{ ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನೀವು ಆ ಸರಿ ಉತ್ತರದ ಮೇಲೆ ನಿಮ್ಮ Mouse ಅನ್ನ ತಂದರೆ ಸಾಕು ಯಾವ ಕ್ಲಿಕ್ ಕೂಡ ಮಾಡುವ ಅವಶ್ಯಕತೆಯಿಲ್ಲ. ಸರಿ ಉತ್ತರ ಆಗ ಮೊದಲಿನ ನೀಲಿ ಬಣ್ಣದಿಂದ ಹಸಿರು ಬಣ್ಣಕ್ಕೆ ತಿರುಗಿ Font ಗಳು Bold ಆಗುತ್ತವೆ. ಹೀಗಾಗಿ ಉತ್ತರ ಬಿಡಿಸುವಾಗ ನಿಮ್ಮ ಕಂಪ್ಯೂಟರ್ Mouse ಅನ್ನ ಉತ್ತರಗಳಿರುವ Area ದಿಂದ ದೂರವಿಡಿ }
ಕೆ.ಎ.ಎಸ್. ಪರೀಕ್ಷೆ 2010
ಪರೀಕ್ಷೆ ನಡೆದ ದಿನಾಂಕ : 06/06/2010
ಪ್ರಶ್ನೆ ಪತ್ರಿಕೆ ಸರಣಿ : B
ವಿಷಯ : ಐಚ್ಛಿಕ ಕನ್ನಡ
*****
01. 'ಮುಖಚಂದ್ರ' ಎನ್ನುವುದು
ಎ. ರೂಪಕ
ಬಿ. ಉಪಮೆ
ಸಿ. ಉತ್ಪ್ರೇಕ್ಷೆ
ಡಿ. ಅರ್ಥಾಂತರನ್ಯಾಸ
ಉತ್ತರ:02. ಕನ್ನಡದ ಕುಲಪುರೋಹಿತರು ಯಾರು ?
ಎ. ಗೋವಿಂದ ಪೈ
ಬಿ. ಉತ್ತಂಗಿ ಚನ್ನಪ್ಪ
ಸಿ. ಆಲೂರು ವೆಂಕಟರಾಯರು
ಡಿ. ಮುದವೀಡು ಕೃಷ್ಣ ರಾಯರು
ಉತ್ತರ:03. ಕೆಳಗಿನ I ಮತ್ತು II ಪಟ್ಟಿಗಳನ್ನು ಹೊಂದಿಸಿ ಸರಿ ಹೊಂದಾಣಿಕೆಗಳನ್ನು ಕೆಳಗೆಕೊಟ್ಟಿರುವ ಸಂಕೇತಗಳಿಂದ ಆಯ್ಕೆ ಮಾಡಿ
ಪಟ್ಟಿ I ಪಟ್ಟಿ II
A. ವಿಸ್ಮಯ 1. ಕರುಣ
B. ರತಿ 2. ವೀರ
C. ಶೋಕ 3. ಶೃಂಗಾರ
D. ಉತ್ಸಾಹ 4. ಅದ್ಭುತ
ಸಂಕೇತಗಳು
A B C D
ಎ. 1 2 4 3
ಬಿ. 2 4 3 1
ಸಿ. 3 1 2 4
ಡಿ. 4 3 1 2
ಉತ್ತರ:04. ಇವುಗಳಲ್ಲಿ ಅಚ್ಚಕನ್ನಡದ ಪದ ಯಾವುದು ?
ಎ. ನಕಲು
ಬಿ. ಅರಿಲ್
ಸಿ. ಇಸ್ತ್ರಿ
ಡಿ. ಅಸಲು
ಉತ್ತರ:05. 'ಕೆಂಗದಿರ' ಎಂಬುದರ ಸಮಾನಾರ್ಥಕ ಪದ
ಎ. ಚಂದ್ರ
ಬಿ. ಧೂಮಕೇತು
ಸಿ. ಸೂರ್ಯ
ಡಿ. ನಕ್ಷತ್ರ
ಉತ್ತರ:06. 'ಚಪ್ಪಲಿಗಳು' ಯಾರ ಕೃತಿ ?
ಎ. ಸಾರಾ ಅಬೂಬಕರ್
ಬಿ. ಬಿ.ಟಿ.ಲಲಿತಾ ನಾಯಕ್
ಸಿ. ವಿಜಯಾ ದಬ್ಬೆ
ಡಿ. ಬಾನು ಮುಷ್ತಾಕ್
ಉತ್ತರ:07. ಕನ್ನಡದಲ್ಲಿ ವಾಕ್ಯರಚನೆಯನ್ನು ಈ ಕೆಳಗಿನವುಗಳಲ್ಲಿ ಯಾವುದು ನಿರ್ಧರಿಸುತ್ತದೆ ?
ಎ. ಕತೃ, ಕರ್ಮ, ಕಾರಕ
ಬಿ. ಕತೃ, ಕ್ರಿಯೆ, ಕರ್ಮ
ಸಿ. ಕತೃ, ಕರ್ಮ, ಕ್ರಿಯೆ ಎಂಬ ಕ್ರಮ
ಡಿ. ಕತೃ, ಕರ್ಮ, ವಿಭಕ್ತಿ
ಉತ್ತರ:08. ಇದು ಉತ್ತರ ದ್ರಾವಿಡ ಭಾಷೆ
ಎ. ಬಡಗ
ಬಿ. ಬ್ರಾಹೂಇ
ಸಿ. ತೆಲಗು
ಡಿ. ತಮಿಳು
ಉತ್ತರ:09. ಊರ್ಮಿಳೆ ಸ್ವತಂತ್ರ ವ್ಯಕ್ತಿತ್ವ ಪಡೆದಿರುವ ಕಾವ್ಯ
ಎ. ಶ್ರೀ ರಾಮಾಯಣ ದರ್ಶನಂ
ಬಿ. ರಾಮಾಶ್ವಮೇಧ
ಸಿ. ಅದ್ಭುತ ರಾಮಾಯಣ
ಡಿ. ರಾಮನಾಥ ಚರಿತೆ
ಉತ್ತರ:10. 'ಕಾವ್ಯಾರ್ಥ ಚಿಂತನ' ಕೃತಿಯ ಕರ್ತೃ
ಎ. ವಿ.ಕೃ. ಗೋಕಾಕ್
ಬಿ. ಎಚ್. ತಿಪ್ಪೇರುದ್ರ ಸ್ವಾಮಿ
ಸಿ. ವಿ.ಎಂ.ಇನಾಂದಾರ್
ಡಿ. ಜಿ.ಎಸ್.ಶಿವರುದ್ರಪ್ಪ
ಉತ್ತರ:11. Zerox ಎಂದರೆ
ಎ. ನೆರಳಚ್ಚು
ಬಿ. ಬೆರಳಚ್ಚು
ಸಿ. ಕಲ್ಲಚ್ಚು
ಡಿ. ಪಡಿಯಚ್ಚು
ಉತ್ತರ:12. Casual leave ಎಂದರೆ
ಎ. ಗಳಿಕೆ ರಜೆ
ಬಿ. ಹಬ್ಬದ ರಜೆ
ಸಿ. ಸಾಂದರ್ಭಿಕ ರಜೆ
ಡಿ. ಸಂಚಿತ ರಜೆ
ಉತ್ತರ:13. 'ದ್ರೌಪದಿಯ ಶ್ರೀಮುಡಿ' ಕೃತಿಯ ಕರ್ತೃ
ಎ. ಟಿ.ಎಸ್.ವೆಂಕಣ್ಣಯ್ಯ
ಬಿ. ಕುವೆಂಪು
ಸಿ. ಎಸ್.ವಿ.ರಂಗಣ್ಣ
ಡಿ. ತೀ.ನಂ.ಶ್ರೀಕಂಠಯ್ಯ
ಉತ್ತರ:14. 'ಧಗಧಗನೆ' ಎಂಬುದು
ಎ. ಕ್ರಿಯಾಪದ
ಬಿ. ನಾಮಪದ
ಸಿ. ವಿಶೇಷಣ
ಡಿ. ಅನುಕರಣವಾಚಕ ಪದ
ಉತ್ತರ:15. 'ನಾನು' ಎಂಬುದು ಯಾವ ಸರ್ವನಾಮ
ಎ. ಮಧ್ಯಮ ಪುರುಷ
ಬಿ. ಉತ್ತಮ ಪುರಷ
ಸಿ. ಪ್ರಥಮ ಪುರುಷ
ಡಿ. ಅನ್ಯ ಪುರುಷ
ಉತ್ತರ:16. ಕೆಳಗಿನ I ಮತ್ತು II ಪಟ್ಟಿಗಳನ್ನು ಹೊಂದಿಸಿ ಸರಿ ಹೊಂದಾಣಿಕೆಗಳನ್ನು ಕೆಳಗೆಕೊಟ್ಟಿರುವ ಸಂಕೇತಗಳಿಂದ ಆಯ್ಕೆ ಮಾಡಿ;
ಪಟ್ಟಿ I ಪಟ್ಟಿ II
A. ಸಿ.ಎಫ್. ಹಾಕೆಟ್ 1. ಕನ್ನಡ ಮಧ್ಯಮ ವ್ಯಾಕರಣ
B. ತೀ.ನಂ.ಶ್ರೀ 2. ಆಲೋಕ
C. ಸಂಗಮೇಶ ಸವದತ್ತಿ ಮಠ 3. A course in Modern Linguistics
D. ಎಚ್.ಎಸ್. ಬಿಳಿಗಿರಿ 4. ಕನ್ನಡ ಭಾಷಾ ವ್ಯಾಸಂಗ
ಸಂಕೇತಗಳು
A B C D
ಎ. 3 1 4 2
ಬಿ. 4 2 1 3
ಸಿ. 4 3 2 1
ಡಿ. 1 2 3 4
ಉತ್ತರ:17. ಇವು ಮೂರ್ಧನ್ಯ ಧ್ವನಿಗಳು
ಎ. ಕ್, ಚ್
ಬಿ. ಹ್, ಪ್
ಸಿ. ಟ್, ಡ್
ಡಿ. ಸ್, ರ್
ಉತ್ತರ:18. ವೈದರ್ಭಿ ಮತ್ತು ಗೌಡಿ ಕಾವ್ಯಮಾರ್ಗಗಳನ್ನು ಹೇಳಿದವನು
ಎ. ಹೇಂಚಂದ್ರ
ಬಿ. ಭರತ
ಸಿ. ಲೊಲ್ಲಟ
ಡಿ. ದಂಡಿ
ಉತ್ತರ:19. ಯೋಗವಾಹಕಗಳು ಎಷ್ಟು ?
