಯ್
ಉತ್ತರ:

65. ಮೊದಲ ದುಂಡು ಮೇಜಿನ ಪರಿಷತ್ತು ನಡೆದದ್ದು...
A. ಸೆಪ್ಟೆಂಬರ್-ಡಿಸೆಂಬರ್ 1931 ರಲ್ಲಿ
B. ನವಂಬರ್ 1930 ಜನವರಿ 1931 ರಲ್ಲಿ
C. ನವಂಬರ್-ಡಿಸೆಂಬರ್ 1932 ರಲ್ಲಿ
D. ಮಾರ್ಚ್-ಮೇ 1929 ರಲ್ಲಿ
ಉತ್ತರ:

66. ಸಿ. ರಾಜಗೋಪಾಲಚಾರಿ ಅವರು...
A. ಭಾರತದ ಮೊದಲ ಗೌವರ್ನರ್ ಜನರಲ್ ಆಗಿದ್ದರು
B. ಭಾರತದ ಮೊದಲ ಭಾರತೀಯ ಗೌವರ್ನರ್ ಜನರಲ್ ಆಗಿದ್ದರು
C. ಭಾರತದ ಮೊದಲ ರಾಷ್ಟ್ರಪರಿಯಾಗಿದ್ದರು
D. ಭಾರತದ ಮೊದಲ ಪ್ರಧಾನಿ ಆಗಿದ್ದರು
ಉತ್ತರ:

67. ಮೊಹಮ್ಮದ್ ಆಲಿ ಜಿನ್ಹಾರವರು
A. ಮುಸ್ಲೀಂ ಲೀಗ್ ನ ಸ್ಥಾಪಕರು
B. ಪಾಕಿಸ್ತಾನದ ಮೊದಲ ಪ್ರಧಾನ ಮಂತ್ರಿ ಆಗಿದ್ದರು
C. ಪಾಕಿಸ್ತಾನದ ಮೊದಲ ರಾಷ್ಟ್ರಾಧ್ಯಕ್ಷರಾಗಿದ್ದರು
D. ಪಾಕಿಸ್ತಾನದ ಮೊದಲ ಗೌವರ್ನರ್ ಜನರಲ್ ಆಗಿದ್ದರು
ಉತ್ತರ:

68. ಬೇಲೂರು ಮತ್ತು ಹಳೇಬೀಡುಗಳಲ್ಲಿ ದೇವಾಲಯಗಳನ್ನು ನಿರ್ಮಿಸಿದವರು
A. ಹೋಯ್ಸಳರು
B. ಬಾದಾಮಿಯ ಚಾಲುಕ್ಯರು
C. ಕಲ್ಯಾಣಿಯ ಚಾಲುಕ್ಯರು
D. ಕದಂಬರು
ಉತ್ತರ:

69. ಬಾದಾಮಿಯ ಚಾಲುಕ್ಯರ ರಾಜ್ಯಕ್ಕೆ ಭೇಟಿ ನೀಡಿದ್ದ ಚೀನೀ ಯಾತ್ರಿಕ
A. ಹೋ ಚಿ ಮಿನ್
B. ಫಾಹಿಯಾನ್
C. ಹ್ಯುವೆನ್ ತ್ಸ್ಯಾಂಗ್
D. ಇತ್ಸಿಂಗ್
ಉತ್ತರ:

70. 1905 ರಲ್ಲಿ ಬಂಗಾಳವನ್ನು ವಿಭಜನೆ ಮಾಡಿದವರು
A. ಲಾರ್ಡ್ ರಿಪ್ಪನ್
B. ಲಾರ್ಡ್ ಕೇನಿಂಗ್
C. ಲಾರ್ಡ್ ಬೆಂಟಿಂಗ್
D. ಲಾರ್ಡ್ ಕರ್ಜನ್
ಉತ್ತರ:

