e-ತಾಣದಲ್ಲಿ ಪ್ರಕಟವಾಗುವ ಹೊಸ ಪ್ರಶ್ನೋತ್ತರ ಮಾಲೆಯನ್ನ ನಿಮ್ಮ mailಮನೆ ಬಾಗಿಲಿಗೆ ತಲುಪಿಸಬೇಕೆ?

ನಿಮ್ಮ email addressನ ಇಲ್ಲಿ ನೀಡಿ:

.

ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

PDO Exam 2009 :: Dt - 20/09/2009



ಪಂಚಾಯತ್ ಅಬಿವೃದ್ಧಿ ಅಧಿಕಾರಿ ಪರೀಕ್ಷೆ 2009
ಪರೀಕ್ಷೆ ನಡೆದ ದಿನಾಂಕ : 20/09/2009

ಪ್ರಶ್ನೆ ಪತ್ರಿಕೆ ಶ್ರೇಣಿ : S

---------


 


ಬೆರಳಚ್ಚು ಸಹಕಾರ : ಪರಶುರಾಮ ಕೆ.

---------



ಸಾಮಾನ್ಯ ಜ್ಞಾನ

1. ಇಂಡಿಯನ್ ನ್ಯಾಶನಲ್ ಸ್ಯಾಟಲೈಟ್ ನ್ನು ಸಂಕ್ಷಿಪ್ರವಾಗಿ ಸೂಚಿಸುವ ಅಕ್ಷರಗಳು ಯಾವುವು?
A. ಐ.ಎನ್.ಟಿ.ಇ.ಎಲ್.ಎ.ಟಿ (INTELSAT)
B. ಐ.ಎನ್.ಎಸ್.ಎ.ಟಿ (INSAT)
C. ಐ.ಎನ್.ಎಸ್. (INS)
D. ಐ.ಎನ್.ಎಸ್.ಟಿ (INST)
ಉತ್ತರ:

 
2. ಐ.ಸಿ.ಎ.ಆರ್. (ICAR) ಅಂದರೆ
A. ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್
B. ಇಂಡಿಯನ್ ನ್ಯಾಶನಲ್ ಕೌನ್ಸಿಲ್ ಆಫ್ ಏರೋಸ್ಪೇಸ್ ರಿಸರ್ಚ್
C. ಇಂಡಿಯನ್ ನ್ಯಾಶನಲ್ ಕೌನ್ಸಿಲ್ ಆಫ್ ಅಪ್ ಲೈಡ್ ರಿಸರ್ಚ್
D. ಇಂಡಿಯನ್ ಕಲ್ಚರಲ್ ಅಂಡ್ ಅಕೆಡೆಮಿಕ್ ರಿಸರ್ಚ್
ಉತ್ತರ:

 
3. ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ ಈ ದಿನದಂದು ಆಚರಿಸಲಾಗುವುದು.
A. ಮೇ 31
B. ಜುಲೈ 4
C. ಜೂನ್ 5
D. ಜೂನ್ 4
ಉತ್ತರ:

 
4. ಅರಣ್ಯ ಸಂಶೋಧನಾ ಸಂಸ್ಥೆ ಈ ಸ್ಥಳದಲ್ಲಿದೆ.
A. ಚೆನ್ನೈ
B. ಹೈದರಾಬಾದ್
C. ಡೆಹರಾಡೂನ್
D. ಪುಣೆ
ಉತ್ತರ:

 
5. ಡಾ. ಅಬ್ದುಲ ಪಿ.ಜೆ.ಕಲಾಮ್ ಅವರು ಈ ಗ್ರಂಥವನ್ನು ರಚಿಸಿದ್ದಾರೆ.
A. ವಿಂಗ್ಸ್ ಆಫ್ ಫ್ಲೈಟ್
B. ವಿಂಗ್ಸ್ ಆಫ್ ಫೇಮ್
C. ವಿಂಗ್ಸ್ ಆಫ್ ಫೈರ್
D. ವಿಂಗ್ಸ್ ಆಫ್ ಫ್ಲೇಮ್
ಉತ್ತರ:

 
6. ಕರ್ನಾಟಕದ ಕುಲಪುರೋಹಿತ ಎಂದು ನಾಮಾಂಕಿತರಾದವರು.
A. ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್
B. ಶ್ರೀ ಆಲೂರು ವೆಂಕಟರಾಯರು
C. ಶಱರೀ ನರಸಿಂಹಾಚಾರ್ಯರು
D. ಶ್ರೀ ಕುವೆಂಪು
ಉತ್ತರ:

 
7. ಭಾರತದಲ್ಲಿ ಶೇ.40 ರಷ್ಟು ಮುಸುಕಿನ ಜೋಳ ಬೆಳೆಯವುದು
A. ತಮಿಳುನಾಡು ಮತ್ತು ಕರ್ನಾಟಕ
B. ಆಂದ್ರ ಮತ್ತು ಕೇರಳ
C. ತಮಿಳುನಾಡು ಮತ್ತು ಆಂಧ್ರಪ್ರದೇಶ
D. ಆಂಧ್ರಪ್ರದೇಶ ಮತ್ತು ಕರ್ನಾಟಕ
ಉತ್ತರ:

 
8. 25 ತಂತ್ರಜ್ಞರು, 20 ವಿಜ್ಞಾನಿಗಳು, 18 ಉಪಾಧ್ಯಾಯರು ಮತ್ತು 12 ವ್ಯವಸ್ಥಾಪಕರು ಒಂದು ಪ್ರದರ್ಶನಕ್ಕೆ ಹೋಗಿ 266000 ರೂಪಾಯಿ ಖರ್ಚು ಮಾಡಿದರು. 5 ಜನ ತಂತ್ರಜ್ಷರು ಖರ್ಚು ಮಾಡಿದಷ್ಟು ಹಣವನ್ನು 4 ಜನ ವಿಜ್ಞಾನಿಗಳು ವ್ಯಯಿಸಿದರು. 12 ಜನ ವಿಜ್ಞಾನಿಗಳು ಖರ್ಚು ಮಾಡಿದಷ್ಟು ಹಣವನ್ನು 9 ಜನ ಉಪಾಧ್ಯಾಯರು ವ್ಯಯಿಸಿದರು. ಮತ್ತು 6 ಜನ ಉಪಾಧ್ಯಾಯರು ಖರ್ಚುಮಾಡಿದಷ್ಟು ಹಣವನ್ನು 8 ಜನ ವ್ಯವಸ್ಥಾಪಕರು ವ್ಯಯಿಸಿದರು. ಪ್ರತಿಯೊಂದು ಗುಂಪಿನವರು ಒಂದೇ ಮೊತ್ತದ ಹಣವನ್ನು ಖರ್ಚುಮಾಡಿದ್ದಲ್ಲಿ ಒಬ್ಬ ವಿಜ್ಞಾನಿ ಎಷ್ಟು ಹಣ ಖರ್ಚು ಮಾಡಿದ್ದಾರೆ.?
A. ರೂ. 2800
B. ರೂ. 3500
C. ರೂ. 3600
D. ರೂ. 4200
ಉತ್ತರ:

 
9. ಡೈಸಿನ ನಾಲ್ಕು ರೂಪಗಳು ಈ ಚಿತ್ರದಂತಿದ್ದರೆ, 4 ರ ಹಿಂದಿನ ಸಂಖ್ಯೆ ಯಾವುದು?
A.
B.
C.
D.
ಉತ್ತರ:

 
10. ಸರಿಯಾದ ಚಿತ್ರವನ್ನು ಆಯ್ದು ಉಳಿದ ಚಿತ್ರವನ್ನು ಪೂರ್ಣಗೊಳಿಸಿ
A.
B.
C.
D.
ಉತ್ತರ:

 
11. ಸುನಾಮಿಯು ಉಂಟಾಗಲು ಇದು ಕಾರಣವಾಗಿದೆ
A. ಬಿರುಗಾಳಿ (ಚಂಡಮಾರುತ)
B. ಉಲ್ಕೆಯ ಪಾತ
C. ಭೂಕಂಪ
D. ಚಂದ್ರನ ಸಾಂದ್ರತೆಯಲ್ಲಿ ಬದಲಾವಣೆ
ಉತ್ತರ:

 
12. ಸಮುದ್ರವು ಸಾಗರದಿಂದ ಈ ವಿಷಯಗಳಲ್ಲಿ ಭಿನ್ನವಾಗಿದೆ.
A. ಅದು ಭಾಗಶಃ ಭೂಮಿಯಿಂದ ಆವೃತವಾಗಿದೆ.
B. ಅದು ನದಿಗಿಂತ ಸ್ವಲ್ಪ ದೊಡ್ಡದಾಗಿದೆ.
C. ಅದರಲ್ಲಿ ನಿಗಧಿತ ಅಳತೆಯ ನೀರು ಇರುವುದಿಲ್ಲ.
D. ಅದಕ್ಕೆ ಯಾವ ಎಲ್ಲೆಯೂ ಇರುವುದಿಲ್ಲ.
ಉತ್ತರ:

 
13. ಲೀನಾ, ಮನು, ನೀರಜ್, ಒಮರ್, ಪಾಲ್ ಮತ್ತು ಕೈಸರ್ ಎಂಬುವರು ಆರು ಜನ ಸ್ನೇಹಿತರು. ಲೀನಾ ಎಂಬುವವಳು ಮನುಗಿಂತ ಹಿರಿಯಳು ಆದರೆ ನೀರಜ್ ಗಿಂತ ಚಿಕ್ಕವಳು. ಒಮರ್ ಎಂಬುವನು ನೀರಜ್ ಮತ್ತು ಪಾಲ್ ಗಿಂತ ಕಿರಿಯವ. ಕೈಸರ್ ಎಂಬುವನು ಪಾಲ್ ಗಿಂತ ಹಿರಿಯವನು. ಕೆಳಗಿನ ಸಾಲುಗಳಲ್ಲಿ ಯಾವುದು ಸರಿಯಾದರೆ ಯಾರು ಅತ್ಯಂತ ಹಿರಿಯರೆಂದು ಪರಿಗಣಿಸಬಹುದು.?
A. ಒಮರ್ ಎಂಬುವನು ಮನುಗಿಂತ ಕಿರಿಯ
B. ನೀರಜ್ ಎಂಬುವನು ಪಾಲ್ ಗಿಂತ ಹಿರಿಯ
C. ಕೈಸರ್ ಎಂಬುವನು ಲೀನಾಗಿಂತ ಹಿರಿಯ
D. ಕೈಸರ್ ಮತ್ತು ಪಾಲ್ ಇವರ ಸರಾಸರಿ ವಯಸ್ಸು ನೀರಜ್ ನ ವಯಸ್ಸಿಗಿಂತ ಜಾಸ್ತಿ
ಉತ್ತರ:

 
14. ಭಾರತದ ಸಂವಿಧಾನದಲ್ಲಿ ಎಷ್ಟು ವಿವರಣಾ ಪಟ್ಟಿಗಳಿವೆ. (ನಿಬಂಧನೆಗಳು)
A. 12
B. 20
C. 10
D. 25
ಉತ್ತರ:

 
15. ಸಂವಿಧಾನದ ಈ ನಿಬಂಧನೆಯಲ್ಲಿ ಅಧಿಕಾರ, ಜವಾಬ್ದಾರಿ ಮತ್ತು ಪಂಚಾಯಿತಿಯ ಪ್ರಭಾವಗಳು ಇವೆ.
A. 3
B. 4
C. 6
D. 11
ಉತ್ತರ:

 
16. ರಾಯಚೂರ್ ದಾವೋಬ್ ಎಂಬುದು ಈ ನದಿಗಳ ನಡುವೆ ಇದೆ.
A. ಕಾವೇರಿ ಮತ್ತು ಕೃಷ್ಣ
B. ಕೃಷ್ಣ ಮತ್ತು ಗೋದಾವರಿ
C. ಕಾವೇರಿ ಮತ್ತು ಗೋದಾವರಿ
D. ಕೃಷ್ಣ ಮತ್ತು ತುಂಗಾಭದ್ರ
ಉತ್ತರ:

 
17.ಪ್ಲಾನಿಂಗ್ ಕಮಿಷನ್ ಭವಿಷ್ಯದ ಎಸ್ಟೀಮೇಟೆಡ್ ಪ್ರೋಗ್ರೆಸ್ ಅನ್ನು ಡಾಕ್ಯುಮೆಂಟ್ ರೂಪದಲ್ಲಿ ಪ್ರಸ್ತುತ ಪಡಿಸುತ್ತದೆ. ಅದನ್ನು ಹೀಗೆ ಕರೆಯುತ್ತಾರೆ.
A. ಇಂಡಿಯಾ ಮಿಷನ್ 2015
B. ಇಂಡಿಯಾ ಮಿಷನ್ 2040
C. ಇಂಡಿಯಾ ಮಿಷನ್ 2020
D. ಇಂಡಿಯಾ ಮಿಷನ್ 2025
ಉತ್ತರ:

 
18. ಭಾರತದಲ್ಲಿ ಪ್ರಪ್ರಥಮವಾಗಿ ಪ್ರಕಾಶಿಸಲ್ಪಟ್ಟ ವಾರ್ತಾಪತ್ರಿಕೆ
A. ಬಾಂಬೆ ಸಮಾಚಾರ್
B. ಬೆಂಗಾಲ್ ಪತ್ರಿಕಾ
C. ಬೆಂಗಾಲ್ ಗೆಜೆಟ್
D. ದಿ ಹಿಂದೂ
ಉತ್ತರ:

 
19. ಸಂವಿಧಾನದ 356ನೇ ನಿಬಂಧನೆಯು ಮುಖ್ಯವಾದುದು ಏಕೆಂದರೆ ಅದು
A. ಅಂತರರಾಜ್ಯ ಸಂಬಂಧಗಳ ಕುರಿತಾದದ್ದಾಗಿದೆ
B. ಪ್ರೆಸ್ ಗೆ ಸಂಬಂಧಿಸಿದ್ದು
C. ಕೇಂದ್ರ ಮತ್ತು ರಾಜ್ಯಗಳಿಗೆ ಸಂಬಂಧಿಸಿದ್ದು
D. ಬಡ್ಜೆಟ್ ಹಂಚಿಕೆ ಕುರಿತದ್ದು
ಉತ್ತರ:

 
20. 1998ರ ನೋಬಲ್ ಪ್ರೈಜ್ ಫಾರ್ ಎಕನಾಮಿಕಸ್ ಅನ್ನು ಅಮರ್ತ್ಯಸೇನ್ ಅವರ ಈ ಕೊಡುಗೆಗಾಗಿ ನೀಡಲಾಗಿದೆ.
A. ವೆಲ್ ಫೇರ್ ಎಕನಾಮಿಕ್ಸ್
B. ಮೈಕ್ರೋ ಎಕನಾಮಿಕ್ಸ್
C. ಡೆವಲಪ್ ಮೆಂಟ್ ಎಕನಾಮಿಕ್ಸ್
D. ಇನ್ ಸ್ಟಿಟ್ಯೂಷನಲ್ ಎಕನಾಮಿಕ್ಸ್
ಉತ್ತರ:

 
21. ದಾದಾಸಾಹೇಬ್ ಪಾಲ್ಕೆ ಪುರಸ್ಕಾರವು 1969ರಲ್ಲಿ ಆರಂಭವಾದಾಗಿನಿಂದ ಕರ್ನಾಟಕದ ಎಷ್ಟು ಮಂದಿ ನಟರು ಈ ಪ್ರಶಸ್ತಿ ಪಡೆದಿದ್ದಾರೆ.
A. 3
B. 2
C. 1
D. 0
ಉತ್ತರ:

 
22. ಭಾರತದ ಅತಿಕಡಿಮೆ ಜನನಿಬಿಡವಾದ ರಾಜ್ಯಗಳು.
A. ಸಿಕ್ಕಿಂ, ಮಿಜೋರಂ, ಅರುಣಾಚಲಪ್ರದೇಶ, ಗೋವಾ
B. ನಾಗಲ್ಯಾಂಡ್, ಸಿಕ್ಕಿಂ, ಮಿಸೋರಾಂ, ಅರುಣಾಚಲಪ್ರದೇಶ
C. ಮೇಘಾಲಯ, ಮಣಿಪುರ, ಮಿಸೋರಾಂ, ಸಿಕ್ಕಿಂ
D. ಸಿಕ್ಕೀಂ, ಮಣೀಪುರ, ಅರುಣಾಚಲಪ್ರದೇಶ, ಗೋವಾ
ಉತ್ತರ:

 
23. ರಾಜೀವ್ ಗಾಂಧಿ ಖೇಲ್ ರತ್ನ ಪುರಸ್ಕಾರವನ್ನು ಈ ಕೆಳಗಿನವರಲ್ಲಿ ಯಾರು ಪಡೆದಿಲ್ಲ.
A. ವಿಶ್ವನಾಥನ್ ಆನಂದ್
B. ಪ್ರಕಾಶ್ ಪಡುಕೋಣೆ
C. ಪಂಕಜ್ ಅಡ್ವಾನಿ
D. ಸಚಿನ್ ತೆಂಡೂಲ್ಕರ್
ಉತ್ತರ:

 
24. ಪಡುವಲಪಾಯ ಮತ್ತು ಮೂಡಲಪಾಯ ಇವು ಯಾವ ನೃತ್ಯ ಪ್ರಾಕಾರದ ರೂಪಗಳು.
A. ಡೊಳ್ಳುಕುಣಿತ
B. ಕರಗ
C. ಯಕ್ಷಗಾನ
D. ಕೂಚಿಪುಡಿ
ಉತ್ತರ:

 
25. ರಿಸಿಷನ್ ಮತ್ತು ಡಿಪ್ರೆಷನ್ ಎಂಬುದು ಯಾವುದಕ್ಕೆ ಸಂಬಂಧಿಸಿವೆ.
A. ಕಾಯಿಲೆ
B. ವಾಹನದ ಬಿಡಿಭಾಗಗಳು
C. ಎಕನಾಮಿಕ್ ಸೈಕಲ್
D. ರಾಷ್ಟ್ರೀಯ ಆಧ್ಯತೆಗಳು.
ಉತ್ತರ:

 
26. ಯು.ಪಿ.ಎ. ಎಂಬುದು ಇದರ ಸಂಕ್ಷಿಪ್ತ ರೂಪ.
A. ಯುನೈಟೆಡ್ ಪೊಲಿಟಿಕಲ್ ಅಲಿಯನ್ಸ್
B. ಯೂನಿಫೈಡ್ ಪ್ರೊಫೇಷನಲ್ ಅಸೋಸಿಯೇಷನ್
C. ಯುನೈಟೈಡ್ ಪೊಲಿಟಿಕಲ್ ಅಸೋಸಿಯೇಷನ್
D. ಯುನೈಟೆಡ್ ಪ್ರೋಗ್ರೆಸಿವ್ ಅಲಿಯನ್ಸ್
ಉತ್ತರ:

 
27. ಭಾರತದ ಅತಿದೊಡ್ಡ ವಸ್ತಸಂಗ್ರಾಹಲಯ ಯಾವುದು.
A. ಸಾಲರ್ ಜಂಗ್ ಮ್ಯೂಸಿಯಂ, ಹೈದರಾಬಾದ್
B. ನ್ಯಾಷನಲ್ ಮ್ಯೂಸಿಯಂ, ಡೆಲ್ಲಿ
C. ಇಂಡಿಯನ್ ಮ್ಯೂಸಿಯಂ, ಕೊಲ್ಕತ್ತಾ
D. ಇವು ಯಾವುವೂ ಅಲ್ಲ
ಉತ್ತರ:

 
28. ಯುನೀಕ್ ಐಡೆಂಟಿಫಿಕೇಶನ್ ಡಾಟಾಬೇಸ್ ಅಥಾರಿಟಿ ಆಫ್ ಇಂಡಿಯಾದ ಈಗಿನ ಅಧ್ಯಕ್ಷರು.
A. ನಾರಾಯಣ ಮೂರ್ತಿ
B. ಅಜೀಂ ಪ್ರೇಮ್ ಜಿ
C. ನಂದನ್ ನೀಲೇಕಣಿ
D. ರತನ್ ಟಾಟಾ
ಉತ್ತರ:

 
29. ಹ್ಯೂಮನ್ ಡೆವಲಪ್ ಮೆಂಟ್ ಇಂಡೆಕ್ಸ್ ನಲ್ಲಿ 2007-08ರಲ್ಲಿ ಭಾರತದ ಸ್ಥಾನವು ಇದಾಗಿದೆ.
A. 112
B. 128
C. 137
D. 98
ಉತ್ತರ:

 
30. ಎನ್.ಎಸ್.ಎಸ್.ಒ ಎಂಬುದು ಇದರ ಸಂಕ್ಷಿಪ್ತ ರೂಪ.
A. ನ್ಯಾಷನಲ್ ಸೋಷಿಯಲ್ ಸರ್ವೀಸ್ ಆರ್ಗನೈಸೇಷನ್
B. ನ್ಯಾಷನಲ್ ಸೆಕ್ಯೂರಿಟಿ ಸರ್ವೀಸ್ ಆರ್ಗನೈಸೇಷನ್
C. ನ್ಯಾಷನಲ್ ಸ್ಯಾಂಪಲ್ ಸರ್ವೇ ಆರ್ಗನೈಸೇಷನ್
D. ನ್ಯಾಷನಲ್ ಸೈಂಟಿಫಿಕ್ ಸರ್ವೀಸ್ ಆರ್ಗನೈಸೇಷನ್
ಉತ್ತರ:


ಗ್ರಾಮೀಣಾಭಿವೃದ್ದಿ & ಪಂಚಾಯತ್ ರಾಜ್

31. ರಾಷ್ಟ್ರೀಯ ಗ್ರಾಮೀನ ಉದ್ಯೋಗ ಭರವಸೆಯ ಕಾಯಿದೆ ಮತ್ತು ಯೋಜನೆಗೆ ನಿಧಿಯನ್ನು ನೀಡುವವರು:
A. ವಿಶ್ವಬ್ಯಾಂಕ್
B. ರಾಜ್ಯ ಸರ್ಕಾರ
C. ಕೇಂದ್ರ ಸರ್ಕಾರ
D. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ
ಉತ್ತರ:

32. ರಮೇಶನು REGS ಯೋಜನೆಯಲ್ಲಿ ಹುದ್ದೆಗಾಗಿ ಅರ್ಜಿ ಹಾಕಿದ ಮತ್ತು ಸ್ಥಳೀಯ ಕಾಲುವೆ ಕೆಲಸ ಅವನಿಗೆ ಸಿಕ್ಕಿತು. ಆದರೂ ಸಹ ಆ ಕಾರ್ಯಕ್ಕೆ ನಿಯೋಜಿತ ಸಂಸ್ಥೆಯು 20 ದಿನವಾದರೂ ಕೆಲಸವನ್ನು ಆರಂಭಿಸಲಿಲ್ಲ. ಇಂತಹ ಸಮಯದಲ್ಲಿ ರಮೇಶನು ಮೊದಲು ಕಾಣಬೇಕಾದವರು.
A. ಪ್ರೋಗ್ರಾಂ ಅಧಿಕಾರಿ
B. ಜಿಲ್ಲಾ ಪ್ರೋಗ್ರಾಂ ಕೋ ಆರ್ಡಿನೇಟರ್
C. ತಾಲ್ಲೂಕು ಪಂಚಾಯತ್ ಅಧ್ಯಕ್ಷ
D. ಇವರಾರೂ ಅಲ್ಲ
ಉತ್ತರ:

33. ವೆಂಕಟೇಶನ ಕುಟುಂಬದಲ್ಲಿ ಅವನು, ಅವನ ಪತ್ನಿ ಮತ್ತು ಮೂರು ಗಂಡು ಮಕ್ಕಳು ಕ್ರಮವಾಗಿ 24,19 ಮತ್ತು 16 ವರ್ಷದವರು ಹಾಗೂ 45 ವಯಸ್ಸಿನ ಅವಿವಾಹಿತ ಸೋದರಿ ಇದ್ದಾರೆ. ಅವನ ಮೊದಲ ಮಗನು ಮದುವೆಯಾಗಿ ಅವನ ಪತ್ನಿ ಮತ್ತು ಮಗಳೊಡನೆ ಹತ್ತಿರದ ಗ್ರಾಮದಲ್ಲಿ ಅದೇ ಪಂಚಾಯತ್ ನಲ್ಲಿದ್ದಾರೆ. ಈಗ ಯಾರ್ಯರು ವೆಂಕಟೇಶನ ಕುಟುಂಬದವರು REGS ಯೋಜನೆಯಡಿ ಕುಟುಂಬದವರೆಂದು ನೊಂದಾಯಿಸಿಕೊಳ್ಲಬಹುದು.
A. ವೆಂಕಟೇಶ, ಅವನ ಪತ್ನಿ ಮತ್ತು ಅವಿವಾಹಿತ ಗಂಡು ಮಕ್ಕಳು
B. ವೆಂಕಟೇಶ, ಅವನ ಪತ್ನಿ ಮತ್ತು ತಂಗಿ ಹಾಗೂ ಎರಡನೇ ಮಗ
C. ವೆಂಕಟೇಶ, ಅವನ ಪತ್ನಿ, ತಂಗಿ ಮತ್ತು ಹಿರಿಯ ಇಬ್ಬರು ಗಂಡು ಮಕ್ಕಳು
D. ಕುಟುಂಬದ ಎಲ್ಲರೂ
ಉತ್ತರ:

34. ರಘು ಮತ್ತು ಅವನ ಕುಟುಂಬವು ಜನವರಿಯಲ್ಲಿ ಮತ್ತೊಂದು ಜಿಲ್ಲೆಗೆ ಹೋಗಿ ಸೆಪ್ಟೆಂಬರ್ ನಲ್ಲಿ ಹಿಂತಿರುಗಿದರು. ಅವನು REGS ನಲ್ಲಿ ನೊಂದಾಯಿಸಲು ಗ್ರಾಮ ಪಂಚಾಯತ್ ಅವರನ್ನು ಸಂಪರ್ಕಿಸಿದಾಗ ಅವರು ಅವನಿಗೆ ಹೀಗೆ ಹೇಳಿದರು.
A. ಅವನ ಕುಟುಂಬವು REGS ಅಡಿಯಲ್ಲಿ ಅನ್ವಯಿಸುವುದಿಲ್ಲ.
B. ಅವನ ಕುಟುಂಬವು REGS ಗೆ ಅನ್ವಯಿಸುತ್ತದೆ.
C. 50 ದಿನಗಳ ಕಾಲ ಮಾತ್ರ ಅನ್ವಯಿಸುತ್ತದೆ ಏಕೆಂದರೆ ಅವನು ಆರು ತಿಂಗಳುಗಳ ಕಾಲ ಆಪ್ರದೇಶದಲ್ಲಿರಲಿಲ್ಲ.
D. ಕುಟುಂಬದ ೊಬ್ಬ ಸದಸ್ಯರು ಮಾತ್ರ ಅರ್ಜಿಸಲ್ಲಿಸಬಹುದು.
ಉತ್ತರ:

35. ರಾಮುವಿಗೆ ಮಾರ್ಚ್ 2008 ರಲ್ಲಿ ಜಾಬ್ ಕಾರ್ಡ್ ನೀಡಲಾಗಿದ್ದು, ಅವನ ಮಗನಿಗೆ ಮೇ 2008 ರಲ್ಲಿ 18 ವರ್ಷಗಳಾಯಿತು. ಅವನ ಮಗನು ಉದ್ಯೋಗಕ್ಕೆ ಅರ್ಹನಾಗಲು ರಾಮು ಇದನ್ನು ಮಾಡಬೇಕು.
A. ಗ್ರಾಮ ಪಂಚಾಯತ್ ಗೆ ಕೂಡಲೇ ತಿಳಿಸಬೇಕು.
B. ಗ್ರಾಮ ಪಂಚಾಯತ್ ರವರು ವಾರ್ಷಿಕ ಅಪ್ ಡೇಶನ್ ಮಾಡುವವರೆ ಕಾಯಬೇಕು
C. ಯೋಜನಾಧಿಕಾರಿ ಅವರನ್ನು ಸಂಪರ್ಕಿಸಬೇಕು.
D. ಅವನು ಯಾವುದನ್ನೂ ಮಾಡಬೇಕಾಗಿಲ್ಲ. ಏಕೆಂದರೆ ಅವನ ಮಗನಿಗೆ 18 ವರ್ಷಗಳಾದೊಡನೆ ತಾನಾಗಿಯೇ ಸೇರಿಸಲ್ಪಡುತ್ತಾನೆ.
ಉತ್ತರ:

36. NREGA ಯೋಜನೆ ಅಡಿಯಲ್ಲಿ ಪಂಚಾಯಿತಿ ಕ್ಷೇತ್ರದ ಪೂರ್ಣ ಅನುಮತಿಸಲ್ಪಟ್ಟ ಕೆಲಸದಲ್ಲಿ
A. ಕಡೇಪಕ್ಷ ಶೇ.20 ರಷ್ಟು ಖರ್ಚನ್ನು ಗ್ರಾಮ ಪಂಚಾಯಿತಿಯವರು ವಿನಿಯೋಗಿಸುತ್ತಾರೆ.
B. ಕಡೇಪಕ್ಷ ಶೇ.50 ರಷ್ಟು ಖರ್ಚನ್ನು ಗ್ರಾಮ ಪಂಚಾಯಿತಿಯವರು ವಿನಿಯೋಗಿಸುತ್ತಾರೆ.
C. ಸಂಪೂರ್ಣವಾಗಿ ಹೊರಗಿನ ಏಜೆನ್ಸಿಯವರು ನೋಡಿಕೊಳ್ಳುತ್ತಾರೆ.
D. ಆ ಕ್ಷೇತ್ರದ ಎನ್.ಜಿ.ಓ.ಗಳು ಕಡೆಯ ಪಕ್ಷ ಶೇ.20 ರಷ್ಟನ್ನು ವಿನಿಯೋಗಿಸುತ್ತಾರೆ.
ಉತ್ತರ:

37. ಸಾಮೂಹಿಕ ಶೌಚಾಲಯ ಸಂಕೀರ್ಣಗಳನ್ನು ನಿರ್ಮಿಸುವುದು ಮತ್ತು ಸುಸ್ಥಿತಿಯಲ್ಲಿಡುವುದು ಇವರ ಜವಾಬ್ದಾರಿಯಾಗಿದೆ.
A. ಗ್ರಾಮ ಪಂಚಾಯತ್
B. ರಾಜ್ಯ ಸರ್ಕಾರ
C. ಕೇಂದ್ರ ಸರ್ಕಾರ
D. ಮೇಲಿನ ಎಲ್ಲವೂ
ಉತ್ತರ:

38. ಈ ಕೆಳಗಿನವುಗಳಲ್ಲಿ ಯಾವುದು ಸತ್ಯವಲ್ಲ.
A. ಪ್ರತಿ ಶಾಲೆಯು ಗಂಡು ಮತ್ತು ಹೆಣ್ಣು ಮಕ್ಕಳಿಗೆ ಬೇರೆ ಬೇರೆ ಶೌಚಾಲಯ ಹೊಂದಿರಬೇಕು.
B. ಪ್ರತಿ ಅಂಗನವಾಡಿಯೂ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಬೇರೆ ಬೇರೆ ಶೌಚಾಲಯ ಹೊಂದಿರಬೇಕು.
C. ಪ್ರತಿ ಶಾಲೆಯೂ ಆರೋಗ್ಯ ನೈರ್ಮಲ್ಯದಲ್ಲಿ ತರಬೇತಿ ಹೊಂದಿದ ಒಬ್ಬ ಉಪಾಧ್ಯಾಯರನ್ನು ಹೊಂದಿರಬೇಕು.
D. ಶಾಲೆಯ ಶೌಚಾಲಯ ನಿರ್ಮಾಣಕ್ಕೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಪೋಷಕರು ಉಪಾಧ್ಯಾಯರು ಹಣ ಒದಗಿಸಬೇಕು.
ಉತ್ತರ:

39. ಲಕ್ಷ್ಮೀ ಎಂಬುವವರಿಗೆ ಇಂದಿರಾ ಆವಾಜ್ ಯೋಜನೆ ಅಡಿಯಲ್ಲಿ ಗೃಹವನ್ನು ವಿತರಿಸಲಾಗಿತ್ತು. ಅವರು ನಿರ್ಮಾಣ ಕಾರ್ಯದಲ್ಲಿ ನುರಿತ ವ್ಯಕ್ತಿ ಅಲ್ಲದ ಕಾರಣ ಅವರು..
A. ರಾಜ್ಯ ಸರ್ಕಾರದಿಂದ ನೇಮಿಸಲ್ಪಟ್ಟ ಗುತ್ತಿಗೆದಾರರನ್ನು ಕಾಣಬೇಕು.
B. ನಿರ್ಮಾಣ ಸಂಬಂಧವಾಗಿರುವ ಸರ್ಕಾರದ ಇಲಾಖೆಗಳ ಸಹಾಯ ಪಡೆಯಬೇಕು.
C. ಅವರೇ ಸ್ವತಃ ಸ್ಥಳೀಐ ಕೆಲಸದವರನ್ನು ಮತ್ತು ಕಟ್ಟಡದ ಮೂಲ ವಸ್ತುಗಳನ್ನು ಸಿದ್ದಪಡಿಸಿಕೊಳ್ಳಬೇಕು.
D. ಮೇಲಿನ ಯಾವುವೂ ಅಲ್ಲ.
ಉತ್ತರ:

40. ಕೇಂದ್ರ ಸರ್ಕಾರವು ಇಂದಿರಾ ಆವಾಜ್ ಯೋಜನೆಗೆ ಸಹಕಾರ, ಸಹಾಯ ನೀಡಲು ಈ ವಿಷಯಗಳನ್ನು ಆಧಾರವಾಗಿಟ್ಟುಕೊಳ್ಳುತ್ತದೆ.
A. ರಾಜ್ಯದ ಗ್ರಾಮೀಣ ಬಡತನ ಮತ್ತು ದೇಶದ ಗ್ರಾಮೀಣ ಬಡತನ ಇವುಗಳ ಸರಾಸರಿ ಅನುಪಾತದ ಮೇರೆಗೆ
B. ರಾಜ್ಯದ ಗ್ರಾಮೀಣ ಪ್ರದೇಶ ಮತ್ತು ದೇಶದ ಗ್ರಾಮೀಣ ಪ್ರದೇಶದ ಸರಾಸರಿ ಅನುಪಾತ
C. ರಾಜ್ಯದ ಪುರುಷ ಮತ್ತು ಸ್ತ್ರೀಯರ ಸರಾಸರಿ ಅನುಪಾತದ ಮೇರೆಗೆ
D. ಮೇಲಿನ ಎಲ್ಲವೂ ಹೌದು
ಉತ್ತರ:

41. ರಾಜೀವ್ ಗಾಂಧಿ ಗೃಹ ನಿರ್ಮಾಣ ಸಂಸ್ಥೆ ನಿಯಮಿತ ಈ ಸರ್ಕಾರಿ ಸಂಸ್ಥೆಯನ್ನು ಸ್ಥಾಪಿಸಿದವರು
A. ಕೇಂದ್ರ ಸರ್ಕಾರ
B. ಕರ್ನಾಟಕ ಸರ್ಕಾರ
C. ಕೇಂದ್ರ ಸರ್ಕಾರ ಮತ್ತು ಇತರ ಎಲ್ಲಾ ರಾಜ್ಯ ಸರ್ಕಾರದ ಸಹಯೋಗದಿಂದ
D. ಮೇಲಿನ ಯಾವುವೂ ಅಲ್ಲ.
ಉತ್ತರ:

42. ನಗರ ಪ್ರದೇಶ ಆಶ್ರಯ ಗೃಹ ನಿರ್ಮಾಣ ಯೋಜನೆಯ ಪ್ರಯೋಜನ ಪಡೆಯಬೇಕಾದವನು ನೀಡಬೇಕಾದ ಕನಿಷ್ಟ ಹಣ
A. 5000
B. 10000
C. ನಿರ್ಮಾಣದ ಶೇ.10
D. ನಿರ್ದಿಷ್ಟಪಡಿಸಿಲ್ಲ
ಉತ್ತರ:

43. ಅಂಬೇಡ್ಕರ್ ಗೃಹ ನಿರ್ಮಾಣ ಯೋಜನೆಯಡಿಯಲ್ಲಿ ಲಾಭ ಪಡೆಯುವವರು
A. ಸಾಲದ ಶೇ. 11 ರ ಬಡ್ಡಿ ಕಟ್ಟಬೇಕು
B. ಸಾಲದ ಶೇ. 10 ರ ಬಡ್ಡಿ ಕಟ್ಟಬೇಕು
C. ಸಾಲದ ವೆಚ್ಚವನ್ನು 180 ತಿಂಗಳ ಕಂತಿನಲ್ಲಿ ಕಟ್ಟಬೇಕು
D. ಸಾಲ ಪಾವತಿ ಮಾಡಬೇಕಾಗಿಲ್ಲ. ಏಕೆಂದರೆ ಪೂರ್ಣಹಣ ಸಬ್ಸಿಡಿಯಾಗಿ ಬಂದಿರುತ್ತದೆ.
ಉತ್ತರ:

44. ನಿಯಮ 73 ರಲ್ಲಿ ಸಂವಿಧಾನದ ತಿದ್ದುಪಡಿ ಮಾಡಿರುವುದು ಈ ಕುರಿತಾಗಿದೆ.
A. ಪಂಚಾಯತ್ ರಾಜ್ ನಲ್ಲಿ 2-ಟಯರ್ ವಿಧಾನವನ್ನು ಸ್ಥಾಪಿಸುವ ಕುರಿತು
B. ಪಂಚಾಯತ್ ರಾಜ್ ನಲ್ಲಿ 3-ಟಯರ್ ವಿಧಾನವನ್ನು ಸ್ಥಾಪಿಸುವ ಕುರಿತು
C. ಜಿಲ್ಲಾ ಯೋಜನಾ ಸಮಿತಿಯ ಸ್ಥಾಪನೆ ಕುರಿತದ್ದು
D. ಮೇಲಿನ ಎಲ್ಲವೂ
ಉತ್ತರ:

45. ಕರ್ನಾಟಕ ಪಂಚಾಯತ್ ರಾಜ್ ಶಾಸನ 1993 ರಲ್ಲಿನ ನಿಬಂಧನೆಗಳು ಜಾರಿಗೆ ಬಂದದ್ದು
A. 1 ನವೆಂಬರ್ 1993
B. 1 ಮೇ 1993
C. 10 ಮೇ 1993
D. 1 ಮೇ 1994
ಉತ್ತರ:

46. ಮುನಿಸಿಪಾಲಿಟಿಯ ಮತ್ತು ಪಂಚಾಯತ್ ಯೋಜನೆಯನ್ನು ಸಂಯೋಜಿಸುವವರು
A. ರಾಜ್ಯ ಸರ್ಕಾರ
B. ಜಿಲ್ಲಾ ಯೋಜನಾ ಸಮಿತಿ
C. ಆರೋಗ್ಯ ಮಂತ್ರಾಲಯ
D. ಮೇಲಿನ ಯಾವುದೂ ಅಲ್ಲ
ಉತ್ತರ:

47. ಗ್ರಾಮ ಸಭೆಯು ಕನಿಷ್ಟಪಕ್ಷ ಎಷ್ಟು ಬಾರಿ ಸಂಧಿಸಬೇಕು.
A. ಆರು ತಿಂಗಳು
B. ಮೂರು ತಿಂಗಳು
C. ಎರಡು ವಾರ
D. ನಿರ್ದಿಷ್ಟ ಪಡಿಸಿಲ್ಲ
ಉತ್ತರ:

48. ಗ್ರಾಮ ಪಂಚಾಯಿತಿಯು ಇವುಗಳಿಗೆ ಜವಾಬ್ದಾರಿಯಾಗಿದೆ.
A. ಪ್ರತೀ ವರ್ಷ ಶೇ 10 ರಷ್ಟು ಕುಟುಂಬಗಳಿಗೆ ಶೌಚಾಲಯ ಒದಗಿಸುವುದು ಹಾಗೂ ಶೀಘ್ರವಾಗಿ ಸಂಪೂರ್ಣವಾಗಿ ಎಲ್ಲರಿಗೂ ನೀಡುವುದು
B. ಪ್ರಾಥಮಿಕ ಶಾಲೆಗೆ ಎಲ್ಲಾ ಮಕ್ಕಳನ್ನು ನೊಂದಾಯಿಸುವುದು
C. ಸಾರ್ವಜನಿಕ ರಸ್ತೆಗಳನ್ನು ನಿರ್ಮಿಸಿ, ದುರಸ್ತಿ ಮಾಡಿ ಸುಸ್ಥಿತಿಯಲ್ಲಿಡುವುದು
D. ಮೇಲಿನ ಎಲ್ಲಾ ಕಾರ್ಯಗಳೂ ಹೌದು
ಉತ್ತರ:

49. ಗ್ರಾಮ ಪಂಚಾಯಿತಿಯ ಕರ್ತವ್ಯಗಳಲ್ಲಿ ಕುಡಿಯಲು ಮತ್ತು ಸ್ನಾನಕ್ಕೆ ಒದಗಿಸುವ ನೀರನ್ನು ಪ್ರಾಣಿಗಳನ್ನು ತೊಳೆಯಲು ಉಪಯೋಗಿಸಬಾರದು ಮತ್ತು ಕಲ್ಮಶಗೊಳಿಸಬಾರದು. ಇಂತಹ ಅಪರಾಧ ಮಾಡಿದಲ್ಲಿ ಅಂತಹವರಿಗೆ ಗ್ರಾಮ ಪಂಚಾಯಿತಿಯು ಈ ಶಿಕ್ಷೆ ವಿಧಿಸುತ್ತದೆ.
A. ಬಂಧನ ಮತ್ತು ಜೈಲು ಶಿಕ್ಷೆ
B. 50 ರೂ.ಗಳ ದಂಡ
C. ಅಪರಾಧಿಯನ್ನು ಆ ಸ್ಥಳದಿಂದ ಹೊರಹಾಕುವುದು
D. ಮೇಲಿನ ಯಾವುವೂ ಅಲ್ಲ.
ಉತ್ತರ:

50. ಗ್ರಾಮ ಪಂಚಾಯತ್ ಪ್ರದೇಶದಲ್ಲಿರುವ ಖಾಸಗಿ ಮೋರಿ, ಒಳಚರಂಡಿ ಮತ್ತು ಮನೆಯ ಗಲ್ಲಿಗಳ ಸುಸ್ಥಿತಿಯಲ್ಲಿಡುವುದು ಇವರ ಜವಾಬ್ದಾರಿ;
A. ಮನೆ ಇರುವ ಜಾಗದ ಮನೆಯ ಒಡೆಯ ಅಥವಾ ಜಮೀನಿನ ಒಡೆಯರದ್ದು
B. ವಾರ್ಡ್ ಪಂಚಾಯತ್ ಅವರದ್ದು
C. ಗ್ರಾಮ ಪಂಚಾಯತ್ ಅವರದ್ದು
D. ಎಲ್ಲರೂ ಹಂಚಿಕೊಂಡು ಮಾಡುವಂತಹುದು.
ಉತ್ತರ:

51. ಗ್ರಾಮ ಪಂಚಾಯಿತಿಯ ಅಸ್ಥಿತ್ವದಲ್ಲಿರುವ ಸಮಿತಿ ತಿಂಗಳ ಲೆಕ್ಕಾಚಾರವನ್ನು ಇಟ್ಟು ಸಮಿತಿಗೆ ಒಪ್ಪಿಸುವವರು
A. ಕಾರ್ಯದರ್ಶಿ
B. ಅಧ್ಯಕ್ಷ
C. ಉಪಾಧ್ಯಕ್ಷ
D. ಮೇಲಿನ ಯಾರೂ ಅಲ್ಲ
ಉತ್ತರ:

52. ಗ್ರಾ.ಪಂ.ನ ಅಧ್ಯಕ್ಷರ ಕಾರ್ಯಾಲಯದ ಕಾಲಾವಧಿ
A. ಐದು ವರ್ಷ
B. ಎರಡು ವರ್ಷ
C. ಅವರು ಗ್ರಾಮ ಪಂಚಾಯಿತಿಯ ಸದಸ್ಯರಾಗಿರುವ ತನಕ
D. ಅಧ್ಯಕ್ಷರು ನಿರ್ಧರಿಸಿದಂತೆ
ಉತ್ತರ:

53. ಗ್ರಾಮ ಪಂಚಾಯಿತಿ ಸಭೆಗೆ ಕನಿಷ್ಟ ಹಾಜರಾತಿ
A. ಹತ್ತು
B. ಒಟ್ಟು ಸದಸ್ಯರ ಶೇ.10 ರಷ್ಟು
C. ಒಟ್ಟು ಸದಸ್ಯರ ಅರ್ಧಭಾಗ
D. ನಿಶ್ಚಿತವಾಗಿಲ್ಲ
ಉತ್ತರ:

54. ಗ್ರಾಮ ಪಂಚಾಯಿತಿಯು ಇವುಗಳನ್ನು ಸ್ವೀಕರಿಸಲು ಅಧಿಕಾರ ಹೊಂದಿದೆ.
A. ತೆರಿಗೆ
B. ಸುಂಕ
C. ಕರ (ತೆರಿಗೆ)
D. ಮೇಲಿನ ಎಲ್ಲವೂ
ಉತ್ತರ:

55. ಗ್ರಾಮ ಪಂಚಾಯಿತಿಯ ಹಣಕಾಸಿನ ಪರಿಸ್ಥಿತಿಯನ್ನು ಹಣಕಾಸಿನ ಮಂಡಲಿ (ಕಮಿಷನ್) ಅವರು ಪರಿಶೀಲನೆ ಮಾಡುತ್ತಾರೆ. ಇದನ್ನು ಆಯ್ಕೆ ಮಾಡುವವರು
A. ತಾಲ್ಲೂಕು ಪಂಚಾಯತ್
B. ರಾಜ್ಯದ ಮುಖ್ಯಮಂತ್ರಿ
C. ರಾಜ್ಯ ಪಾಲರು
D. ಇವರಾರೂ ಅಲ್ಲ
ಉತ್ತರ:

56. ಸ್ಥಾಪನಾ ಖರ್ಚುಗಳಿಗೆ ಸರ್ಕಾರವು ಹಣದ ಅನುಮತಿ ಇವರಿಗೆ ನೀಡುತ್ತದೆ.
A. ತಾಲ್ಲೂಕು ಪಂಚಾಯತ್
B. ಗ್ರಾಮ ಪಂಚಾಯತ್
C. ಜಿಲ್ಲಾ ಪಂಚಾಯತ್
D. ಮೇಲಿನ ಎಲ್ಲರಿಗೂ ಹೌದು
ಉತ್ತರ:

57. ಗ್ರಾಮ ಪಂಚಾಯತಿಯು ಸ್ಟಾಂಡಿಂಗ್ ಕಮಿಟಿಗಳನ್ನು ಇವುಗಳಿಗಾಗಿ ಸ್ಥಾಪಿಸುತ್ತದೆ.
A. ವ್ಯವಸಾಯ ಉತ್ಪಾದನೆ
B. ವಿದ್ಯಾಭ್ಯಾಸ ಮತ್ತು ಸಾರ್ವಜನಿಕ ಆರೋಗ್ಯ
C. ಮಹಿಳಾ ಮತ್ತು ಮಕ್ಕಳ ಕಲ್ಯಾಣ
D. ಈ ಮೇಲಿನ ಎಲ್ಲವೂ ಹೌದು
ಉತ್ತರ:

58. ಉಪಾಧ್ಯಕ್ಷರು ಅಧ್ಯಕ್ಷರ ಕರ್ತವ್ಯಗಳನ್ನು ಈ ಸಮಯದಲ್ಲಿ ಮಾಡುತ್ತಾರೆ
A. ಅಧ್ಯಕ್ಷರು ಬಾರದಿದ್ದಾಗ ಅಥವಾ ರಜೆ ತೆಗೆದುಕೊಂಡಿದ್ದಾಗ
B. ಅಧ್ಯಕ್ಷರ ಜೊತೆ ಜೊತೆಗೆ
C. ಗ್ರಾಮ ಪಂಚಾಯಿತಿಯ ವಿಶೇಷ ಸಭೆ ನಡೆಸುವಾಗ
D. ಈ ಮೇಲಿನ ಎಲ್ಲವೂ ಹೌದು
ಉತ್ತರ:

59. ಅಬ್ದುಲ್ ನಜೀರ್ ಸಾಬ್ ಸ್ಟೇಟ್ ಇನ್ ಸ್ಟಿಟ್ಯೂಟ್ ಆಫ್ ರೂರಲ್ ಡೆವಲಪ್ ಮೆಂಟ್ ಇಲ್ಲಿದೆ.
A. ಮೈಸೂರು
B. ಬೆಂಗಳೂರು
C. ಗುಲ್ಬರ್ಗಾ
D. ಹಾಸನ
ಉತ್ತರ:
 

60. ಪಂಚಾಯತ್ ಹಣಕಾಸು ಅಭಿವೃದ್ಧಿ ಹಾಗೂ ಚಟುವಟಿಕೆಗಳ ಹನ್ನೊಂದನೆಯ ಹಣಕಾಸು ಆಯೋಗದ ಶಿಫಾರಸ್ಸಿನ ಕಾಲಾವಧಿ
A. 1993-1994 ರಿಂದ 1998-1999
B. 2000-2001 ರಿಂದ 2004-2005
C. 2003-2004 ರಿಂದ 2008-2009
D. ಮೇಲಿನ ಎಲ್ಲವೂ ಹೌದು.
ಉತ್ತರ:



GENERAL ENGLISH

61. Novels adapted for the stage have never really been my cup of tea. The idiom means
A. Not to one's taste
B. Something which is mediocre
C. To be odd in taste
D. Never a treat
ಉತ್ತರ:
 

62. "Patience and perseveance lead to achievement" means
A. There are two sides to every question
B. Slow and stedy wins the race
C. Practice makes perfect
D. There's no time like the present
ಉತ್ತರ:


63. My neighbour along with her two dogs.............. across the pasture daily
A. walks
B. walking
C. walk
D. is walking
ಉತ್ತರ:

64. Pick out the odd word
A. Preserve
B. Conserve
C. Engage
D. Protect
ಉತ್ತರ:

65. Kiran is .................... intelligent. He got.................... best student Award. The appropriate words to be filled in the blanks are
A. the, an
B. a, the
C. an, the
D. an, a
ಉತ್ತರ:

66. The noise frightened the horse. This can also be written as
A. The horse had been frightened by the noise
B. The horse has been frightened by the noise
C. The horse was being frightened by the noise
D. The horse was frightened by the noise
ಉತ್ತರ:

67. "To give someone a piece of your mind" means
A. To clear your mind of doubts
B. To give a sound scolding
C. To calm your temper
D. To break the ice
ಉತ್ತರ:

68. The synonym of 'Ameliorate' is
A. Decay
B. Improve
C. Die
D. Success
ಉತ್ತರ:

69. The opposite of "Ephemeral" is
A. Spiritual
B. Ethical
C. Permanent
D. Stable
ಉತ್ತರ:

70. Choose the correct spelt word
A. Homogenus
B. Homogenius
C. Homagenous
D. Homogeneous
ಉತ್ತರ:

71. ...................... of impending danger, he will not anticipate it
A. If u have warned him
B. Unless you warn him
C. Until you have warned him
D. Unless you warned him
ಉತ್ತರ:

72. The negative prefix for the word " glorious" is....
A. Un
B. Dis
C. In
D. Im
ಉತ್ತರ:

73. Which one of the given pair of words is similar to the following ?
Apathy: indifference
A. In total : partially
B. Pleasure : torture
C. Sound : light
D. Bonafied : genuine
ಉತ್ತರ:


74. "Reverently" means
A. To annoy deeply
B. To love deeply
C. To irritate deeply
D. To respect deeply
ಉತ್ತರ:


75. Choose the correct spelt word
A. Perseverence
B. Perceveerence
C. Perseverance
D. Perceiverance
ಉತ್ತರ:


76. There are four flyovers coming up in our area, with three soon to poen and more in the pipeline the underlined words means
A. On the way
B. Following each other
C. Far away from each other
D. Ready for inauguration
ಉತ್ತರ:

77. The tenacity demonstrated by the youngstar was appreciated by all. The underlined word means...
A. Courage
B. Intelligence
C. Determination
D. Audacity
ಉತ್ತರ:

78. Pick the odd word out
A. Humble
B. Greedy
C. Meek
D. Unassuming
ಉತ್ತರ:

79. The scissors.............. on the desk
A. was
B. Are
C. Is
D. Has been
ಉತ್ತರ:


80.