ಎ. ಹತ್ತು
ಬಿ. ನಾಲ್ಕು
ಸಿ. ಆರು
ಡಿ. ಎಂಟು
ಉತ್ತರ:20. 'ವಿಮರ್ಷೆಯ ಪೂರ್ವ ಪಶ್ಚಿಮ' ಕೃತಿಯನ್ನು ಬರೆದವರು ?
ಎ. ಸಿ.ಎನ್.ರಾಮಚಂದ್ರನ್
ಬಿ. ಕೀರ್ತಿನಾಥ ಕುರ್ತಕೋಟಿ
ಸಿ. ಜಿ.ಎಸ್.ಶಿವರುದ್ರಪ್ಪ
ಡಿ. ಕೆ.ವಿ.ನಾರಾಯಣ
ಉತ್ತರ:21. ಗ್ರೀಕ್ ಪ್ರಹಸನದಲ್ಲಿ ಕನ್ನಡ ಮಾತುಗಳಿವೆ ಎಂದು ಗುರುತಿಸಿದವರು
ಎ. ಗೋವಿಂದ ಪೈ
ಬಿ. ಆರ್. ನರಸಿಂಹಾಚಾರ್
ಸಿ. ಶಂ.ಬಾ. ಜೋಷಿ
ಡಿ. ಎಂ.ಎಂ.ಕಲಬುರ್ಗಿ
ಉತ್ತರ:22. ಅನ್ಯದೇಶ್ಯ ವ್ಯಂಜನಾಂತ ಪದಗಳು ಕೆಳಕಂಡ ಯಾವ ಉಪಭಾಷೆಯಲ್ಲಿ ಅಕಾರಾಂತವಾಗುಯತ್ತವೆ
ಎ. ಮೈಸೂರು ಕನ್ನಡ
ಬಿ. ಧಾರವಾಡ ಕನ್ನಡ
ಸಿ. ಮಂಗಳೂರು ಕನ್ನಡ
ಡಿ. ಮಹಾರಾಷ್ಟ್ರ ಕನ್ನಡ
ಉತ್ತರ:23. ಈ ಕೆಳಗಿನವುಗಳಲ್ಲಿ ಯಾವುದು ವ್ಯಾಕರಣ ಪ್ರಕಾರಕ್ಕೆ ಸೇರುವುದಿಲ್ಲ
ಎ. ವರ್ಣನಾತ್ಮಕ ವ್ಯಾಕರಣ
ಬಿ. ಐತಿಹಾಸಿಕ ವ್ಯಾಕರಣ
ಸಿ. ತೌಲನಿಕ ವ್ಯಾಕರಣ
ಡಿ. ಕಾತಂತ್ರ ವ್ಯಾಕರಣ
ಉತ್ತರ:24. 'ಶಬ್ದಾರ್ಥೌ ಸಹಿತೌ ಕಾವ್ಯಂ' ಎಂದು ಹೇಳಿದವನು
ಎ. ದಂಡಿ
ಬಿ. ಭಾಮಹ
ಸಿ. ಕುಂತಕ
ಡಿ. ರಾಜಶೇಖರ
ಉತ್ತರ:25. 'ವಿಭಾವಾನುಭಾವ ವ್ಯಭಿಚಾರೀ ಸಂಯೋಗದ್ರಾಸನಿಷ್ಪತ್ತಿಃ' ಎಂಬ ಸೂತ್ರ ಯಾವ ಪ್ರಸ್ಥಾನಕ್ಕೆ ಸಂಬಂದಿಸಿದ್ದು ?
ಎ. ರಸ ಪ್ರಸ್ಥಾನ
ಬಿ. ಅಲಂಕಾರ ಪ್ರಸ್ಥಾನ
ಸಿ. ಧ್ವನಿ ಪ್ರಸ್ಥಾನ
ಡಿ. ರೀತಿ ಪ್ರಸ್ಥಾನ
ಉತ್ತರ:26. ಕನ್ನಡದ 'ಕ್' ವ್ಯಂಜನವು ಕೆಳಗಿನ ಯಾವ ಗುಂಪಿಗೆ ಸೇರುತ್ತದೆ ?
ಎ. ಕಂಠ್ಯ ಘೋಷ ಸ್ಪರ್ಶ
ಬಿ. ಪರಿವೇಷ್ಟಿತ ಅಘೋಷ ಸ್ಪರ್ಶ
ಸಿ. ಕಂಠ್ಯ ಅಘೋಷ ಸ್ಪರ್ಶ
ಡಿ. ವರ್ತ್ಸ್ಯ ಅಘೋಷ ಸ್ಪರ್ಶ
ಉತ್ತರ:27. ' ಚೇದ್ಬಿಂಬ ಪ್ರತಿಬಿಂಬತ್ವಂ' ಎಂಬ ವ್ಯಾಖ್ಯೆ ಯಾವ ಅಲಂಕಾರವನ್ನು ಕುರಿತದ್ದು?
ಎ. ಶ್ಲೇಷೆ
ಬಿ. ದೃಷ್ಟಾಂತ
ಸಿ. ಉತ್ಪ್ರೇಕ್ಷೆ
ಡಿ. ರೂಪಕ
ಉತ್ತರ:28. ಒಂದು ಕೃತಿ ಸಪ್ತ ವಿಘ್ನಗಳಿಂದ ಮುಕ್ತವಾಗಿರಬೇಕೆಂದು ಹೇಳಿದವನು
ಎ. ಭಟ್ಟನಾಯಕ
ಬಿ. ಕುಂತಕ
ಸಿ. ಅಭಿನವಗುಪ್ತ
ಡಿ. ಅಪ್ಪಯ್ಯ ದೀಕ್ಷಿತ
ಉತ್ತರ:29. 'ಭೋಗದೊಳಿದ್ದು ಯೋಗವಮಾಡಿ ಭವಮುಕ್ತರಾಗುವವರಾರು ನಿನ್ನಂತೆ' ಎಂಬ ಮಾತು ಯಾವ ಕೃತಿಯಲ್ಲಿ ಬರುತ್ತದೆ ?
ಎ. ವಿಕ್ರಮಾರ್ಜುನ ವಿಜಯಂ
ಬಿ. ಭರತೇಶ ವೈಭವ
ಸಿ. ರಾಮಚಂದ್ರ ಚರಿತ ಪುರಾಣ
ಡಿ. ನೇಮಿನಾಥ ಪುರಾಣ
ಉತ್ತರ:30. 'ವಾಕ್ಯಂ ರಸಾತ್ಮಕಂ ಕಾವ್ಯ' ಎಂಬುದು ಯಾರ ವ್ಯಾಖ್ಯೆ ?