71. ಮಧ್ಯಯುಗದ ಭಾರತವನ್ನಾಳಿದ ಏಕೈಕ ಮಹಿಳೆ...
A. ನೂರ್ ಜಹಾನ್
B. ಮಮ್ತಾಜ್ ಮಹಾಲ್
C. ಗುಲ್ ಬದನ್ ಬೇಗಂ
D. ರಜಿಯಾ ಸುಲ್ತಾನ್
ಉತ್ತರ:

72. ಅಕ್ಕಮಹಾದೇವಿ ಒಬ್ಬ...
A. ಮಧ್ಯಯುಗದ ಭಾರತೀಯ ರಾಜಕುಮಾರಿ
B. ವೀರಶೈವ ಸಂತಳು
C. ಅಮೋಘವರ್ಷನ ರಾಣಿ
D. ವಿಕ್ರಮಾರ್ಜುನ ವಿಜಯಂನ ಲೇಖಕಿ
ಉತ್ತರ:

73. ಮಹಾವೀರ ಎಂಬ ಜೈನ ಸಂತ
A. ಮೊದಲ ತೀರ್ಥಂಕರರಾಗಿದ್ದರು
B. 23ನೇ ತೀರ್ಥಂಕರರಾಗಿದ್ದರು
C. 24ನೇ ತೀರ್ಥಂಕರರಾಗಿದ್ದರು
D. 3ನೇ ತೀರ್ಥಂಕರರಾಗಿದ್ದರು
ಉತ್ತರ:

74. ಶ್ರವಣಬೆಳಗೊಳದಲ್ಲಿ ಗೊಮ್ಮಟೇಶ್ವರನ ಪ್ರತಿಮೆ ಸ್ಥಾಪಿಸಿದ್ದು ಇವರ ಆಳ್ವಿಕೆಯ ಕಾಲದಲ್ಲಿ
A. ಪಲ್ಲವರು
B. ಗಂಗರು
C. ಕದಂಬರು
D. ಮೌರ್ಯರು
ಉತ್ತರ:

75. ಝಾನ್ಸಿರಾಣಿ ಲಕ್ಷ್ಮೀಬಾಯಿ 1857ರಲ್ಲಿ ಬ್ರಿಟೀಷರ ವಿರುದ್ಧದ ದಂಗೆಯಲ್ಲಿ ಸೇರಲು ಕಾರಣ ಬ್ರಿಟೀಷರು...
A. ಪಿಂಚಣಿ ನೀಡಲು ನಿರಾಕರಿಸಿದರು
B. ಆಕೆಗೆ ಒಬ್ಬ ಪುತ್ರನನ್ನು ದತ್ತು ತೆಗೆದುಕೊಳ್ಳಲು ಬಿಡಲಿಲ್ಲ
C. ಆಕೆಯ ಪತಿಯ ದತ್ತುಪುತ್ರನನ್ನು ಝಾನ್ಸಿಯ ಉತ್ತರಾಧಿಕಾರಿ ಮತ್ತು ರಾಜ ಎಂದು ಮಾನ್ಯತೆ ನೀಡಲು ನಿರಾಕರಿಸಿದರು
D. ಆಕೆಯ ವೈರಿಗಳಿಗೆ ಬೆಂಬಲ ನೀಡಿದರು
ಉತ್ತರ:

76. ಭಾರತದ ಸಂವಿಧಾನ ಜಾರಿಗೆ ಬಂದ ದಿನ
A. 26ನೇ ಜನವರಿ 1950
B. 15ನೇ ಆಗಸ್ಟ್ 1947
C. 26ನೇ ನವಂಬರ್ 1949
D. 26ನೇ ಜನವರಿ 1930
ಉತ್ತರ:

77. ವಿಧವಾ ವಿವಾಹಕ್ಕಾಗಿ ಸಂಘಟಿತ ಪ್ರಯತ್ನ ಮತ್ತು ಚಳವಳಿ ನಡೆಸಿದ ಸಮಾಜ ಸುಧಾರಕ
A. ರಾಜಾರಾಂ ಮೋಹನ ರಾಯ್
B. ಈಶ್ವರ ಚಂದ್ರ ವಿದ್ಯಾಸಾಗರ್
C. ಸ್ವಾಮಿ ದಯಾನಂದ
D. ಶ್ರೀ ನಾರಾಯಣ ಗುರು
ಉತ್ತರ:

78. ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ
A. ಸೋನಿಯಾ ಗಾಂಧಿ
B. ಇಂದಿರಾ ಗಾಂಧಿ
C. ಪ್ರತಿಭಾ ಪಾಟೀಲ್
D. ಸರೋಜಿನಿ ನಾಯ್ಡು
ಉತ್ತರ:

79."ಒಲಂಪಿಕ್ ಆಡಗಳು-2008" ಇಲ್ಲಿ ನಡೆಯಲಿದೆ
A. ಲಂಡನ್
B. ದೆಹಲಿ
C. ಬೀಜಿಂಗ್
D. ಅಟ್ಲಾಂಟ
ಉತ್ತರ:

80. ಕಾಮನ್ ವೆಲ್ತ್ ನ ಪ್ರಸಕ್ತ ಪ್ರಧಾನ ಕಾರ್ಯದರ್ಶಿ
A. ಬಾನ್ ಕಿ ಮೂನ್
B. ಉ ಥಾಂಟ್
C. ಕ್ವಿಟ್ ಓನರೇಬಲ್ ಡೊನಾಲ್ಡ್. ಸಿ. ಮೆಕಿನ್ನನ್
D. ಕೋಫಿ ಅನ್ನನ್
ಉತ್ತರ:

81. ಪ್ರಸಕ್ತ ಭಾರತದ ಮುಖ್ಯ ನ್ಯಾಯಾಧೀಶರು
A. ಕೆ.ಜಿ.ಬಾಲಕೃಷ್ಣನ್
B. ಸೋಲಿ ಸೊರಾಬ್ಜೀ
C. ರಾಮ್ ಜೇಠ್ಮಲಾನಿ
D. ನಾನಿ ಪಾಲ್ಖಿವಾಲ
ಉತ್ತರ:


82. ಸಂಯುಕ್ತ ರಾಷ್ಟ್ರ ಸಂಘದ ಸಾಮಾನ್ಯ ಸಭೆಯು ಅಕ್ಟೋಬರ್ 2ನ್ನು ಈ ಮುಂದಿನ ಅಂತರಾಷ್ಟ್ರೀಯ ದಿನ ಎಂದು ಘೋಷಿಸಿದೆ.
A. ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನ
B. ಅಂತರಾಷ್ಟ್ರೀಯ ಪರಿಸರ ದಿನ
C. ಅಂತರಾಷ್ಟ್ರೀಯ ಪಂಚಾಯತ್ ರಾಜ್ ದಿನ
D. ಅಂತರಾಷ್ಟ್ರೀಯ ಅಹಿಂಸಾ ದಿನ
ಉತ್ತರ:

83. ಸೂರ್ಯನ ಸುತ್ತ ಒಂದು ಬಾರಿ ಸುತ್ತಲು ಕನಿಷ್ಠ ಸಮಯ ತೆಗೆದುಕೊಳ್ಳುವ ಗ್ರಹ
A. ಭೂಮಿ
B. ಬುಧ
C. ಶನಿ
D. ಶುಕ್ತ
ಉತ್ತರ:

84. ಈ ಮುಂದಿನ ಯಾವುದು ಋತು ಬದಲಾವಣೆ ಉಂಟು ಮಾಡುತ್ತದೆ ?
A. ಭೂಮಿಯು ತನ್ನ ಅಕ್ಷದ ಸುತ್ತ ಮತ್ತು ಸೂರ್ಯನ ಸುತ್ತ ಸುತ್ತುತ್ತಿರುವುದು.
B. ಭೂಮಿಯು ಸೂರ್ಯನ ಸುತ್ತ ಸುತ್ತುತ್ತಿರುವುದು
C. ಭೂಮಿಯು ಸೂರ್ಯನ ಸುತ್ತ ಸುತ್ತುತ್ತಿರುವುದು ಮತ್ತು ತನ್ನ ಅಕ್ಷಕ್ಕೆ ಸ್ವಲ್ಪ ವಾಲಿಕೊಂಡಿರುವುದು
D. ಭೂಮಿಯು ತನ್ನ ಅಕ್ಷದ ಸುತ್ತ ಸುತ್ತುತ್ತಿರುವುದು ಮತ್ತು ತನ್ನ ಅಕ್ಷಕ್ಕೆ ಸ್ವಲ್ಪ ವಾಲಿಕೊಂಡಿರುವುದು
ಉತ್ತರ:

85. ಒಬ್ಬನು ಪೂರ್ವದಿಂದ ಪಶ್ಚಿಮಕ್ಕೆ 180* ರೇಖಾಂಶವನ್ನು ದಾಟಿದಾಗ
A. ಒಂದು ದಿನ ಪಡೆಯುತ್ತಾನೆ
B. ಒಂದು ದಿನ ಕಳೆದುಕೊಳ್ಳುತ್ತಾನೆ
C. ಒಂದು ದಿನ ಪಡೆಯುವುದೂ ಇಲ್ಲ ಕಳಕೊಳ್ಳುವುದೂ ಇಲ್ಲ ಆದರೆ ಸಮಯ ಮಾತ್ರ ಬದಲಾಗುತ್ತದೆ
D. ದಿನದಲ್ಲಾಗಲೀ, ಸಮಯದಲ್ಲಾಗಲೀ ಯಾವ ಬದಲಾವಣೆಯೂ ಆಗುವುದಿಲ್ಲ
ಉತ್ತರ:

86. ಗ್ರೀನ್ ವಿಚ್ ಮೀನ್ ಟೈಮ್ ಇಂಡಿಯನ್ ಸ್ಟಾಂಡರ್ಡ್ ಟೈಮ್ ಗಿಂತ
A. 5.5 ಗಂಟೆ ಮುಂದಿರುತ್ತದೆ.
B. 12 ಗಂಟೆ ಮುಂದಿರುತ್ತದೆ.
C. 4.5 ಗಂಟೆ ಹಿಂದಿರುತ್ತದೆ.
D. 5.5 ಗಂಟೆ ಹಿಂದಿರುತ್ತದೆ.
ಉತ್ತರ:

87. ಪಶ್ಚಿಮ ಘಟ್ಟ ಮತ್ತು ಪೂರ್ವ ಘಟ್ಟಗಳನ್ನು ಜೋಡಿಸುವುದು ಈ ಮುಂದಿನ
A. ನೀಲಗಿರಿ ಬೆಟ್ಟ
B. ಪಳನಿ ಬೆಟ್ಟ
C. ಸಾತ್ಪುರ ಬೆಟ್ಟ
D. ವಿಂಧ್ಯಾ ಪರ್ವತ
ಉತ್ತರ:

88. ಪಾಲ್ಘಾಟ್ ಕಣಿವೆ (Palghat Gap) ಮೂಲಕ ಒಳನಾಡಿನ ಸಂಪರ್ಕ ಹೊಂದಿರುವ ಭಾರತದ ಬಂದರು
A. ಚೆನ್ನೈ
B. ಮರ್ಮಗೋವಾ
C. ಕೊಚ್ಚಿ
D. ನವ ಮಂಗಳೂರು
ಉತ್ತರ:

89. ದಾಮೋದರ ಕಣಿವೆ ಪರಿಯೋಜನೆಯ ಪ್ರಮುಖ ಉದ್ದೇಶ
A. ನೀರಾವರಿ
B. ಜಲವಿದ್ಯುತ್
C. ನೆರೆ ನಿಯಂತ್ರಣ
D. ಒಳನಾಡ ಜಲಸಾರಿಗೆ
ಉತ್ತರ:

90. ಭಾರತದ ಅತ್ಯಂತ ದಕ್ಷಿಣದ ಮಿತಿ ಯಾವುದು ?
A. 8 ಡಿಗ್ರಿ 4 ಮಿನಿಟು ಉತ್ತರ ಅಕ್ಷಾಂಶ
B. 8 ಡಿಗ್ರಿ 4 ಮಿನಿಟು ಪೂರ್ವ ರೇಖಾಂಶ
C. 8 ಡಿಗ್ರಿ 6 ಮಿನಿಟು ದಕ್ಷಿಣ ಅಕ್ಷಾಂಶ
D. 6 ಡಿಗ್ರಿ 30 ಮಿನಿಟು ಉತ್ತರ ಅಕ್ಷಾಂಶ
ಉತ್ತರ:

91. ಚಿಲ್ಕ ಸರೋವರ ಈ ರಾಜ್ಯದಲ್ಲಿದೆ.
A. ಒರಿಸ್ಸ
B. ಪಶ್ಚಿಮ ಬಂಗಾಳ
C. ತಮಿಳುನಾಡು
D. ಕೇರಳ
ಉತ್ತರ:

92. ಕಪ್ಪು ಮಣ್ಣಿನ ಅತ್ಯಂತ ವಿಸ್ತಾರ ಪ್ರದೇಶ ಹೊಂದಿರುವ ರಾಜ್ಯ..
A. ಗುಜರಾತ್
B. ಮಹಾರಾಷ್ಟ್ರ
C. ಕರ್ನಾಟಕ
D. ಆಂಧ್ರಪ್ರದೇಶ
ಉತ್ತರ:

93. ಈ ಮುಂದಿನ ಯಾವ ಪ್ರದೇಶ ಅಥವಾ ವಲಯವು ಸಾಂಪ್ರದಾಯಿಕವಾಗಿ ಹತ್ತಿ ಬೆಳೆಗೆ ಪ್ರಾಮುಖ್ಯವಾಗಿದೆ ?
A. ಡೆಕ್ಕನ್ ಟ್ರ್ಯಾಪ್
B. ಇಂಡೋ-ಗ್ಯಾಂಗೆಟಿಕ್ ಪ್ಲೈನ್
C. ಉತ್ತರ ಪ್ರದೇಶ
D. ತಮಿಳುನಾಡು
ಉತ್ತರ:

94. ಉತ್ತಮ ಗುಣಮಟ್ಟದ ವರ್ಜೀನಿಯಾ ತಂಬಾಕು ಬೆಳೆಸುವ ರಾಜ್ಯ
A. ತಮಿಳುನಾಡು
B. ಆಂಧ್ರಪ್ರದೇಶ
C. ಕರ್ನಾಟಕ
D. ಮಹಾರಾಷ್ಟ್ರ
ಉತ್ತರ:

95. ಈ ಮುಂದಿನ ಯಾವ ಮೂರು ಭಾರತದ ದೇಶೀಯ ರೇಷ್ಮೆ ಹುಳುಗಳಾಗಿವೆ ?
A. ಈಲ್ (Eel), ಮುಗ ಮತ್ತು ಕಾರ್ಪ್
B. ಟಸ್ಸಾರ್, ಮುಲ್ಲೆಟ್ ಮತ್ತು ಗಿರ್
C. ಮುಗ, ಈಲ್ ಮತ್ತು ಗಿರ್
D. ಟಸ್ಸಾರ್, ಮುಗ ಮತ್ತು ಎರಿ
ಉತ್ತರ:

96. ಭಾರತದಲ್ಲಿ ಎಲ್ಲಿ ಮುತ್ತಿನ ಮೀನುಗಾರಿಕೆ (Pearl fisihing) ಮಾಡಲಾಗುತ್ತದೆ ?
A. ಕೊಚ್ಚಿನ್
B. ಕಾಂಡ್ಲ
C. ನ್ಹಾವಶೇವ
D. ಟುಟಿಕೋರನ್
ಉತ್ತರ:

97. ರೈಲು ಕಂಬಿಗಳ ಅಡಿಮರ ಮಾಡಲು ಯಾವ ಜಾತಿಯ ಮರವನ್ನು ಉಪಯೋಗಿಸುತ್ತಾರೆ ?
A. ಸಾಲ್
B. ಸಾಗುವಾನಿ
C. ಬೀಟೆಮರ
D. ಶಿಶಮ್
ಉತ್ತರ:

98. ಬೆಂಗಳೂರಿನಲ್ಲಿ ಯಾವ ಸಂಸ್ಥೆಯು ವಿಮಾನಗಳನ್ನು ತಯಾರಿಸುತ್ತದೆ /
A. ಹಿಂದುಸ್ಥಾನ್ ಏರ್ ಕ್ರಾಫ್ಟ್ಸ್ ಲಿಮಿಟೆಡ್
B. ಹಿಂದುಸ್ಥಾನ್ ಏರೋನೋಟಿಕ್ಸ್ ಲಿಮಿಟೆಡ್
C. ಭಾರತ್ ಏರ್ ಕ್ರಾಫ್ಟ್ಸ್ ಲಿಮಿಟೆಡ್
D. ಇಂಡಿಯನ್ ಏರ್ ಕ್ರಾಫ್ಟ್ಸ್ ಲಿಮಿಟೆಡ್
ಉತ್ತರ:

99. ಚೋಟಾ ನಾಗ್ ಪುರ್ ಪ್ರಸ್ಥಭೂಮಿಯನ್ನು ಕೈಗಾರಿಕಾ ವಲಯವನ್ನಾಗಿ ಅಭಿವೃದ್ಧಿಪಡಿಸುವುದಕ್ಕೆ ಆಧಾರ ಯಾವುದು ?
A. ಖನಿಜ ನಿಕ್ಷೇಪಗಳು
B. ಅಭಿವೃದ್ಧಿ ಹೊಂದಿದ ಸಾರಿಗೆ
C. ಹೆಚ್ಚಿನ ಬೇಡಿಕೆ
D. ವಿದ್ಯುಚ್ಛಕ್ತಿಯ ಲಭ್ಯತೆ
ಉತ್ತರ:

100. ಈ ಮುಂದಿನ ಯಾವ ವಲಯವು ಚೆನ್ನಾಗಿ ಅಭಿವೃದ್ಧಿ ಹೊಂದಿದ ಪೆಟ್ರೋಕೆಮಿಕಲ್ ಉದ್ಯಮವನ್ನು ಹೊಂದಿದೆ ?
A. ಗುಜರಾತ್-ಮಹಾರಾಷ್ಟ್ರ
B. ಮಧ್ಯಪ್ರದೇಶ-ಬಿಹಾರ್
C. ತಮಿಳುನಾಡು-ಕರ್ನಾಟಕ
D. ಕಲ್ಕತ್ತ-ಅಸೆನ್ ಸೋಲ್
ಉತ್ತರ:




: ವಿವರಣೆ ಸಹಿತ ಉತ್ತರಗಳು :




ಉತ್ತರ ವಿವರಣೆ
1.
2.
3.
4.
5.
6.
7.
8.
9.
10.
11.
12.
13.
14.
15.
16.
17.
18.
19.
20.
21.
22.
23.
24.
25.
26.
27.
28.
29.
30.
31.
32.
33.
34.
35.
36.
37.
38.
39.
40.
41.
42.
43.
44.
45.
46.
47.
48.
49.
50.
51.
52.
53.
54.
55.
56.
57.
58.
59.
60.
61.
62.
63.
64.
65.
66.
67.
68.
69.
70.
71.
72.
73.
74.
75.
76.
77.
78.
79.
80.
81.
82.
83.
84.
85.
86.
87.
88.
89.
90.
91.
92.
93.
94.
95.
96.
97.
98.
99.
100.







.

3 comments:

Unknown said...

yenu answer gottagta illa!!!! hege nodbeku??

Unknown said...

Sir answers provide madi

NETRA said...

SIR GIVE ME THE ANS PLEASE

Post a Comment