A.
B.
C.
D.
ಉತ್ತರ:




ಸಾಮಾನ್ಯ ಕನ್ನಡ

 

91. 'ದಾರಿಹೋಕ' - ಈ ಪದದ ಸಮಾನಾರ್ಥಕ ಪದ ಇದು:
A. ದಾರಿಯಲ್ಲಿ ಹೋಗುತ್ತಿರುವವನು
B. ಪ್ರವಾಸಿ
C. ದಾರಿಯಲ್ಲಿ ನಿಂತವನು
D. ದಾರಿಗೆ ಅಡ್ಡ ಬಂದವನು
ಉತ್ತರ:

92. 'ಜುಲ್ಮಾನೆ' - ಇದರ ವ್ಯಾಕರಣ ವಿಶೇಷಣ ಇದು:
A. ನುಡಿಗಟ್ಟು
B. ದಂಡ
C. ಅನ್ಯದೇಶ್ಯ ಪದ
D. ದ್ವಿರುಕ್ತಿ
ಉತ್ತರ:

93. 'ಬುವಿ' - ಪದದ ತದ್ಬವ ಪದ ಇದು:
A. ಭವಿ
B. ಛವಿ
C. ಭೂಮಿ
D. ಬಾವಿ
ಉತ್ತರ:

94. 'ಅಗತ್ಯ' - ಈ ಪದದ ವಿರುದ್ಧ ಪದ
A. ನಿರಗತ್ಯ
B. ಅಗತ್ಯ
C. ಅನಗತ್ಯ
D. ಸನಗತ್ಯ
ಉತ್ತರ:

95. 'ಎರವಲು' - ಈ ಪದದ ಸಮಾನಾರ್ಥಕ ಪದ ಇದು:
A. ಅವಲಕ್ಕಿ
B. ಅದಲು ಬದಲು
C. ಅವಳಿಜವಳಿ
D. ಸಾಲ
ಉತ್ತರ:

96. 'ನೀರುನಿಡಿ' - ಇದಕ್ಕೆ ವ್ಯಾಕರಣದಲ್ಲಿ ಈ ಹೆಸರಿದೆ
A. ದ್ವಿರುಕ್ತಿ
B. ಅನುಕರಣ ಅವ್ಯಯ
C. ಜೋಡಿ ಪದ
D. ಭಾವಸೂಚಕ ಅವ್ಯಯ
ಉತ್ತರ:

97. 'ಕೈ ಕೊಡು' - ಈ ನುಡಿಗಟ್ಟಿನ ಅರ್ಥ ಇದು:
A. ಕೈ ಕುಲುಕು
B. ಕೈ ಜೋಡಿಸು
C. ಮೋಸಮಾಡು
D. ಕೈ ಸೇರು
ಉತ್ತರ:

98. 'ಮಾತು ಬಲ್ಲವನಿಗೆ ಜಗಳವಿಲ್ಲ' - ಈ ಗಾದೆಯ ಅರ್ಥವಿದು;
A. ಮಾತಿದ್ದರೆ ಜಗಳ
B. ಮಾತು ತಿಳಿದರೆ ಜಗಳ ಆಡಬಹುದು
C. ಮಾತಿನಲ್ಲಿ ತೂಕವಿರಲಿ
D. ಜಗಳ ಬೇಕಿದ್ದರೆ ಮಾತು ಬೇಕು
ಉತ್ತರ:

99. ಸಸ್ಯಾಹಾರ ಇದರ ಶುದ್ದ ರೂಪ ಇದು;
A. ಸಸ್ಯಾಹಾರ
B. ಸಸ್ಯಾಹರ
C. ಸಾಸ್ಯಾಹಾರ
D. ಸಸ್ಯಹರ
ಉತ್ತರ:

100. 'ಕುರುಹು' - ಈ ಪದದ ಸಮಾನಾರ್ಥಕ ಪದ ಇದು;
A. ಕುರು
B. ಕರು
C. ಗುರುತು
D. ಗರಿಕೆ
ಉತ್ತರ:

101. 'ಬಂಡೆಗಲ್ಲು' - ಇದನ್ನು ಹೀಗೆ ಬಿಡಿಸಿ ಬರೆಯಬೇಕು
A. ಬಂಡೆ + ಗಲ್ಲು
B. ಬಂಡೆಗ + ಅಲ್ಲು
C. ಬಂ + ಡೆಗಲ್ಲು
D. ಬಂಡೆ + ಕಲ್ಲು
ಉತ್ತರ:

102. ವರ್ಣಮಾಲೆಯಲ್ಲಿ 'ಅಂ' ಅಕ್ಷರಕ್ಕೆ ಈ ಹೆಸರಿದೆ
A. ದೀರ್ಘಸ್ವರ
B. ಹ್ರಸ್ವಸ್ವರ
C. ಉಚ್ಚಸ್ವರ
D. ಅನುಸ್ವರ
ಉತ್ತರ:

103. 'ನಿಚ್ಚಣಿಕೆ' - ಪದದ ಅರ್ಥವಿದು
A. ಏಣಿ
B. ಬಾಚಣಿಕೆ
C. ದೋಣಿ
D. ಮುಚ್ಛಳಿಕೆ
ಉತ್ತರ:

104. ಪತ್ರ ಬರೆಯುವಾಗ ಪ್ರತಿ ಪತ್ರದ ಬಲ ಮೇಲ್ತುದಿಯಲ್ಲಿ ಇದನ್ನು ಬರೆಯಲೇಬೇಕು
A. ವಿಳಾಸ
B. ದಿನಾಂಕ, ಸ್ಥಳ
C. ಸಂಬೋದನಾ ಒಕ್ಕಣೆ
D. ಮುಕ್ತಾಯದ ಸಹಿ
ಉತ್ತರ:
 

105. ಕಚೇರಿಯ ಅಧಿಕಾರಿಗಳನ್ನು ಪತ್ರದಲ್ಲಿ ಈ ಒಕ್ಕಣೆಯಿಂದ ಸಂಬೋಧಿಸಬೇಕು.
A. ತೀರ್ಥರೂಪರಿಗೆ
B. ಮಾತೃಶ್ರೀಯವರೇ
C. ಮಾನ್ಯರೇ
D. ಪೂಜ್ಯರೇ
ಉತ್ತರ:

106. 'ಹೊತ್ತಾರೆ' - ಎಂಬ ಗ್ರಾಮ್ಯ ಪದಕ್ಕೆ ಈ ಅರ್ಥವಿದೆ.
A. ಹೊರುವುದು
B. ಬೆಳಗಿನ ಸಮಯ
C. ಹೊರೆ
D. ಭಾರವಾದುದು
ಉತ್ತರ:

107. ಇದು ಭವಿಷ್ಯತ್ ಕಾಲದ ವಾಕ್ಯ
A. ಮಕ್ಕಳು ಶಾಲೆಗೆ ಹೋಗುವರು
B. ಮಕ್ಕಳು ಶಾಲೆಗೆ ಹೋದರು
C. ಮಕ್ಕಳು ಶಾಲೆಗೆ ಹೋಗುವವರು
D. ಮಕ್ಕಳು ಶಾಲೆಗೆ ಹೋಗರು
ಉತ್ತರ:

108. ಙ ಞ ಣ ನ ಮ ಅಕ್ಷರಗಳಿಗೆ ಈ ಹೆಸರಿದೆ
A. ಅಲ್ಪಪ್ರಾಣಗಳು
B. ಅನುನಾಸಿಕಗಳು
C. ಮಹಾಪ್ರಾಣಗಳು
D. ಸಂಧ್ಯಾಕ್ಷರಗಳು
ಉತ್ತರ:

109. ವರ್ಗೀಯ ವ್ಯಂಜನಗಳಲ್ಲಿನ ಒಟ್ಟು ಅಕ್ಷರಗಳು ಇಷ್ಟು
A. 49
B. 15
C. 25
D. 10
ಉತ್ತರ:

ಈ ಗದ್ಯ ಭಾಗವನ್ನು ಓದಿಕೊಳ್ಳಿ, ಕೆಳಗಿನ ಪ್ರಶ್ನೆಗಳಿಗೆ ಸೂಕ್ತವಾಗಿ ಉತ್ತರಿಸಿ;
ದೇಹ, ಮನಸ್ಸು ಸರಿಯಾಗಿರುವ ನಾವು ನಮಗೆ ಕೊಡಮಾಡಿದ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ನಮ್ಮ ಶಕ್ತಿಯನ್ನು ಸರ್ವತೋಮುಖವಾಗಿ ಹೆಚ್ಚಿಸಿಕೊಳ್ಳಬೇಕಲ್ಲವೇ? ದೈಹಿಕ, ಮಾನಸಿಕ, ಬೌಧಿಕ ಹಾಗೂ ನೈತಿಕ ಬಲಗಳ ಜೊತೆಗೆ ನಾವು ನಮ್ಮ ಆತ್ಮಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. 'ಶಕ್ತಿಯೇ ಜೀವನ, ದುರ್ಬಲತೆಯೇ ಮರಣ' ಇದೊಂದು ದೊಡ್ಡ ಸತ್ಯ. 'ಶಕ್ತಿ ಸೌಭಾಗ್ಯ, ಚಿರ ಜೀವನದ ಒಳಗುಟ್ಟು. ದುರ್ಬಲತೆ, ಚಿಂತೆ ದುಃಖಗಳ ಮೂಲ' ಎಂದ ಸ್ವಾಮಿ ವಿವೇಕಾನಂದರು, 'ಬಲಿಷ್ಠರಾಗಿ, ಕಬ್ಬಿಣದ ಮಾಂಸಖಂಡ, ಉಕ್ಕಿನ ನರಮಂಡಲ, ವಿದ್ಯುತ್ತಿನ ಇಚ್ಚಾಶಕ್ತಿಯ ಬಲ ಇವುಗಳನ್ನು ಬೆಳೆಸಿಕೊಂಡು ನಿಮ್ಮ ಕಾಲ ಮೇಲೆ ನಿಲ್ಲಿ' ಎಂದು ತಿರುಗಿ ಸಾರಿದರು. ದುರ್ಬಲ ತಾನು ನಾಶವಾಗುವುದಲ್ಲದೆ ಇತರರಲ್ಲಿ ಶೋಷಣೆ ಮತ್ತು ಹಿಂಸೆಯ ಪ್ರವೃತ್ತಿಯನ್ನು ಹುಟ್ಟಿಸುತ್ತಾನೆ. ನಮ್ಮ ಪರಂಪರೆ ನೀಡುವ ಮುಖ್ಯ ಬೋಧನೆಯೇ ಶಕ್ತಿಯನ್ನು ಬೆಳೆಸಿಕೊಳ್ಳಿ ಎಂಬುದು. ನಿರ್ವೀರ್ಯನಾಗಬೇಡ ಎಂದು ಶ್ರೀಕೃಷ್ಣ ಅರ್ಜುನನಿಗೆ ಬೋಧಿಸಿದ.

110. ಬಲಿಷ್ಠರಾಗಿ, ಕಬ್ಬಿಣದ ಮಾಂಸಖಂಡ, ಉಕ್ಕಿನ ನರಮಂಡಲ, ವಿದ್ಯುತ್ತಿನ ಇಚ್ಚಾಶಕ್ತಿಯ ಬಲ ಇವುಗಳನ್ನು ಬೆಳೆಸಿಕೊಳ್ಳಿ ಎಂದವರು ಇವರು
A. ಅರ್ಜುನ
B. ಶ್ರೀಕೃಷ್ಣ
C. ಪುರಂದರದಾಸರು
D. ವಿವೇಕಾನಂದರು
ಉತ್ತರ:


111. 'ನಿರ್ವೀರ್ಯನಾಗಬೇಡ' ಎಂದು ಬೋಧಿಸಿದ್ದು,
A. ಶ್ರೀಕೃಷ್ಣ
B. ಅರ್ಜುನ
C. ಸ್ವಾಮಿ ವಿವೇಕಾನಂದ
D. ವಾಲ್ಮೀಕಿ
ಉತ್ತರ:

112. 'ಇದು ಜೀವನ, ಇದು ಮರಣ'
A. ಶಕ್ತಿಯೇ, ದುರ್ಬಲತೆಯೇ
B. ದೈಹಿಕವೇ, ಮಾನಸಿಕವೇ
C. ಕಬ್ಬಿಣದ ಮಾಂಸಖಂಡ, ಉಕ್ಕಿನ ನರಮಂಡಲ
D. ಹಿಂಸೆಯೇ, ಅಹಿಂಸೆಯೇ
ಉತ್ತರ:

113. ಚಿರಜೀವನದ ಒಳಗುಟ್ಟು ಇದು
A. ದುರ್ಬಲತೆ, ಚಿಂತೆ
B. ಶಕ್ತಿ ಸೌಭಾಗ್ಯ
C. ನಿರ್ವೀರ್ಯತೆ
D. ಚಿಂತೆ ದುಃಖಗಳು
ಉತ್ತರ:

ಈ ಗದ್ಯಬಾಗವನ್ನು ಓದಿಕೊಳ್ಳಿ, ಕೆಳಗಿನ ಪ್ರಶ್ನೆಗಳಿಗೆ ಸೂಕ್ತವಾಗಿ ಉತ್ತರಿಸಿ.
ಅಂದು ಮಹಾರಾಜಾ ಕಾಲೇಜು ಸಂಸ್ಕೃತಿ ಮತ್ತು ಜ್ಞಾನದ ದೇಗುಲದಂತಿತ್ತು. ಇಂದಿನಂತೆ ವಿದ್ಯಾರ್ಥಿ ಮತ್ತು ಉಪಾಧ್ಯಾಯರ ಚಳವಳಿ ಇರಲಿಲ್ಲ. ಕಾಲೇಜಿನ ಶಿಕ್ಷಕವರ್ಗದವರು ಅಲ್ಪ ಸಂಬಳ ಬರುತ್ತಿದ್ದರೂ ತಮ್ಮ ವೃತ್ತಿ ಪವಿತ್ರವಾದುದೆಂಬ ತೃಪ್ತಿಯಿಂದ ಕಾರ್ಯನಿರ್ವಹಿಸುತ್ತಿದ್ದರು. ಅವರಲ್ಲಿ ಜ್ಞಾನ ಸಂಪತ್ತಿನ ಜೊತೆಗೆ ನೈತಿಕ ಸಂಪತ್ತು ಇತ್ತು. ಮಹಾರಾಜಾ ಕಾಲೇಜಿನಲ್ಲಿಯೂ ನನಗೆ ವಿದ್ಯಾರ್ಥಿ ವೇತನ ಲಭ್ಯವಾಗಿತ್ತು. ವಿದ್ಯಾರ್ಥಿವೇತನದ ಮೊತ್ತ ತಿಂಗಳಿಗೆ ಹದಿನೆಂಟು ರೂಪಾಯಿ. ವಿದ್ಯಾರ್ಥಿವೇತನ ಪಡೆಯುತ್ತಿದ್ದವರಿಗೆ ಕಾಲೇಜಿನ ಶುಲ್ಕವಿರಲಿಲ್ಲ. ಬೆಂಗಳೂರಿನಲ್ಲಿ ವ್ಯಾಸಾಂಗ ಮಾಡುತ್ತಿದ್ದಾಗ ಹಣಕ್ಕಾಗಿ ನಮ್ಮ ಚಿಕ್ಕೊಪ್ಪನನ್ನು ಆಶ್ರಯಿಸುತ್ತಿರಲಿಲ್ಲ. ಅವರಿಗೆ ನನ್ನಿಂದ ತೊಂದರೆಯಾಗಬಾರದೆಂಬ ಉದ್ದೇಶದಿಂದ ವಿದ್ಯಾರ್ಥಿವೇತನದಿಂದಲೇ ನನ್ನ ಜೀವನ ನಿರ್ವಹಿಸುತ್ತಿದ್ದೆ.