ಎ. ಜಗನ್ನಾಥ ಪಂಡಿತ
ಬಿ. ವಿಶ್ವನಾಥ
ಸಿ. ಕ್ಷೇಮೇಂದ್ರ
ಡಿ. ಮಮ್ಮಟ
ಉತ್ತರ:31. ಕೆಳಗೆ ಕೊಟ್ಟಿರುವ ರಸಗಳ ಅನುಕ್ರಮಣಿಕೆಯಲ್ಲಿ ಸರಿಯಾದುದನ್ನು ಗುರುತಿಸಿ
ಎ. ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ
ಬಿ. ವೀರ, ಅದ್ಭುತ, ಶೃಂಗಾರ, ಹಾಸ್ಯ, ರೌದ್ರ, ಕರುಣ, ಭಯ, ಬೀಭತ್ಸ
ಸಿ. ಶೃಂಗಾರ, ಹಾಸ್ಯ, ವೀರ, ಕರುಣ, ರೌದ್ರ, ಭಯ, ಬೀಭತ್ಸ, ಅದ್ಭುತ
ಡಿ. ವೀರ, ಹಾಸ್ಯ, ಶೃಂಗಾರ, ಕರುಣ, ರೌದ್ರ, ಬೀಭತ್ಸ, ಅದ್ಬುತ, ಭಯ
ಉತ್ತರ:32. 'ಹ್ಯಾಮ್ಲೆಟ್' ನಾಟಕದ ರೂಪಾಂತರ
ಎ. ಶೂರಸೇನ ಚರಿತ
ಬಿ. ಧರ್ಮ ದುರಂತ
ಸಿ. ರಕ್ತಾಕ್ಷಿ
ಡಿ. ಕುರುಕ್ಷೇತ್ರ
ಉತ್ತರ:33. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡದ ಮೊಟ್ಟಮೊದಲ ಕಾದಂಬರಿ
ಎ. ಕ್ರಾಂತಿ ಕಲ್ಯಾಣ
ಬಿ. ಮಹಾಕ್ಷತ್ರಿಯ
ಸಿ. ದಾಟು
ಡಿ. ವೈಶಾಖ
ಉತ್ತರ:34. ಕೆಳಗಿನ I ಮತ್ತು II ಪಟ್ಟಿಗಳನ್ನು ಹೊಂದಿಸಿ ಸರಿ ಹೊಂದಾಣಿಕೆಗಳನ್ನು ಕೆಳಗೆಕೊಟ್ಟಿರುವ ಸಂಕೇತಗಳಿಂದ ಆಯ್ಕೆ ಮಾಡಿ;
ಪಟ್ಟಿ I ಪಟ್ಟಿ II
A. ಜ್ಞಾನಪೀಠ ಪ್ರಶಸ್ತಿ 1. ವರ್ಧಮಾನ
B. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 2. ಠಾಣಾಂತರ
C. ಪಂಪ ಪ್ರಶಸ್ತಿ 3. ಮೂಕಜ್ಜಿಯ ಕನಸುಗಳು
D. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 4. ಶ್ರೀಹರಿ ಚರಿತೆ
ಸಂಕೇತಗಳು
A B C D
ಎ. 4 3 2 1
ಬಿ. 2 4 1 3
ಸಿ. 1 2 3 4
ಡಿ. 3 1 4 2
ಉತ್ತರ:35. ಈ ಕೆಳಗಿನವುಗಳಲ್ಲಿ ಯಾವುದು ಶ್ರೀರಂಗರ ನಾಟಕವಲ್ಲ
ಎ. ಶೋಕಚಕ್ರ
ಬಿ. ಗುಮ್ಮನೆಲ್ಲಿಹ ನೋಡಮ್ಮ
ಸಿ. ಟೊಳ್ಳುಗಟ್ಟಿ
ಡಿ. ಹರಿಜನ್ವಾರ
ಉತ್ತರ:36. 'ಹೃದಯ ಸಂವಾದ' ಕೃತಿಯ ಕರ್ತೃ
ಎ. ಜಿ.ಎಸ್. ಅಮೂರ
ಬಿ. ಸುಜನಾ
ಸಿ. ಜಿ.ಎಚ್.ನಾಯಕ
ಡಿ. ಗಿರಡ್ಡಿ ಗೋವಿಂದರಾಜು
ಉತ್ತರ:37. 'ಉಚಲ್ಯಾ' ಎಂಬುದು ಯಾವ ಭಾಷೆಯ ಕೃತಿ ?
ಎ. ಮರಾಠಿ
ಬಿ. ಬಂಗಾಳಿ
ಸಿ. ಹಿಂದಿ
ಡಿ. ಗುಜರಾತಿ
ಉತ್ತರ:38. ಈ ಕೃತಿ ಸಂಸ್ಕೃತದ ಶ್ರೀಹರ್ಷನ 'ರತ್ನಾವಳಿ' ನಾಟಕದ ಭಾಷಾಂತರವಾದರೂ
ಕನ್ನಡದ ಪ್ರಥಮ ನಾಟಕ ಎನಿಸಿಕೊಂಡಿದೆ
ಎ. ಮಂಡೋದರಿ
ಬಿ. ಮಿತ್ರಾವಿಂದಾ ಗೋವಿಂದ
ಸಿ. ಕುರುಕ್ಷೇತ್ರ
ಡಿ. ಕೀಚಕ
ಉತ್ತರ:39. 'ವೈಯಕ್ತಿಕ ಭಾವನೆಗಳನ್ನು ಅಭಿವ್ಯಕ್ತಿಸುವ' ಕಾವ್ಯರೂಪ ಯಾವುದು ?
ಎ. ಮಹಾಕಾವ್ಯ
ಬಿ. ಕಥನ ಗೀತೆ
ಸಿ. ಸುನೀತ
ಡಿ. ಭಾವಗೀತೆ
ಉತ್ತರ:40. 'ನಾಕುತಂತಿ' ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತ ವರ್ಷ
ಎ. 1967
ಬಿ. 1977
ಸಿ. 1973
ಡಿ. 1990
ಉತ್ತರ:41. ಕನ್ನಡದ ಮೊಟ್ಟಮೊದಲ ಉಪಲಬ್ದ ಗ್ರಂಥ
ಎ. ಆದಿ ಪುರಾಣ
ಬಿ. ವಡ್ಡಾರಾಧನೆ
ಸಿ. ಕವಿರಾಜಮಾರ್ಗ
ಡಿ. ಶಾಂತಿ ಪುರಾಣ
ಉತ್ತರ:42. ತೈಲಪ ದೊರೆಯ ಆಶ್ರಯದಲ್ಲಿದ್ದ ಕವಿ
ಎ. ನಾಗಚಂದ್ರ
ಬಿ. ರನ್ನ
ಸಿ. ಆಂಡಯ್ಯ
ಡಿ. ಜನ್ನ
ಉತ್ತರ:43. ಲೌಖಿಕ ಮತ್ತು ಆಗಮಿಕ ಕಾವ್ಯ ಪರಂಪರೆಯನ್ನು ಆರಂಭಿಸಿದ ಕವಿ
ಎ. ನೇಮಿಚಂದ್ರ
ಬಿ. ಆಗ್ಗಳ
ಸಿ. ಪಂಪ
ಡಿ. ಚಾವುಂಡರಾಯ
ಉತ್ತರ:44. ಈ ಕೆಳಗಿನವುಗಳಲ್ಲಿ ಯಾವುದು ಪೊನ್ನನ ಗ್ರಂಥವಲ್ಲ ?
ಎ. ಕಾವ್ಯಾವಲೋಕನ
ಬಿ. ಭುವನೈಕ ರಾಮಾಭ್ಯುದಯ
ಸಿ. ಜಿನಾಕ್ಷರ ಮಾಲೆ
ಡಿ. ಶಾಂತಿ ಪುರಾಣ
ಉತ್ತರ:45. ಪಂಚಾಣು ವ್ರತ ಪ್ರತಿಪಾದನೆ ಯಾವ ಧರ್ಮದಲ್ಲಿದೆ ?
ಎ. ವೈದಿಕ
ಬಿ. ವೀರಶೈವ
ಸಿ. ಬೌದ್ಧ
ಡಿ. ಜೈನ
ಉತ್ತರ:46. 'ಉಪಸರ್ಗ ಕೇವಲಿಗಳ ಕಥೆ' ಎಂದು ಕರೆಯಲಾಗುವ ಗ್ರಂಥ
ಎ. ಪಂಚತಂತ್ರ
ಬಿ. ಪಂಪಭಾರತ
ಸಿ. ವಡ್ಡಾರಾಧನೆ
ಡಿ. ಧರ್ಮಾಮೃತ
ಉತ್ತರ:47. ಕೆಳಗಿನ I ಮತ್ತು II ಪಟ್ಟಿಗಳನ್ನು ಹೊಂದಿಸಿ ಸರಿ ಹೊಂದಾಣಿಕೆಗಳನ್ನು ಕೆಳಗೆಕೊಟ್ಟಿರುವ ಸಂಕೇತಗಳಿಂದ ಆಯ್ಕೆ ಮಾಡಿ;
ಪಟ್ಟಿ I ಪಟ್ಟಿ II
A. ಮೂರನೆಯ ಕೃಷ್ಣ 1. ಬಸವಣ್ಣ
B. ಬಿಜ್ಜಳ 2. ತಿರುಮಲಾರ್ಯ
C. ಕೃಷ್ಣದೇವರಾಯ 3. ಪೊನ್ನ
D. ಚಿಕ್ಕದೇವರಾಜ ಒಡೆಯರ್ 4. ತಿಮ್ಮಣ್ಣ
ಸಂಕೇತಗಳು
A B C D
ಎ. 4 2 3 1
ಬಿ. 1 3 2 4
ಸಿ. 2 4 1 3
ಡಿ. 3 1 4 2
ಉತ್ತರ:48. ಷಟ್ ಸ್ಥಲ ಸಿದ್ದಾಂತ ಯಾವ ಧರ್ಮದ ಸಾಧನ ಮಾರ್ಗ ?
ಎ. ಬೌದ್ಧ
ಬಿ. ವೀರಶೈವ
ಸಿ. ಜೈನ
ಡಿ. ವೈದಿಕ
ಉತ್ತರ:49. ಭರತ-ಬಾಹುಬಲಿ ಪ್ರಸಂಗ ಯಾವ ಕಾವ್ಯದಲ್ಲಿದೆ ?
ಎ. ಕರ್ನಾಟಕ ಕಾದಂಬರಿ
ಬಿ. ಸಮಯ ಪರೀಕ್ಷೆ
ಸಿ. ಆದಿಪುರಾಣ
ಡಿ. ಸಾಹಸ ಭೀಮ ವಿಜಯ
ಉತ್ತರ:50. ಮಂದಾನಿಲ ಎಂಬುದು ಯಾವ ಸಾಹಿತ್ಯ ಪ್ರಕಾರದ ಪ್ರಭೇಧ ?
ಎ. ಪಿರಿಯಕ್ಕರ
ಬಿ. ಚಂಪೂ
ಸಿ. ಷಟ್ಪದಿ
ಡಿ. ರಗಳೆ
ಉತ್ತರ:51. 'ಟಿಂಗರ ಬುಡ್ಡಣ್ಣ' ಎಂಬ ಕೃತಿಯ ಕರ್ತೃ
ಎ. ಪರ್ವತವಾಣಿ
ಬಿ. ಚಂದ್ರಶೇಖರ ಪಾಟೀಲ
ಸಿ. ನ. ರತ್ನ
ಡಿ. ಚಂದ್ರಶೇಖರ ಕಂಬಾರ
ಉತ್ತರ:52. 'ಅಮುಕ್ತ ಮಾಲ್ಯದ' ಎಂಬ ಕೃತಿಯ ಕರ್ತೃ
ಎ. ಕೃಷ್ಣದೇವರಾಯ
ಬಿ. ಧೂರ್ಜಟಿ
ಸಿ. ಅಭಿನವವಾದಿ ವಿದ್ಯಾನಂದ
ಡಿ. ಅಲ್ಲಸಾನಿ ಪೆದ್ದಣ್ಣ
ಉತ್ತರ:53. ಸಿಂಹಾವಲೋಕನ ಕ್ರಮದಿಂದ ಮಹಾಭಾರತದ ಕಥೆಯನ್ನು ಹೇಳಿದ ಕವಿ
ಎ. ಲಕ್ಷ್ಮೀಶ
ಬಿ. ರನ್ನ
ಸಿ. ಚಾಮರಸ
ಡಿ. ಕುಮಾರವ್ಯಾಸ
ಉತ್ತರ:54. ಹನ್ನೆರಡನೇ ಶತಮಾನದ ಶರಣ ಚಳುವಳಿಯ ನೇತಾರ
ಎ. ಅರಿವಿನ ಮಾರಿತಂದೆ
ಬಿ. ಬಸವಣ್ಣ
ಸಿ. ಅಲ್ಲಮ ಪ್ರಭು
ಡಿ. ಸಿದ್ಧರಾಮ
ಉತ್ತರ:55. ಬಾದಾಮಿ ಶಾಸನದ ಕಾಲ
ಎ. 10ನೆಯ ಶತಮಾನ
ಬಿ. 4ನೆಯ ಶತಮಾನ
ಸಿ. 12ನೆಯ ಶತಮಾನ
ಡಿ. 7ನೆಯ ಶತಮಾನ
ಉತ್ತರ:56. ಕೆಳಗಿನ I ಮತ್ತು II ಪಟ್ಟಿಗಳನ್ನು ಹೊಂದಿಸಿ ಸರಿ ಹೊಂದಾಣಿಕೆಗಳನ್ನು ಕೆಳಗೆಕೊಟ್ಟಿರುವ ಸಂಕೇತಗಳಿಂದ ಆಯ್ಕೆ ಮಾಡಿ;
ಪಟ್ಟಿ I ಪಟ್ಟಿ II
A. ನಾಗಚಂದ್ರ 1. ಕನ್ನಡ ಮೆನಿಪ್ಪ ನಾಡು ಚೆಲ್ವಾಯ್ತು
B. ಪಂಪ 2. 'ಅಬ್ದಿಯುಂ ಒರ್ಮೆಕಾಲವಶದಿಂದ ಮರ್ಯಾದೆಯಂ ದಾಂಟದೆ'
C. ಜನ್ನ 3. 'ಪರಮ ಜಿನೇಂದ್ರ ವಾಣಿಯೇ ಸರಸ್ವತಿ'
D. ಆಂಡಯ್ಯ 4. 'ಮರುಳೆ ಪೊಲ್ಲಮೆಯೆ ಲೇಸು ನಲ್ಲರ ಮೈಯೊಳ್'
ಸಂಕೇತಗಳು
A B C D
ಎ. 1 4 3 2
ಬಿ. 4 2 1 3
ಸಿ. 2 3 4 1
ಡಿ. 3 1 2 4
ಉತ್ತರ:57. ಉದ್ದಂಡ ಷಟ್ಪದಿಯಕಲ್ಲಿ ರಚಿತವಾಗಿರುವ ಕಾವ್ಯ
ಎ. ಕರ್ನಾಟಕ ಭಾರತ ಕಥಾಮಂಜರಿ
ಬಿ. ಹರಿಶ್ಚಂದ್ರ ಕಾವ್ಯ
ಸಿ. ಪ್ರಭುಲಿಂಗ ಲೀಲೆ
ಡಿ. ವೀರೇಶ ಚರಿತೆ
ಉತ್ತರ:58. ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎಂದು ಬಿರುದು ಪಡೆದ ಕವಿ
ಎ. ಭಾಸ್ಕರ
ಬಿ. ಕುಮಾರವ್ಯಾಸ
ಸಿ. ಲಕ್ಷ್ಮೀಶ
ಡಿ. ನಯಸೇನ
ಉತ್ತರ:59. 'ಮುದ್ರಾ ಮಂಜೂಷ' ದ ಕರ್ತೃ
ಎ. ಕೆಂಪುನಾರಾಯಣ
ಬಿ. ವಿಶಾಖದತ್ತ
ಸಿ. ಅಳಿಯ ಲಿಂಗರಾಜ
ಡಿ. ಚಿಕುಪಾಧ್ಯಾಯ
ಉತ್ತರ:60. 'ಲೋಕದ ಚೇಷ್ಟೆಗೆ ರವಿ ಬೀಜವಾದಂತೆ, ಕರಣಗಳ ಚೇಷ್ಟೆಗೆ ಮನವೇ ಬೀಜ' ಎಂಬುದು ಯಾರ ವಚನದ ಸಾಲು ?