114. ಅಂದಿನ ಶಿಕ್ಷಕರಲ್ಲಿ ಜ್ಞಾನ ಸಂಪತ್ತಿನ ಜೊತೆಗೆ ಈ ಸಂಪತ್ತೂ ಇತ್ತು.
A. ಖನಿಜ ಸಂಪತ್ತು
B. ನೈತಿಕ ಸಂಪತ್ತು
C. ಐಶ್ವರ್ಯ ಸಂಪತ್ತು
D. ಆರೋಗ್ಯ ಸಂಪತ್ತು
ಉತ್ತರ:

115. ಅಂದಿನ ಮಹಾರಾಜಾ ಕಾಲೇಜು ಹೀಗಿತ್ತು
A. ಸಂಸ್ಕೃತಿ ಮತ್ತು ಜ್ಞಾನದ ದೇಗುಲ
B. ದೊಡ್ಡ ಕಟ್ಟಡ
C. ತರಗತಿಯ ತುಂಬಾ ಹುಡುಗರಿದ್ದ ಕೋಣೆ
D. ನೆಮ್ಮದಿ, ತೃಪ್ತಿಯ ಜಾಗ
ಉತ್ತರ:

ಈ ಗದ್ಯಭಾಗವನ್ನು ಓದಿಕೊಳ್ಳಿ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ;
ದೈನ್ಯದ ಬುಡದಲ್ಲಿ ಭಯವಿದೆ. ಭಯವೇ ನರನನ್ನು ದೀನನನ್ನಾಗಿ ಮಾಡುತ್ತದೆ. ಭಯವೆಂದರೆ ದಟ್ಟಡವಿಯಲ್ಲಿ ದಾರಿತಪ್ಪಿದ ಗೋವು, ಮುಚ್ಚಿದ ಕಣ್ಣುಗಳು, ಹಾರುತ್ತಿರುವ ಎದೆ, ಕತ್ತಲೆಯಲ್ಲಿ ಕಂಗೆಟ್ಟ ಶಿಶು, ಚಕ್ರವರ್ತಿಯ ಎದುರು ನ್ಯಾಯಸ್ಥಾನದಲ್ಲಿ ನಡುಗುತ್ತಾ ನಿಂತ ಅಪರಾಧಿ. ಬೇಟೆ ನಾಯಿ ಬೆನ್ನಟ್ಟಿದ ಮೊಲದ ಭಯ. ಭಯ ಹುಟ್ಟುವುದು ಅಜ್ಞಾನದಿಂದ, ಪಾಪ ಶಂಕೆಯಿಂದ, ದೂಷಿತ ಹೃದಯದಿಂದ. ಜ್ಞಾನ ಹೆಚ್ಚಾದಂತೆ ಭಯವು ಕಡಿಮೆಯಾಗುವುದು. ಹಳ್ಳಿಗ ವಿಮಾನದಲ್ಲಿ ಕೂಡಲೂ ಅಂಜುತ್ತಾನೆ. ಆದರೆ ಹಲವು ತಿಂಗಳ ತರಬೇತಿ ಪಡೆದ ನಂತರ ಅವನೇ ವಿಮಾನ ನಡೆಸಬಹುದು.

116. ಭಯವು ಕಡಿಮೆಯಾಗುವುದು ಇದು ಹೆಚ್ವಾದಾಗ
A. ಜ್ಞಾನ
B. ಪೋಲೀಸ್
C. ಕತ್ತಲೆಯಲ್ಲಿದ್ದಾಗ
D. ಅಂಜಿಕೆ ಇಲ್ಲದಿದ್ದಾಗ
ಉತ್ತರ:

117. ಭಯದಿಂದ ನರನು ಹೀಗಾಗುತ್ತಾನೆ.
A. ಬಡವ
B. ಅನಾಮಿಕ
C. ದೀನ
D. ಹಳ್ಳಿಗ
ಉತ್ತರ:

ಈ ಗದ್ಯಭಾಗವನ್ನು ಓದಿಕೊಳ್ಳಿ, ಕೆಳಗಿನ ಪ್ರಶ್ನೆಗಳಿಗೆ ಸೂಕ್ತವಾಗಿ ಉತ್ತರಿಸಿ :
ಜಗತ್ತು ಪೂಜಿಸುವುದು ಶಕ್ತಿಯನ್ನು; ದುರ್ಬಲತೆಯನ್ನಲ್ಲ ಎಂಬುದನ್ನು ಯುವಕರು ಸರಿಯಾಗಿ ತಿಳಿದಿರಬೇಕು. ಕ್ರಿಕೇಟ್ ಮೈದಾನದಲ್ಲಿ ದಾಂಡಿಗ ನಾಲ್ಕು ಸಿಕ್ಸರ್ ಬಾರಿಸಿದರೆ ಸಹಸ್ರಾರು ಯುವಕರು ಚಪ್ಪಾಳೆ ತಟ್ಟಿ, ಹುಚ್ಚೆದ್ದು ಕುಣಿದು, ಅವನನ್ನು ಹೆಗಲ ಮೇಲೇರಿಸಿಕೊಂಡು ರಥೋತ್ಸವ ಮಾಡುವುದಿಲ್ಲವೇ? ಅದು ಅವನ ಶಕ್ತಿ ಸಾಮರ್ಥ್ಯ ದಕ್ಷತೆಗಳಿಗೆ ಸಲ್ಲಿಸಿದ ಗೌರವವಲ್ಲವೇ? ಶಕ್ತಿಯನ್ನು ಎಲ್ಲರೂ ಭಕ್ತಿ, ಗೌರವಗಳಿಂದ ನೋಡುತ್ತಾರೆ. ಶಕ್ತನಾದರೆ ನೆಂಟರೆಲ್ಲಾ ಹಿತರು, ಅಶಕ್ತನಾದರೆ ಆಪ್ತಜನರೇ ವೈರಿಗಳು ಎಂದು ಪುರಂದರದಾಸರು ಹೇಳಿದ ಮಾತು ಎಷ್ಟು ಸತ್ಯ! ತಂದೆ ತಾಯಂದಿರು ಪ್ರೀತಿಯಿಂದ ಸಾಕಿ ಸಲುಹಿದ ಮಗು ಬೆಳೆದು ದುರ್ಬಲನೂ, ರೋಗಿಷ್ಠನೂ, ದಡ್ಡನೂ, ಮೂರ್ಖನೂ ಆದರೆ ಏನೆನ್ನುವರು ಬಲ್ಲಿರಾ? ಯಾಕಾಗಿ ಹುಟ್ಟಿದನಿವನು, ಕುಲಕ್ಕೆ ಕಳಂಕ ಎನ್ನುವರಲ್ಲವೇ ? ಹೌದು ಶಕ್ತನಾದರೆ ಎಲ್ಲರೂ ಆಪ್ತರು, ಅಶಕ್ತನನ್ನು ಎಲ್ಲರೂ ತಿರಸ್ಕರಿಸುವರು.

118. ಯುವಕರು ಸರಿಯಾಗಿ ತಿಳಿದಿರಬೇಕಾದದ್ದು ಇದನ್ನು
A. ಜಗತ್ತು ಪೂಜಿಸುವುದು ಶಕ್ತಿಯನ್ನು; ದುರ್ಬಲತೆಯನ್ನಲ್ಲ
B. ಚಪ್ಪಾಳೆ ತಟ್ಟಿ, ಹುಚ್ಚೆದ್ದು ಕುಣಿಯುವುದನ್ನು
C. ಶಕ್ತಿ ಸಾಮರ್ಥ್ಯ ದಕ್ಷತೆಗಳನ್ನು ಸಲ್ಲಿಸುವುದು
D. ನಾಲ್ಕು ಸಿಕ್ಸರ್ ಬಾರಿಸುವುದನ್ನು
ಉತ್ತರ:

119. 'ಅಶಕ್ತ' ಎಂದರೆ
A. ಆಷಾಢದಲ್ಲಿ ಹುಟ್ಟಿದವನು
B. ಶಕ್ತಿ ಸಂಪ್ರದಾಯದವನು
C. ಬುದ್ಧನ ದಾರಿಯಲ್ಲಿರುವವನು
D. ಶಕ್ತಿ ಇಲ್ಲದವನು
ಉತ್ತರ:

120. ಶಕ್ತನಾದರೆ ಎಲ್ಲರೂ ಆಪ್ತರು, ಅಶಕ್ತನನ್ನು ಎಲ್ಲರೂ
A. ಕೊಂಡಾಡುವರು
B. ಮೆರವಣಿಗೆ ಮಾಡುವರು
C. ತಿರಸ್ಕಾರ ಮಾಡುವರು
D. ಗೌರವಿಸುವವರು
ಉತ್ತರ:

 


ಗಣಕ ಸಾಕ್ಷರತಾ ಪರೀಕ್ಷೆ


121. ಒಂದು ಮೇಗಾಬೈಟ್ ಗೆ ಸಮನಾದುದು
A. 210 ಬೈಟ್ ಗಳು
B. 1000 ಬೈಟ್ ಗಳು
C. 1024 ಬೈಟ್ ಗಳು
D. ಇವು ಯಾವುದೂ ಅಲ್ಲ
ಉತ್ತರ:

122. ಸೂಕ್ಷ್ಮ ಕ್ರಿಯಾತ್ಮಕ (ಮೈಕ್ರೋಪ್ರೋಸೆಸರ್) ಅಂದರೆ
A. ಋಣ ವಿದ್ಯುನ್ಮಾನದ ಚೂರು
B. ಗಣಿತದ ಕೋಷ್ಟಕಗಳನ್ನು ಬಿಡಿಸುವಂತಹುದು
C. ತರ್ಕಬದ್ದ ಕ್ರಿಯೆಯನ್ನು ಮಾಡುವಂತಹುದು
D. ಮೇಲೆ ಹೇಳಿದ ಎಲ್ಲವೂ ಸರಿ
ಉತ್ತರ:

123. ನಿಮ್ಮ ಗಣಕದ ಮೇಲೆ ಅಂತರ್ಜಾಲದ ಹಾದಿಯನ್ನು ತಲುಪಲು ನಿಮಗೆ ಇದರ ಅವಶ್ಯಕತೆ ಉಂಟು
A. ಸಂಕೇತಗಳನ್ನು ಪರಿವರ್ತಿಸಲು ಅಂತರ್ಜಾಲದಲ್ಲಿರುವ ಸಾಧನ (modem), ಅಂತರ್ಜಾಲ ಮತ್ತು ಮಾಹಿತಿ ಹುಡುಕುವ ಪ್ರಕ್ರಿಯೆ (browser)
B. ಸಂಕೇತಗಳನ್ನು ಪರಿವರ್ತಿಸಲು ಅಂತರ್ಜಾಲದಲ್ಲಿರುವ ಸಾಧನ (modem), ಅಂತರ್ಜಾಲ, ಮಾಹಿತಿ ಹುಡುಕುವ ಪ್ರಕ್ರಿಯೆ (browser) ಮತ್ತು ಶೋಧಕ ಯಂತ್ರ (serch engine)
C. ಸಂಕೇತಗಳನ್ನು ಪರಿವರ್ತಿಸಲು ಅಂತರ್ಜಾಲದಲ್ಲಿರುವ ಸಾಧನ (modem), ಅಂತರ್ಜಾಲ, ಮಾಹಿತಿ ಹುಡುಕುವ ಪ್ರಕ್ರಿಯೆ (browser) ಮತ್ತು ಮುದ್ರಕ
D. ಸಂಕೇತಗಳನ್ನು ಪರಿವರ್ತಿಸಲು ಅಂತರ್ಜಾಲದಲ್ಲಿರುವ ಸಾಧನ (modem), ಅಂತರ್ಜಾಲ ಮತ್ತು ಈ ಮೇಲ್ ಪ್ಯಾಕೇಜ್
ಉತ್ತರ:

124. ಲೈನಕ್ಸ್ (Linux), ಯುನಿಕ್ಸ್ (Unix), ವಿಂಡೋಸ್ ವಿಸ್ತಾ ಮತ್ತು ಮಾಕಿಂತೋಷ್ (Macintosh) ಇವುಗಳು ಇದಕ್ಕೆ ಉದಾಹರಣೆಯಾಗಿವೆ.
A. ವೆಬ್ ಸೈಟ್ ನಲ್ಲಿ ಮಾಹಿತಿ ಹುಡುಕುವ ಪ್ರಕ್ರಿಯೆ (Browser)
B. ಸಂಕಲನಕ (Compilers)
C. ಕಾರ್ಯಾಚರಣೆ ವ್ಯವಸ್ಥೆ (Operating System)
D. ಯುಟಿಲಿಟೀಸ್ (Utilities)
ಉತ್ತರ:

 
125. ಆಗಾಗ ನೋಡುವ ವೆಬ್ ಸೈಟ್ ವಿಳಾಸಗಳನ್ನು ಸಂಗ್ರಹಿಸಲು ಈ ಕೆಳಗಿನದರಲ್ಲಿ ಯಾವುದನ್ನು ಉಪಯೋಗಿಸಲಾಗುತ್ತದೆ.
A. ಸೇವ್
B. ಆರ್ಗನೈಝ್
C. ಬುಕ್ ಮಾರ್ಕ್
D. ರಿಕಾಲ್
ಉತ್ತರ:

126. ಸ್ಥಳೀಯ ಕ್ಷೇತ್ರ ಜಾಲ (LAN) ಇದರ ಮೂಲಕ ಈ ಕೆಳಗಿನ ಯಾವುದನ್ನು ಕಾರ್ಯಾಲಯದಲ್ಲಿ ಹಂಚಿಕೊಳ್ಳಬಹುದು.
A. ಮುದ್ರಕಗಳು/ಪ್ರಿಂಟರ್
B. ಕೇಂದ್ರೀಕೃತ ಅಥವಾ ಸಾಮಾನ್ಯ ಗಣಕದಲ್ಲಿರುವ ಕಡತ/ ಫೈಲ್ ಮತ್ತು ಫೋಲ್ಡರ್
C. ವ್ಯಕ್ತಿಗತ ಗಣಕದಲ್ಲಿರುವ ಫೈಲ್, ಫೋಲ್ಡರ್ ಗಳಲ್ಲಿ ಹಂಚಿಕೊಳ್ಲಬಹುದು ಎಂದು ಗುರುತಿಸಲ್ಪಟ್ಟಿರುವುದು
D. ಎಲ್ಲಾ ಫೈಲ್ ಗಳು ಮತ್ತು ಫೋಲ್ಡರ್ ಗಳು
ಉತ್ತರ:

127. ಆಗಾಗ ಉಪಯೋಗಿಸುವ ಫೈಲ್ ಗಳನ್ನು ಮತ್ತು ಅನ್ವಯಕಗಳನ್ನು ಸುಲಭವಾಗಿ ತೆರೆಯುವ ಉತ್ತಮ ವಿಧಾನ
A. ಡೆಸ್ಕ್ ಟಾಪ್ ನಲ್ಲಿ ಶಾರ್ಟ್ ಕಟ್ ಸೃಸ್ಠಿಸುವುದು
B. ವರ್ಡ್ ಡಾಕ್ಯೂಮೆಂಟ್ ನಲ್ಲಿ ಹೆಸರನ್ನು ಸಂಗ್ರಹಿಸುವುದು (ಸೇವ್)
C. ಅವುಗಳನ್ನು ಸದಾಕಾಲ ತೆರೆದಿಡುವುದು
D. ಮೇಲಿನ ಎಲ್ಲವೂ ಹೌದು
ಉತ್ತರ:

128. ಯಾವ ಕಂಪೆನಿಯು ತನ್ನ ವೈಯಕ್ತಿಕ ಕಂಪ್ಯೂಟರ್ ವಿಭಾಗವನ್ನು ಚೈನಾ ಆಧಾರಿತ ಕಂಪೆನಿಗೆ ಮಾರಿದೆ.
A. ವಿಪ್ರೋ
B. ಐ.ಬಿ.ಎಂ
C. ಡೆಲ್
D. ಹ್ಯುಲೆಟ್ ಪ್ಯಾಕರ್ಡ್
ಉತ್ತರ:

129. ಭೂಮಿ, ಬಾಲಾಶ್ರಮ ಮತ್ತು ಮುಖ್ಯವಾಹಿನಿ ಇವುಗಳೆಲ್ಲಾ
A. ಕರ್ನಾಟಕದ ಗ್ರಾಮೀಣ ಅಭಿವೃದ್ದಿ ಯೋಜನೆಗಳು
B. ಇ-ಕಾರುಬಾರು ಯೋಜನೆಗಳು ಕರ್ನಾಟಕದಲ್ಲಿರುವಂತಹವು
C. ವಿಶ್ವಬ್ಯಾಂಕ್ ನಿಂದ ಹಣಕಾಸು ಪಡೆದ ಯೋಜನೆಗಳು
D. ಮಕ್ಕಳ ಸಹಾಯವಾಣಿ
ಉತ್ತರ:

130. raja@yahoo.com ಮತ್ತು raja@gmail.com
A. ಇವು ಒಬ್ಬರದೇ ಆದ ಎರಡು ID ಗಳು
B. ಈ ಮೇಲ್ ಸೇವೆ ನೀಡುವ ಸಂಸ್ಥೆಗಳು ಉಚಿತವಾಗಿ ಆರಂಭಿಸಿರುವ ID ಗಳು, ಒಬ್ಬರಿಗೇನೇ ಇರಬಹುದು
C. ಎರಡು ಬೇರೆ ಬೇರೆ ಸರ್ವರ್ ಗಳಿಂದ ಆರಂಭಿಸಲ್ಪಟ್ಟ ವೆಬ್ ಸೈಟ್ ಗಳು
D. ಇವು ಯಾವುವೂ ಅಲ್ಲ.
ಉತ್ತರ:

131. ಒಂದು ಈ ಮೇಲ್ ID ಇಂದ ಅನುಪಯುಕ್ತ ಮೇಲ್ ಗಳು ಬಹಳ ಬರುತ್ತಿದ್ದರೆ, ನೀವು ಸುಲಭವಾಗಿ ಇದರಿಂದ ಮುಕ್ತರಾಗಲು;
A. ಮೇಲ್ ಕಳಿಸುವವರ ID ಯನ್ನು ಬ್ಲಾಕ್ಡ್ ಸೆಂಡರ್ಸ್ ಲೀಸ್ಟ್ ಗೆ ಸೇರಿಸಿರಿ
B. ಸೈಬರ್ ಅಪರಾಧ ವಿಭಾಗಕ್ಕೆ ದೂರು ನೀಡಿ
C. ಈಮೇಲ್ ಬರುತ್ತಿದ್ದಂತೆ ತೆಗೆದುಹಾಕಿ
D. ತಕ್ಷಣವೇ ಗಣಕ ಯಂತ್ರವನ್ನು ಆರಿಸಿಬಿಡಿ
ಉತ್ತರ:

132. ನೀವು ಹತ್ತು ಜನರಿಗೆ ಒಂದು ಮೇಲ್ ಶೀಘ್ರವಾಗಿ ಕಳಿಸಬೇಕಾಗಿದ್ದು, ಅದರಲ್ಲಿ ಒಬ್ಬರ ವಿಳಾಸ ಇನ್ನೊಬ್ಬರಿಗೆ ತಿಳಿಯಬಾರದೆಂದರೆ ಹೀಗೆ ಮಾಡಬೇಕು
A. ಪ್ರತಿಯೊಬ್ಬರಿಗೂ ಬೇರೆ ಬೇರೆಯ ಈಮೇಲ್ ಕಳುಹಿಸಿ
B. ನಿಮಗೆ ನೀವೇ ಒಂದು ಈಮೇಲ್ ಕಳಿಸಿಕೊಂಡು ಹತ್ತು ಜನರಿಗೆ CC ಹಾಕಿರಿ
C. ನಿಮಗೆ ನೀವೇ ಒಂದು ಈಮೇಲ್ ಕಳಿಸಿಕೊಂಡು ಹತ್ತು ಜನರಿಗೆ BCC ಹಾಕಿರಿ
D. ಈಮೇಲ್ ಮುದ್ರಿಸಿ ಮತ್ತು ಅಂಚೆ ಸೇವೆಯನ್ನು ಉಪಯೋಗಿಸಿ
ಉತ್ತರ:

133. pdf ಅಟ್ಯಾಚ್ ಮೆಂಟ್ ಅನ್ನು ತೆರೆಯಲು ಯಾವ ಸಾಫ್ಟ್ ವೇರ್ ಉಪಯೋಗಿಸಬೇಕು
A. ಎಂ.ಎಸ್.ವರ್ಡ್
B. ಅಕ್ರೋಬ್ಯಾಟ್ ರೀಡರ್
C. ಎಂ.ಎಸ್.ಪವರ್ ಪಾಯಿಂಟ್
D. ಎಂ.ಎಸ್.ಔಟ್ ಲುಕ್
ಉತ್ತರ:

134. ಯಾವಾಗ ನಾವು ಇತರರಿಗೆ ಕಳಿಸಿದ ಈಮೇಲ್ 'ಬೌನ್ಸ್' ಆಗುತ್ತದೆ (ಹಿಂತಿರುಗುತ್ತದೆ)?
A. ಈಮೇಲ್ ವಿಳಾಸ ಸರಿ ಇಲ್ಲದಿದ್ದಾಗ
B. ಸ್ವೀಕರಿಸುವವರ ಈಮೇಲ್ ಬಾಕ್ಸ್ ತುಂಬಿರುವಾಗ
C. ಸ್ವೀಕರಿಸುವವರ ಮೇಲ್ ಸರ್ವರ್ ಕೆಲಸ ಮಾಡದಿರುವಾಗ
D. ಮೇಲಿನ ಎಲ್ಲವೂ ಹೌದು
ಉತ್ತರ:

135. ವರ್ಡ್ ಡಾಕ್ಯುಮೆಂಟ್ ನಲ್ಲಿ ಕಡತವನ್ನು ಬೆರಳಚ್ಚು ಮಾಡುವಾಗ ಕೆಂಪು ಗುಂಗುರೀದ ಗೆರೆ ಕಂಡರೆ ನೀವು....
A. ಮುಂದಿನ ಸಾಲಿಗೆ ಆ ಪದವನ್ನು ಸೇರಿಸಬೇಕು
B. ಕಾಗುಣಿತವನ್ನು ಪರೀಕ್ಷಿಸಿ
C. ವ್ಯಾಕರಣವನ್ನು ಪರೀಕ್ಷಿಸಿ
D. ಆ ಪದವನ್ನು ಅಳಿಸಿಹಾಕಿ ಬೆರಳಚ್ಚು ಮಾಡುವುದನ್ನು ಮುಂದುವರೆಸಿ
ಉತ್ತರ:

136. ದೊಡ್ಡದಾದ ಡಾಕ್ಯುಮೆಂಟ್ ಅನ್ನು ಟೈಪ್ ಮಾಡಿದ ನಂತರ ನೀವು ನಡುವಿನ ಒಂದು ಪದವನ್ನು ಶೀಘ್ರವಾಗಿ ನೋಡಲು/ಹುಡುಕಲು ನೀವು ಈ ಕೀಲಿಗಳನ್ನು ಉಪಯೋಗಿಸಬೇಕು
A. ಪೇಜ್ ಆಫ್ ಮತ್ತು ಪೇಜ್ ಡೌನ್ ಕೀಲಿಗಳನ್ನು ಒತ್ತಿ ಮತ್ತು ಡಾಕ್ಯುಮೆಂಟ್ ನಲ್ಲಿ ಪದವನ್ನು ನೋಡಬಹುದು
B. ಕಂಟ್ರೋಲ್ (ctrl) + ಎಫ್ (F) ಕೀಲಿಗಳನ್ನು ಒಟ್ಟಿಗೆ ಒತ್ತಬೇಕು
C. ಕಂಟ್ರೋಲ್ (ctrl) + ಎಸ್ (S) ಕೀಲಿಗಳನ್ನು ಒಟ್ಟಿಗೆ ಒತ್ತಬೇಕು
D. ಆಲ್ಟ್ (alt) + ಎಫ್ (f) ಕೀಲಿಗಳನ್ನು ಒಟ್ಟಿಗೆ ಒತ್ತಬೇಕು
ಉತ್ತರ:

137. ವರ್ಡ್ ಡಾಕ್ಯುಮೆಂಟ್ ನಲ್ಲಿ ಯಾವ ತರಹದ ವಸ್ತುಗಳನ್ನು ಅಳವಡಿಸಬಹುದು
A. ವೀಡಿಯೋ ಮತ್ತು ಆಡಿಯೋ ಕಡತಗಳು (ದೃಶ್ಯ ಮತ್ತು ಶ್ರಾವ್ಯ ಕಡತಗಳು)
B. ಚಿತ್ರಗಳು ಮತ್ತು ಚಿಹ್ನೆಗಳು/ಸಂಕೇತಗಳು
C. ಚಾರ್ಟ್ ಮತ್ತು ಪಟ್ಟಿ/ಕೋಷ್ಟಕಗಳು
D. B ಮತ್ತು C ಮಾತ್ರ
ಉತ್ತರ:

138. ವರ್ಡ್ ಅಪ್ಲಿಕೇಶನ್ ನಿಂದ ಡಾಕ್ಯುಮೆಂಟ್ ಅನ್ನು ಈಮೇಲ್ ಮಾಡಬೇಕಾದಲ್ಲಿ
A. ಫೈಲ್ ಗೆ ಹೋಗಿ/ ಸೆಂಡ್ ಟು / ಮೇಲ್ ರೆಸಿಪಿಯೆಂಟ್ ಮಾಡಿರಿ
B. ಫೈಲ್ ಅನ್ನು ಈಮೇಲ್ ಅಟ್ಯಾಚ್ ಮೆಂಟ್ ಆಗಿ ಸೇವ್ ಮಾಡಿ
C. ಎಂ.ಎಸ್.ಔಟ್ ಲುಕ್ ತೆಗೆದು ವರ್ಡ್ ಡಾಕ್ಯುಮೆಂಟ್ ತೆರೆದಿರುವಾಗಲೇ ಅಟ್ಯಾಚ್ ಮಾಡಿರಿ
D. ಈ ಕಾರ್ಯಾಚರಣೆ ಸಾಧ್ಯವಿಲ್ಲ
ಉತ್ತರ:

139. ಸ್ಪ್ರೆಡ್ ಶೀಟ್ ನ 7 ಮತ್ತು 8 ನೇ ಸಾಲಿನ ನಡುವೆ ಮತ್ತೊಂದು ಸಾಲನ್ನು ಸೇರಿಸಿದಾಗ
A. ಅದಕ್ಕೆ ಹೊಸ ಸಾಲಿನ ಸಂಖ್ಯೆ ಇರುವುದಿಲ್ಲ
B. 7ನೇ ಸಾಲು ಆಗಿರುತ್ತದೆ
C. 7.5ನೇ ಸಾಲು ಆಗಿರುತ್ತದೆ.
D. 8ನೇ ಸಾಲು ಆಗಿರುತ್ತದೆ
ಉತ್ತರ:

140. 75% ಎಂಬುದನ್ನು A5 ಸೆಲ್ ನಲ್ಲಿ ನಮೂದಿಸಲು, ನೀವು ಮಾಡಬೇಕಾದುದು
A. A5 ನಲ್ಲಿ 75 ಟೈಪ್ ಮಾಡಿ ನಂತರ % ಚಿಹ್ನೆ ಒತ್ತಬೇಕು
B. A5 ನಲ್ಲಿ 0075 ಟೈಪ್ ಮಾಡಿ ನಂತರ % ಚಿಹ್ನೆ ಒತ್ತಬೇಕು
C. A5 ನಲ್ಲಿ .75 ಟೈಪ್ ಮಾಡಿ ನಂತರ % ಚಿಹ್ನೆ ಒತ್ತಬೇಕು
D. A5 ನಲ್ಲಿ 75/100 ಟೈಪ್ ಮಾಡಿ
ಉತ್ತರ:

141. A1 ಸೆಲ್ ನಲ್ಲಿ ಜನವರಿ 15 ಎಂದು ಟೈಪ್ ಮಾಡಿ A5 ವರೆಗೆ ಎಳೆದಾಗ ನಿಮಗೆ ಇದು ಸಿಗುತ್ತದೆ.
A. ಜನವರಿ 15, ಫೆಬ್ರವರಿ 15, ಮಾರ್ಚ್ 15, ಏಪ್ರಿಲ್ 15, ಮೇ 15
B. ಜನವರಿ 15, ಜನವರಿ 16, ಜನವರಿ 17, ಜನವರಿ 18, ಜನವರಿ 19
C. ಜನವರಿ 15, ಫೆಬ್ರವರಿ 16, ಮಾರ್ಚ್ 17, ಏಪ್ರಿಲ್ 18, ಮೇ 19
D. ಜನವರಿ 15, ಜನವರಿ 15, ಜನವರಿ 15, ಜನವರಿ 15, ಜನವರಿ 15
ಉತ್ತರ:

142. ಶೀಘ್ರವಾಗಿ ಒಂದು ಸಾಲಿನ ಕಾಲಂನ ಸಂಖ್ಯೆಗಳ ಮೊತ್ತವನ್ನು ಪಡೆಯಲು, ಕಾಲಂ ಕೆಳಗಿರುವ ಸೆಲ್ಲನ್ನು ಒತ್ತಿದ ನಂತರ
A. ಡಾಟಾ ಮೆನುವಿನಲ್ಲಿರುವ ಸಬ್ ಟೋಟಲ್ ಒತ್ತಬೇಕು
B. ಫಾರ್ಮುಲಾ ಬಾರ್ ನಲ್ಲಿರುವ ಮೊತ್ತದ ಸೂಚಕವನ್ನು ನೋಡಬೇಕು
C. ಸ್ಟ್ಯಾಂಡರ್ಡ್ ಟೂಲ್ ಬಾರ್ ನಲ್ಲಿರುವ ಆಟೋಸಮ್ ಒತ್ತಿ ನಂತರ ಎಂಟರ್ ಒತ್ತಬೇಕು
D. ಈ ಮೇಲಿನವು ಯಾವುವೂ ಅಲ್ಲ
ಉತ್ತರ:

143. A6 ನೇ ಸೆಲ್ ನಲ್ಲಿ ಪೂರ್ಣ ಸಂಬಳವಿದ್ದು, B6 ಸೆಲ್ ನಲ್ಲಿ ಕಡಿತಗಳಿದ್ದು, C6 ಸೆಲ್ ನಲ್ಲಿ ನಿವ್ವಳ ಸಂಬಳ ಪಡೆಯಲು, C6 ಸೆಲ್ ನಲ್ಲಿ ಯಾವ ಫಾರ್ಮುಲಾ ಟೈಪ್ ಮಾಡಬೇಕು.
A. A6-B6
B. (A6-B6)
C. -A6-B6
D. =A6-B6
ಉತ್ತರ:

144. ಆಕ್ಸೆಸ್ ನಲ್ಲಿರುವ ಫೈಲ್ ಗೆ ಈ ಎಕ್ಸ್ ಟೆನ್ ಷನ್ ಇರುತ್ತದೆ
A. .adp
B. .xml
C. .mdb
D. .acc
ಉತ್ತರ:

145. ಹತ್ತು ಅಕ್ಷರಗಳನ್ನು ಮುದ್ರಿಸುವ ಸೆಲ್ ನಲ್ಲಿ 16 ಅಕ್ಷರಗಳನ್ನು ಮುದ್ರಿಸಿದರೆ (ಟೈಪ್ ಮಾಡಿದರೆ)
A. ಆ ಪದವು ದೊಡ್ಡದಾಗಿದೆ ಎಂಬ ದೋಷದ ಸಂದೇಶ ಬರುತ್ತದೆ.
B. ಕೇವಲ ಹತ್ತು ಅಕ್ಷರಗಳು ಮಾತ್ರ ಸೆಲ್ ನಲ್ಲಿ ಗೋಚರವಾಗುತ್ತವೆ.
C. ಎಲ್ಲಾ 16 ಅಕ್ಷರಗಳೂ ಕಾಣಿಸುತ್ತವೆ ಆದರೆ 6 ಅಕ್ಷರಗಳು ಮುಂದಿನ ಸೆಲ್ ನಲ್ಲಿರುವಂತೆ ಕಾಣಿಸುತ್ತವೆ.
D. ಕಡೆಯ 6 ಅಕ್ಷರಗಳು ಕಡಿತಗೊಂಡು ಮುಂದಿನ ಸೆಲ್ ನಲ್ಲಿರುತ್ತವೆ.
ಉತ್ತರ:

146. ಪವರ್ ಪಾಯಿಂಟ್ ಪ್ರೆಸೆಂಟೇಶನ್ ಗಳು ಇವುಗಳಿಂದ ಮಾಡಲ್ಪಟ್ಟಿವೆ
A. ಫ್ರೇಮ್ಸ್
B. ಸ್ಕ್ರೀನ್ಸ್
C. ಪೇಜಸ್
D. ಸ್ಲೈಡ್ಸ್
ಉತ್ತರ:

147. ಪವರ್ ಪಾಯಿಂಟ್ ನಲ್ಲಿ ಸ್ಪೆಲ್ ಚೆಕ್ ಎಂಬುದು ಇದರಲ್ಲಿರುತ್ತದೆ.
A. ಹೋಂ ಮೆನುವಿನಲ್ಲಿರುತ್ತದೆ
B. ಸ್ಲೈಡ್ ಷೋ ಮೆನುವಿನಲ್ಲಿರುತ್ತದೆ
C. ರೆವ್ಯು ಮೆನುವಿನಲ್ಲಿರುತ್ತದೆ
D. ಎಲ್ಲೂ ದೊರೆಯುವುದಿಲ್ಲ
ಉತ್ತರ:

148. ಒಂದು ಸೆಟ್ ಸ್ಲೈಡನ್ನು ಸೃಷ್ಠಿಸಿದ ನಂತರ ಅವುಗಳ ವರ್ಣಸಂಕುಲವನ್ನು (colour combination) ಬದಲಿಸಬೇಕಾದಲ್ಲಿ
A. ಪ್ರತಿ ಸ್ಲೈಡ್ ನ ವರ್ಣ ಸಂಕುಲವನ್ನು ಬದಲಿಸಬೇಕು
B. ಡಿಸೈನ್ ಟೆಂಪ್ಲೇಟ್ಸ್ ನಿಂದ ವರ್ಣಸಂಕುಲವನ್ನು ಆಯ್ದುಕೊಳ್ಳಬಹುದು
C. ಪೇಜ್ ಸೆಟ್ ಅಪ್ ಅನ್ನು ಉಪಯೋಗಿಸಬಹುದು
D. ಇವು ಯಾವುವೂ ಸಾದ್ಯವಿಲ್ಲ.
ಉತ್ತರ:

149. ಪವರ್ ಪಾಯಿಂಟ್ ಪ್ರೆಸೆಂಟೇಶನ್ ನಲ್ಲಿ ಸ್ಲೈಡ್ ಸಂಖ್ಯೆಗಳು
A. ತಾನಾಗಿಯೇ ವ್ಯಕ್ತವಾಗಿ ಕಾಣುತ್ತವೆ
B. ಪ್ರತಿ ಸ್ಲೈಡ್ ನ ನಂತರ ನಾವು ಸ್ವತಃ ನಮೂದಿಸಬೇಕು
C. ಫೂಟರ್ ಆಯ್ಕೆಯ ಮೂಲಕ ಎಲ್ಲಾ ಸ್ಲೈಡ್ ಗಳಿಗೆ ಸೇರಿಸಬಹುದು
D. ನಮೂದಿಸಲು ಸಾಧ್ಯವಿಲ್ಲ
ಉತ್ತರ:

150. ಪೇಸ್ಟ್ ಮತ್ತು ಪೇಸ್ಟ್ ಸ್ಪೆಷಲ್ ನ ವ್ಯತ್ಯಾಸವೇನೆಂದರೆ...
A. ಪೇಸ್ಟ್ ಎಂಬುದನ್ನು ಪದಗಳಿಗೆ ಮಾತ್ರ ಉಪಯೋಗಿಸಬಹುದು ಆದರೆ ಪೇಸ್ಟ್ ಸ್ಪೆಷಲ್ ಎಂಬುದನ್ನು ಹಲವಾರು ಡಾಟಾಗಳಿಗೆ ಉಪಯೋಗಿಸಬಹುದು.
B. ಪೇಸ್ಟ್ ಅನ್ನು ಸಮ ಪ್ರಮಾಣದ (exact) ಪದಗಳನ್ನು ಕಾಪಿ ಮಾಡಲು ಉಪಯೋಗಿಸಬುದು ಆದರೆ ಪೇಸ್ಟ್ ಸ್ಪೆಷಲ್ ಅನ್ನು ಪೂರ್ಣವಾಗಿ ಅದರ ರೂಪವನ್ನು (format) ಬದಲಿಸಲು ಉಪಯೋಗಿಸಬಹುದು.
C. ಪೇಸ್ಟ್ ಅನ್ನು ಯಾವುದೇ ಒಂದು ಅಪ್ಲಿಕೇಶನ್ ನಲ್ಲಿ ಉಪಯೋಗಿಸಬಹುದು ಆದರೆ ಪೇಸ್ಟ್ ಸ್ಪೆಷಲ್ ಅನ್ನು ಒಂದು ಅಪ್ಲಿಕೇಶನ್ ನಿಂದ ಇತರ ಅಪ್ಲಿಕೇಶನ್ ಗಳಿಗೆ ಡಾಟಾ ಕಾಪಿ ಮಾಡಲು ಉಪಯೋಗಿಸಬಹುದು.
D. ಮೇಲಿನ ಎಲ್ಲವೂ ಹೌದು
ಉತ್ತರ:






: ವಿವರಣಾತ್ಮಕ ಉತ್ತರಗಳು :


ಉತ್ತರ ವಿವರಣೆ
1.
2.
3.
4.
5.
6.
7.
8.
9.
10.
11.
12.
13.
14.
15.
16.
17.
18.
19.
20.
21.
22.
23.
24.
25.
26.
27.
28.
29.
30.
31.
32.
33.
34.
35.
36.
37.
38.
39.
40.
41.
42.
43.
44.
45.
46.
47.
48.
49.
50.
51.
52.
53.
54.
55.
56.
57.
58.
59.
60.
61.
62.
63.
64.
65.
66.
67.
68.
69.
70.
71.
72.
73.
74.
75.
76.
77.
78.
79.
80.
81.
82.
83.
84.
85.
86.
87.
88.
89.
90.
91.
92.
93.
94.
95.
96.
97.
98.
99.
100.
101.
102.
103.
104.
105.
106.
107.
108.
109.
110.
111.
112.
113.
114.
115.
116.
117.
118.
119.
120.
121.
122.
123.
124.
125.
126.
127.
128.
129.
130.
131.
132.
133.
134.
135.
136.
137.
138.
139.
140.
141.
142.
143.
144.
145.
146.
147.
148.
149.
150.






.

7 comments:

Anilvdevang said...

It would be better to have answers for all questions

chandru said...

answer madi sir.......

Unknown said...

Hello sir i want answers for all the questions sir

Unknown said...

Dear all,

Kindly provide the answers

Regards
Nishmitha

Unknown said...

Sir kindly update the answers and do the needful.

Unknown said...

PDO ಪರೀಕ್ಷಾರ್ಥಿಗಳಿಗೆ ಸಿಹಿ ಸುದ್ದಿ. ರಾಶಿ ಪ್ರಕಾಶನವು ಪತ್ರಿಕೆ-2 ಗೆ ಉಪಯುಕ್ತವಾದ ಅಧ್ಯಯನ ಸಾಮಗ್ರಿಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದೆ. ಸಿಲಬಸ್ ಪ್ರಕಾರ ಪಂಚಾಯತ್ ರಾಜ್ಯ ವ್ಯವಸ್ಥೆಗೆ ಸಂಬಂಧಿಸಿದ ಸಮಗ್ರಿ ಮಾಹಿತಿಯನ್ನು ನೀಡಲಾಗಿದೆ. ಇದರ ಬೆಲೆ ಕೇವಲ 150 ರೂ.
ಪುಸ್ತಕದ ಪ್ರತಿಗಳಿಗಾಗಿ ಸಂಪರ್ಕಿಸಿ: ಶೀಲಾ ಭಟ್- 9483082558

Unknown said...

I want this book man please send complete details.my num 7760239092

Post a Comment