ಎ. ಮುಕ್ತಾಯಕ್ಕ
ಬಿ. ಬಸವಣ್ಣ
ಸಿ. ಜೇಡರ ದಾಸಿಮಯ್ಯ
ಡಿ. ಅಕ್ಕಮಹಾದೇವಿ
ಉತ್ತರ:61. ಮುದ್ಧಣ-ಮನೋರಮೆಯ ಸಂವಾದ ಯಾವ ಕಾವ್ಯದಲ್ಲಿದೆ ?
ಎ. ಅದ್ಬುತ ರಾಮಾಯಣ
ಬಿ. ಶ್ರೀರಾಮ ಪಟ್ಟಾಭಿಷೇಕ
ಸಿ. ರತ್ನಾವತೀ ಕಲ್ಯಾಣ
ಡಿ. ರಾಮಾಶ್ವಮೇಧ
ಉತ್ತರ:62. ಕನ್ನಡ ಸಾಹಿತ್ಯ ಮಾರ್ಗ ಶೈಲಿಯಿಂದ ದೇಸಿ ಶೈಲಿಗೆ ಬದಲಾದ ಕಾಲ ಯಾವುದು ?
ಎ. 14ನೆಯ ಶತಮಾನ
ಬಿ. 10ನೆಯ ಶತಮಾನ
ಸಿ. 12ನೆಯ ಶತಮಾನ
ಡಿ. 16ನೆಯ ಶತಮಾನ
ಉತ್ತರ:63. ಸಾಂಗತ್ಯದಲ್ಲಿ ಮೊದಲು ಕಾವ್ಯರಚನೆ ಮಾಡಿದವನು
ಎ. ಶಿಶುಮಾಯಣ
ಬಿ. ಕನಕದಾಸ
ಸಿ. ತಿರುಮಲಾರ್ಯ
ಡಿ. ದೇವರಾಜ
ಉತ್ತರ:64. 'ಸಂಸಾರವೆಂಬ ಹೆಣ ಬಿದ್ದಿರೆ ತಿನಬಂದ ನಾಯಿ ಜಗಳವ ನೋಡಿರೇ' ಎಂದು ನುಡಿದ ವಚನಕಾರ
ಎ. ಅಲ್ಲಮಪ್ರಭು
ಬಿ. ಆಯ್ದಕ್ಕಿ ಮಾರಯ್ಯ
ಸಿ. ನುಲಿಯ ಚಂದಯ್ಯ
ಡಿ. ಸಕಲೇಶ ಮಾದರಸ
ಉತ್ತರ:65. 'ಸಕಲ ಲಕ್ಷಣವು ವಸ್ತಕಕೆ, ವರ್ಣಕಕಿಷ್ಟು ವಿಕಳವಾದರು ದೋಷವಿಲ್ಲ' ಎಂದು ಹೇಳಿದ ಕವಿ
ಎ. ನಂಜುಂಡ ಕವಿ
ಬಿ. ರತ್ನಾಕರ ವರ್ಣಿ
ಸಿ. ಕಲ್ಯಾಣ ಕೀರ್ತಿ
ಡಿ. ನಿಜಗುಣ ಶಿವಯೋಗಿ
ಉತ್ತರ:66. ಕೆಳಗಿನ I ಮತ್ತು II ಪಟ್ಟಿಗಳನ್ನು ಹೊಂದಿಸಿ ಸರಿ ಹೊಂದಾಣಿಕೆಗಳನ್ನು ಕೆಳಗೆಕೊಟ್ಟಿರುವ ಸಂಕೇತಗಳಿಂದ ಆಯ್ಕೆ ಮಾಡಿ;
ಪಟ್ಟಿ I ಪಟ್ಟಿ II
A. ಸಖೀಗೀತ 1. ದಲಿತ ಸಾಹಿತ್ಯ
B. ವರ್ಧಮಾನ 2. ನವೋದಯ ಸಾಹಿತ್ಯ
C. ಚಿರಸ್ಮರಣೆ 3. ನವ್ಯ ಸಾಹಿತ್ಯ
D. ಒಡಲಾಳ 4. ಪ್ರಗತಿಶೀಲ ಸಾಹಿತ್ಯ
ಸಂಕೇತಗಳು
A B C D
ಎ. 3 1 2 4
ಬಿ. 1 4 3 2
ಸಿ. 4 2 1 3
ಡಿ. 2 3 4 1 ಉತ್ತರ:
67. 'ನಾಡೋಜ' ಪ್ರಶಸ್ತಿಯನ್ನು ನೀಡುತ್ತಿರುವ ವಿಶ್ವವಿದ್ಯಾಲಯ
ಎ. ಗುಲ್ಬರ್ಗಾ ವಿಶ್ವವಿದ್ಯಾಲಯ
ಬಿ. ಕನ್ನಡ ವಿಶ್ವ ವಿದ್ಯಾಲಯ
ಸಿ. ಬೆಂಗಳೂರು ವಿಶ್ವವಿದ್ಯಾಲಯ
ಡಿ. ಮೈಸೂರು ವಿಶ್ವವಿದ್ಯಾಲಯ
ಉತ್ತರ:68. ಗುಲ್ವಾಡಿ ವೆಂಕಟರಾವ್ ಅವರ ಕಾದಂಬರಿ
ಎ. ವಾಗ್ದೇವಿ
ಬಿ. ಇಂದಿರಾಬಾಯಿ
ಸಿ. ಮಾಡಿದ್ದುಣ್ಣೋ ಮಹಾರಾಯ
ಡಿ. ಇಂದಿರೆ
ಉತ್ತರ:69. ಕನ್ನಡದ ಮೊಟ್ಟಮೊದಲ ಸಣ್ಣ ಕಥೆಗಾರ
ಎ. ಮಾಸ್ತಿ ವೆಂಕಟೇಶ ಅಯ್ಯಂಗಾರ್
ಬಿ. ಆನಂದ
ಸಿ. ಪಂಜೆ ಮಂಗೇಶರಾಯ
ಡಿ. ಬಾಗಲೋಡಿ ದೇವರಾಯ
ಉತ್ತರ:70. 'ಪ್ರಜ್ಞೆ ಮತ್ತು ಪರಿಸರ' ಎಂಬ ಕೃತಿ ಯಾವ ಪ್ರಕಾರಕ್ಕೆ ಸೇರುತ್ತದೆ ?
ಎ. ವಿಮರ್ಷೆ
ಬಿ. ಕಥೆ
ಸಿ. ಕಾವ್ಯ
ಡಿ. ಕಾದಂಬರಿ
ಉತ್ತರ:71. ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ಛಂದೋರೂಪ
ಎ. ಏಳೆ
ಬಿ. ಮಹಾಛಂದಸ್ಸು
ಸಿ. ಸುನೀತ
ಡಿ. ಪ್ರಗಾಥ
ಉತ್ತರ:72. ಕನ್ನಡದಲ್ಲಿ ಹೊಸ ಸಾಹಿತ್ಯ ಹುಟ್ಟಲು ಪ್ರೇರಣೆ ನೀಡಿದ ಭಾರತೀಯ ಭಾಷೆಗಳಲ್ಲಿ ಮೊದಲನೆಯದು ಯಾವುದು ?
ಎ. ಹಿಂದಿ
ಬಿ. ತಮಿಳು
ಸಿ. ಮರಾಠಿ
ಡಿ. ಬಂಗಾಳಿ
ಉತ್ತರ:73. ಕೆಳಗಿನ I ಮತ್ತು II ಪಟ್ಟಿಗಳನ್ನು ಹೊಂದಿಸಿ ಸರಿ ಹೊಂದಾಣಿಕೆಗಳನ್ನು ಕೆಳಗೆಕೊಟ್ಟಿರುವ ಸಂಕೇತಗಳಿಂದ ಆಯ್ಕೆ ಮಾಡಿ;
ಪಟ್ಟಿ I ಪಟ್ಟಿ II
A. ಕುವೆಂಪು 1. ವೈಶಾಖ
B. ಯಶವಂತ ಚಿತ್ತಾಲ 2. ಕುಸುಮಬಾಲೆ
C. ಚದುರಂಗ 3. ಶಿಕಾರಿ
D. ದೇವನೂರು ಮಹಾದೇವ 4. ಮಲೆಗಳಲ್ಲಿ ಮದುಮಗಳು
ಸಂಕೇತಗಳು
A B C D
ಎ. 3 4 2 1
ಬಿ. 1 2 4 3
ಸಿ. 4 3 1 2
ಡಿ. 2 1 3 4 ಉತ್ತರ:
74. ಪ್ರಥಮ ಕನ್ನಡ ಪ್ರಾಧ್ಯಾಪಕರು ಯಾರು ?
ಎ. ತ.ಸು.ಶಾಮರಾಯ
ಬಿ. ತೀ.ನಂ.ಶ್ರೀಕಂಠಯ್ಯ
ಸಿ. ಉ.ಕಾ.ಸುಬ್ಬರಾಯಾಚಾರ್
ಡಿ. ಟಿ.ಎಸ್.ವೆಂಕಣ್ಣಯ್ಯ
ಉತ್ತರ:75. 'ದೇವರು' ಎಂಬುದು ಇವರ ಪ್ರಸಿದ್ಧ ವೈಚಾರಿಕ ಕೃತಿ
ಎ. ಎ.ಎನ್. ಮೂರ್ತಿರಾವ್
ಬಿ. ವಸುದೇವ ಭೂಪಾಳಂ
ಸಿ. ಗೋರೂರು ರಾಮಸ್ವಾಮಿ ಅಯ್ಯಂಗಾರ್
ಡಿ. ಶಂ.ಬಾ.ಜೋಶಿ
ಉತ್ತರ:76. 'ಅಗ್ನಿ ಮತ್ತು ಮಳೆ' ನಾಟಕವನ್ನು ಬರೆದವರು
ಎ. ಚಂದ್ರಶೇಖರ ಕಂಬಾರ
ಬಿ. ಸಂಸ
ಸಿ. ಗಿರೀಶ್ ಕಾರ್ನಾಡ್
ಡಿ. ಕೈಲಾಸಂ
ಉತ್ತರ:77. 'ನಾನು ಕೊಂದ ಹುಡುಗಿ' ಕತೆಯ ಕರ್ತೃ
ಎ. ಅಶ್ವತ್ಥ
ಬಿ. ಆನಂದ
ಸಿ. ಶ್ರೀಪತಿ
ಡಿ. ಅ.ನ.ಕೃ
ಉತ್ತರ:78. 'ಹುಳಿಮಾವಿನಮರ' ಎಂಬುದು
ಎ. ಕವನ ಸಂಕಲನ
ಬಿ. ಕಾದಂಬರಿ
ಸಿ. ಕಥಾಸಂಕಲನ
ಡಿ. ಆತ್ಮಚರಿತ್ರೆ
ಉತ್ತರ:79. ಈ ಕೆಳಗಿನವುಗಳಲ್ಲಿ ಯಾವುದು ಮಾಸ್ತಿಯವರ ಕತೆ ಅಲ್ಲ
ಎ. ಮೊಸರಿನ ಮಂಗಮ್ಮ
ಬಿ. ನಿಜಗಲ್ಲಿನ ರಾಣಿ
ಸಿ. ಮಲ್ಲೇಶಿಯ ನಲ್ಲೆಯರು
ಡಿ. ಮಸುಮತ್ತಿ
ಉತ್ತರ:80. ಹೊಸಗನ್ನಡ ಸಾಹಿತ್ಯದ ಪ್ರಮುಖ ಘಟ್ಟಗಳು ಎಷ್ಟು ?
ಎ. ಐದು
ಬಿ. ನಾಲ್ಕು
ಸಿ. ಆರು
ಡಿ. ಮೂರು
ಉತ್ತರ:81. ಕನ್ನಡಕ್ಕೆ ಮೊಟ್ಟಮೊದಲು ಶೇಕ್ಸ್ ಪಿಯರ್ ನ ಯಾವ ನಾಟಕ ಅನುವಾದಗೊಂಡಿತು ?
ಎ. ಒಥೆಲೋ
ಬಿ. ಕಿಂಗ್ ಲಿಯರ್
ಸಿ. ದ ಟೆಂಪೆಸ್ಟ್
ಡಿ. ಹ್ಯಾಮ್ಲೆಟ್
ಉತ್ತರ:82. ಕನ್ನಡ ಪ್ರಗತಿಶೀಲ ಸಾಹಿತ್ಯ ಚಳುವಳಿಯ ಪ್ರವರ್ತಕ
ಎ. ಚದುರಂಗ
ಬಿ. ಅ.ನ.ಕೃಷ್ಣರಾವ್
ಸಿ. ಬಸವರಾಜ ಕಟ್ಟಿಮನಿ
ಡಿ. ಬಿ. ಶಿವಮೂರ್ತಿ ಶಾಸ್ತ್ರಿ
ಉತ್ತರ:83. ಬಂಕಿಮ ಚಂದ್ರರ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದವರು
ಎ. ಕೇರೂರು ವಾಸುದೇವಾ ಚಾರ್ಯ
ಬಿ. ಗಳಗನಾಥ
ಸಿ. ಬಿ. ವೆಂಕಟಾಚಾರ್ಯ
ಡಿ. ಎಂ.ಎಸ್.ಪುಟ್ಟಣ್ಣ
ಉತ್ತರ:84. ಮೊದಲು 'ರಾಷ್ಟ್ರಕವಿ' ಪ್ರಶಸ್ತಿ ಪಡೆದವರು
ಎ. ಬೇಂದ್ರೆ
ಬಿ. ಕುವೆಂಪು
ಸಿ. ಜಿ.ಎಸ್.ಶಿವರುದ್ರಪ್ಪ
ಡಿ. ಗೋವಿಂದ ಪೈ
ಉತ್ತರ:85. 'ಚಕೋರಿ' ಕೃತಿಯ ಕರ್ತೃ
ಎ. ಚಂದ್ರಶೇಖರ ಆಲೂರು
ಬಿ. ಚಂದ್ರಶೇಖರ ಕಂಬಾರ
ಸಿ. ಚಂದ್ರಕಾಂತ ಕುಸನೂರ
ಡಿ. ಚಂದ್ರಶೇಖರ ಪಾಟೀಲ
ಉತ್ತರ:86. ಕೆಳಗಿನ I ಮತ್ತು II ಪಟ್ಟಿಗಳನ್ನು ಹೊಂದಿಸಿ ಸರಿ ಹೊಂದಾಣಿಕೆಗಳನ್ನು ಕೆಳಗೆಕೊಟ್ಟಿರುವ ಸಂಕೇತಗಳಿಂದ ಆಯ್ಕೆ ಮಾಡಿ;
ಪಟ್ಟಿ I ಪಟ್ಟಿ II
A. ವೈದೇಹಿ 1. ನೊಬೆಲ್ ಪ್ರಶಸ್ತಿ
B. ರವೀಂದ್ರನಾಥ ಟ್ಯಾಗೂರ್ 2. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
C. ಬಿ.ಆರ್. ಅಂಬೇಡ್ಕರ್ 3. ಕರ್ನಾಟಕ ರತ್ನ
D. ದೇ. ಜವರೇ ಗೌಡ 4. ಭಾರತ ರತ್ನ ಪ್ರಶಸ್ತಿ
ಸಂಕೇತಗಳು
A B C D
ಎ. 2 1 4 3
ಬಿ. 3 4 1 2
ಸಿ. 1 3 2 4
ಡಿ. 4 2 3 1
ಉತ್ತರ:87. ಕನ್ನಡದ ಮೊದಲ ಸ್ವತಂತ್ರ ಅಸಂಗತ ನಾಟಕ
ಎ. ತೆರೆಗಳು
ಬಿ. ಕುಂಟಾ ಕುಂಟಾ ಕುರವತ್ತಿ
ಸಿ. ಎಲ್ಲಿಗೆ
ಡಿ. ನಾರ್ಸಿಸಸ್
ಉತ್ತರ:88. ಇದು ಒಂದು ದೇಸೀ ಛಂದೋ ಪ್ರಕಾರ
ಎ. ರಗಳೆ
ಬಿ. ತ್ರಿಪದಿ
ಸಿ. ಚಂಪೂ
ಡಿ. ಕಂದ
ಉತ್ತರ:89. 'ಹದಿಬದೆಯ ಧರ್ಮ'ದ ಕರ್ತೃ
ಎ. ಸೂಳೆ ಸಂಕವ್ವ
ಬಿ. ಮುಕ್ತಾಯಕ್ಕ
ಸಿ. ಅಕ್ಕ ಮಹಾದೇವಿ
ಡಿ. ಸಂಚಿ ಹೊನ್ನಮ್ಮ
ಉತ್ತರ:90. ಕೆಳಗಿನ I ಮತ್ತು II ಪಟ್ಟಿಗಳನ್ನು ಹೊಂದಿಸಿ ಸರಿ ಹೊಂದಾಣಿಕೆಗಳನ್ನು ಕೆಳಗೆಕೊಟ್ಟಿರುವ ಸಂಕೇತಗಳಿಂದ ಆಯ್ಕೆ ಮಾಡಿ;
ಪಟ್ಟಿ I ಪಟ್ಟಿ II
A. ಭಾರತ ಸಿಂಧೂ ರಶ್ಮಿ 1. ಕಾದಂಬರಿ
B. ವಿಗಡ ವಿಕ್ರಮರಾಯ 2. ಸಣ್ಣಕತೆ
C. ಗ್ರಾಮಾಯಣ 3. ನಾಟಕ
D. ಹಂಗಿನರಮನೆಯ ಹೊರಗೆ 4. ಮಹಾಕಾವ್ಯ
ಸಂಕೇತಗಳು
A B C D
ಎ. 4 3 1 2
ಬಿ. 2 4 3 1
ಸಿ. 1 2 4 3
ಡಿ. 3 1 2 4
ಉತ್ತರ:91. ಕನ್ನಡ ನಾಟಕಗಳಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸಿದ ಮೊದಲ ನಾಟಕಕಾರ
ಎ. ಶ್ರೀರಂಗ
ಬಿ. ಪರ್ವತವಾಣಿ
ಸಿ. ಕೈಲಾಸಂ
ಡಿ. ಸಂಸ
ಉತ್ತರ:92. ಇವುಗಳಲ್ಲಿ ಕುಂ.ವೀರಭದ್ರಪ್ಪನವರ ಕಥೆ ಯಾವುದು ?
ಎ. ಅಜ್ಞಾತವಾಸಿ
ಬಿ. ಕಳೇಬರ
ಸಿ. ಬುಗುರಿ
ಡಿ. ಕಥೆಯಾದಳು ಹುಡುಗಿ
ಉತ್ತರ:93. 'ಮುಂಬೈ ಜಾತಕ' ಎಂಬ ಕವಿತೆಯನ್ನು ಬರೆದವರು
ಎ. ನಿಸಾರ್ ಅಹಮದ್
ಬಿ. ಚನ್ನವೀರ ಕಣವಿ
ಸಿ. ತಿರುಮಲೇಶ್
ಡಿ. ಜಿ.ಎಸ್.ಶಿವರುದ್ರಪ್ಪ
ಉತ್ತರ:94. ಕನ್ನಡ ನವೋದಯ ಕಾಲದ ಮುಖ್ಯ ಕಾವ್ಯ ಪ್ರಾಕಾರ
ಎ. ಭಾವಗೀತೆ
ಬಿ. ಕಥನ ಗೀತೆ
ಸಿ. ಸಾನೆಟ್
ಡಿ. ಮಹಾಕಾವ್ಯ
ಉತ್ತರ:95. 'ಅರಸುಗಳಿಗಿದು ವಿರ, ದ್ವಿಜರಿಗೆ ಪರಮ ವೇದದ ಸಾರ' ಎಂದು ಹೇಳಿದ ಕವಿಯಾರು ?
ಎ. ರಾಘವಾಂಕ
ಬಿ. ಕುಮಾರವ್ಯಾಸ
ಸಿ. ಚಾಮರಸ
ಡಿ. ಲಕ್ಷ್ಮೀಶ
ಉತ್ತರ:96. 'ತಿರುಳ್ಗನ್ನಡ ತಿರುಕ' ಯಾರು ?
ಎ. ಕಾಪಸೆ ರೇವಪ್ಪ
ಬಿ. ಸಿಂಪಿ ಲಿಂಗಣ್ಣ
ಸಿ. ಉತ್ತಂಗಿ ಚನ್ನಪ್ಪ
ಡಿ. ಫ.ಗು.ಹಳಕಟ್ಟಿ
ಉತ್ತರ:97. 'ಹಸಿರು ಹೊನ್ನು' ಕೃತಿಯನ್ನು ಬರೆದವರು
ಎ. ಜಿ.ಟಿ.ನಾರಾಯಣರಾವ್
ಬಿ. ನಾಗೇಶ್ ಹೆಗಡೆ
ಸಿ. ನಾಗಲೋಟಿಮಠ
ಡಿ. ಬಿ.ಜಿ.ಎಲ್.ಸ್ವಾಮಿ
ಉತ್ತರ:98. 'ರಗಳೆಯ ಕವಿ' ಎಂದೇ ಪ್ರಸಿದ್ಧನಾಗಿದ್ದ ಹರಿಹರ ಬರೆದ ಚಂಪೂ ಕಾವ್ ಯಾವುದು ?
ಎ. ಹರಿವಂಶ ಪುರಾಣ
ಬಿ. ಗಿರಿಜಾ ಕಲ್ಯಾಣ
ಸಿ. ನಳ ಚರಿತ್ರೆ
ಡಿ. ನೇಮಿನಾಥ ಪುರಾಣ
ಉತ್ತರ:99. ರಾಘವಾಂಕ ಯಾವ ಸಾಹಿತ್ಯ ಪ್ರಕಾರದ ಕವಿ ?
ಎ. ಷಟ್ಪದಿ
ಬಿ. ಸಾಂಗತ್ಯ
ಸಿ. ತ್ರಿಪದಿ
ಡಿ. ರಗಳೆ
ಉತ್ತರ:100. 'ಅಳಿದ ಮೇಲೆ' ಕಾದಂಬರಿಯ ಕರ್ತೃ
ಎ. ಕುವೆಂಪು
ಬಿ. ರಾವ್ ಬಹದ್ದೂರ್
ಸಿ. ಶಿವರಾಮ ಕಾರಂತ
ಡಿ. ಮಿರ್ಜಿ ಅಣ್ಣಾರಾಯ
ಉತ್ತರ:101. Language is a system of arbitrary vocal symbols by means of which a social group co-operates' ಎಂದು ಹೇಳಿದವರು
ಎ. ಫರ್ಡಿನೆಂಡ್ ಸಸ್ಯೂರ್
ಬಿ. ಎಡ್ವರ್ಡ್ ಸಫಿರ್
ಸಿ. ಬ್ಲಾಕ್ ಮತ್ತು ಟ್ರಾಗರ್
ಡಿ. ಬ್ಲೂಮ್ ಫೀಲ್ಡ್
ಉತ್ತರ:102. 'ಶಬ್ದಮಣಿದರ್ಪಣಂ' ಗ್ರಂಥದ ಕರ್ತೃ
ಎ. ನಾಗವರ್ಮ
ಬಿ. ಕೇಶಿರಾಜ
ಸಿ. ಭಟ್ಟಕಳಂಕ
ಡಿ. ಪಿಂಗಳ
ಉತ್ತರ:103. 'ಉತ್ತರ ಪುರಾಣ'ದ ಕರ್ತೃ
ಎ. ಪಿಂಗಲ
ಬಿ. ಗುಣಾಢ್ಯ
ಸಿ. ಗುಣಭದ್ರಾಚಾರ್ಯ
ಡಿ. ಶ್ರೀಹರ್ಷ
ಉತ್ತರ:104. 'ಬಟಾಟೆ' ಎಂಬುದು ಯಾವ ಭಾಷೆಯ ಪದ
ಎ. ಸಂಸ್ಕೃತ
ಬಿ. ಪೋರ್ಚ್ ಗೀಸ್
ಸಿ. ಪರ್ಷಿಯನ್
ಡಿ. ಕನ್ನಡ
ಉತ್ತರ:105. ಚ.ಜ.ಧ್ವನಿಗಳನ್ನು ಯಾವ ಗುಂಪಿಗೆ ಸೇರಿಸಲಾಗುತ್ತದೆ ?
ಎ. ಘರ್ಷ
ಬಿ. ಅನುಘರ್ಷ
ಸಿ. ಪಾರ್ಶ್ವಕ
ಡಿ. ಸ್ಪರ್ಶ
ಉತ್ತರ:106. 'ಘೃತ' ಎಂಬ ಪದದ ಅರ್ಥ ಯಾವುದು ?
ಎ. ನೀರು
ಬಿ. ಎಣ್ಣೆ
ಸಿ. ಹಾಲು
ಡಿ. ತುಪ್ಪ
ಉತ್ತರ:107. 'ಚಂದ್ರೋದಯ' ಎಂಬುದು ಯಾವ ಸಂಧಿ ?
ಎ. ಗುಣ ಸಂಧಿ
ಬಿ. ಆದೇಶ ಸಂಧಿ
ಸಿ. ಲೋಪ ಸಂಧಿ
ಡಿ. ವೃದ್ಧಿ ಸಂಧಿ
ಉತ್ತರ:108. ಕೆಳಗಿನ I ಮತ್ತು II ಪಟ್ಟಿಗಳನ್ನು ಹೊಂದಿಸಿ ಸರಿ ಹೊಂದಾಣಿಕೆಗಳನ್ನು ಕೆಳಗೆಕೊಟ್ಟಿರುವ ಸಂಕೇತಗಳಿಂದ ಆಯ್ಕೆ ಮಾಡಿ;
ಪಟ್ಟಿ I ಪಟ್ಟಿ II
A. ಎಂ.ಚಿದಾನಂದ ಮೂರ್ತಿ 1. ಕನ್ನಡ ವಾಕ್ಯಗಳು
B. ಆರ್. ನರಸಿಂಹಾಚಾರ್ 2. ದ್ರಾವಿಡ ಭಾಷಾ ವಿಜ್ಞಾನ
C. ಹಂ.ಪ.ನಾಗರಾಜಯ್ಯ 3. ಭಾಷಾ ವಿಜ್ಞಾನದ ಮೂಲ ತತ್ವಗಳು
D. ಡಿ.ಎನ್.ಶಂಕರಭಟ್ಟ 4. History of Kannada Language
ಸಂಕೇತಗಳು
A B C D
ಎ. 2 1 3 4
ಬಿ. 3 4 2 1
ಸಿ. 4 3 1 2
ಡಿ. 1 2 4 3
ಉತ್ತರ:109. ಕರ್ನಾಟಕದ ಪ್ರಾದೇಶಿಕ ಎಲ್ಲೆಗಳು ಮೊದಲು ಉಲ್ಲೇಖಗೊಂಡಿರುವ ಗ್ರಂಥ ಯಾವುದು ?
ಎ. ಹಲ್ಮಿಡಿ ಶಾಸನ
ಬಿ. ವಡ್ಡಾರಾಧನೆ
ಸಿ. ಕವಿರಾಜಮಾರ್ಗ
ಡಿ. ಬಾದಾಮಿ ಶಾಸನ
ಉತ್ತರ:110. ಕೇಶಿರಾಜನ ಪ್ರಕಾರ ಕನ್ನಡದ ಅಸಾಧಾರಣ ಲಕ್ಷಣಗಳು ಎಷ್ಟು ?
ಎ. ಆರು
ಬಿ. ಒಂಭತ್ತು
ಸಿ. ಏಳು
ಡಿ. ಹನ್ನೊಂದು
ಉತ್ತರ:111. 'ರೀತಿಯೇ ಕಾವ್ಯದ ಆತ್ಮ' ಎಂದು ಪ್ರತಿಪಾದಿಸಿದವನು ?
ಎ. ಭರತ
ಬಿ. ಅಭಿನವಗುಪ್ತ
ಸಿ. ವಾಮನ
ಡಿ. ದಂಡಿ
ಉತ್ತರ:112. ಅನುನಾಸಿಕಗಳು ಎಷ್ಟು ?
ಎ. ಐದು
ಬಿ. ನಾಲ್ಕು
ಸಿ. ಆರು
ಡಿ. ಎಂಟು
ಉತ್ತರ:113. ಕೆಳಗೆ ಕೊಟ್ಟಿರುವ ನಾಲ್ಕು ಪದಗಳಲ್ಲಿ ಅನ್ಯಭಾಷಾ ಪದ ಯಾವುದು ?
ಎ. ಹಾಡು
ಬಿ. ಕಥೆ
ಸಿ. ಒಡಪು
ಡಿ. ಹಸೆ
ಉತ್ತರ:114. 'ಸೀತೆಯ ಮುಖ ಕಮಲದಂತೆ ಅರಳಿತು' ಎಂಬ ವಾಕ್ಯದಲ್ಲಿ ಬಳಕೆಯಾಗಿರುವ ಅಲಂಕಾರ ಯಾವುದು ?
ಎ. ದೀಪಕಾಲಂಕಾರ
ಬಿ. ಉಪಮಾಲಂಕಾರ
ಸಿ. ಉತ್ಪ್ರೇಕ್ಷಾಲಂಕಾರ
ಡಿ. ರೂಪಕಾಲಂಕಾರ
ಉತ್ತರ:115. 'ಚಿತ್ರ ತುರಗ ನ್ಯಾಯ' ವನ್ನು ಪ್ರತಿಪಾದಿಸಿದವರು
ಎ. ಭಟ್ಟ ಲೊಲ್ಲಟ
ಬಿ. ಅಭಿನವ ಗುಪ್ತ
ಸಿ. ಭಟ್ಟನಾಯಕ
ಡಿ. ಶ್ರೀಶಂಕುಕ
ಉತ್ತರ:116. ಕೆಳಗಿನ I ಮತ್ತು II ಪಟ್ಟಿಗಳನ್ನು ಹೊಂದಿಸಿ ಸರಿ ಹೊಂದಾಣಿಕೆಗಳನ್ನು ಕೆಳಗೆಕೊಟ್ಟಿರುವ ಸಂಕೇತಗಳಿಂದ ಆಯ್ಕೆ ಮಾಡಿ;
ಪಟ್ಟಿ I ಪಟ್ಟಿ II
A. ಆನಂದ ವರ್ಧನ 1. 'ದಶರೂಪಕ'
B. ಮಮ್ಮಟ 2. ಕಾವ್ಯಾದರ್ಶ
C. ಧನಂಜಯ 3. 'ಧ್ವನ್ಯಾಲೋಕ'
D. ದಂಡಿ 4. 'ಕಾವ್ಯಪ್ರಕಾಶ'
ಸಂಕೇತಗಳು
A B C D
ಎ. 4 3 2 1
ಬಿ. 2 1 3 4
ಸಿ. 3 4 1 2
ಡಿ. 1 2 4 3
ಉತ್ತರ:117. 'Comparative Grammar of Dravidian or South Indian Family of Languages' ಎಂಬ ಗ್ರಂಥದ ಕರ್ತೃ
ಎ. ಟಿ. ಬರೋ
ಬಿ. ರಾಬರ್ಟ್ ಕಾಲ್ಡ್ ವೆಲ್
ಸಿ. ಎಂ.ಬಿ.ಎಮಿನೋ
ಡಿ. ಗ್ರಿಯರ್ ಸನ್
ಉತ್ತರ:118. 'ಕಾವ್ಯಂ ಯಶಸೇ ಅರ್ಥಕೃತೇ ವ್ಯವಹಾರಮಿದೇ ಶಿವೇತರಕ್ಷತೆಯೇ
ಸದ್ಯ ಪರವಿರ್ವೃತಯೇ ಕಾಂತಾಸಮ್ಮಿತ ತಯೋಪದೇಶಯುಜೇ
ಎಂದು ಹೇಳಿದವನು
ಎ. ಭಟ್ಟತೌತ
ಬಿ. ಮಮ್ಮಟ
ಸಿ. ಕ್ಷೇಮೇಂದ್ರ
ಡಿ. ಕುಂತಕ
ಉತ್ತರ:119. 'ಸಾಧಾರಣೀಕರಣ' ತತ್ವವನ್ನು ಪ್ರತಿಪಾದಿಸಿದವನು
ಎ. ಭಾಮಹ
ಬಿ. ಭಟ್ಟನಾಯಕ
ಸಿ. ವಿಶ್ವನಾಥ
ಡಿ. ಕ್ಷೇಮೇಂದ್ರ
ಉತ್ತರ:120. 'ರಮಣೀಯಾರ್ಥ ಪ್ರತಿಪಾದಕ ಶಬ್ದಃ ಕಾವ್ಯಂ' ಎಂದು ಹೇಳಿದವನು
ಎ. ಭರತ
ಬಿ. ಜಗನ್ನಾಥ ಪಂಡಿತ
ಸಿ. ದಂಡಿ
ಡಿ. ಮಮ್ಮಟ
ಉತ್ತರ:
11 comments:
thanks lot team....
thanks lot team....
thanks lot team....
hi sir
ಗುರುಗಳೇ ಉತ್ತರ ಪಟ್ಟಿ ಕಳ್ಸಿ
ಉತ್ತರ
THIPPESHAMB MB
Ans plz
ಗುರುಗಳೇ ಉತ್ತರಗಳನ್ನು ಕಳಿಸಿ ದಯವಿಟ್ಟು
Thank u sir
ಉತ್ತರ ಗಳನ್ನು ಕಳಿಸಿ ಸರ್
Post a Comment